ತಾಳಿ ಕಟ್ಟಿದವನಿಗೆ ಚಟ್ಟ ಕಟ್ಟಲು ಮಡದಿಯ ಸ್ಕೆಚ್.. ಮುಂದೆ ಏನಾಯ್ತು..?


ಆತ ಪ್ರೀತಿಸಿ ಮದುವೆಯಾಗಿದ್ದ. ಮುಂದೆ ತಾವಿಬ್ಬರು ತಮಗಿಬ್ಬರು ಎಂದು ಜೀವನ ನಡೆಸುತ್ತಿದ್ರು. ಆದ್ರೆ ಸ್ಕೂಲ್​​ನಲ್ಲಿದ್ದ ತನ್ನ ಮಕ್ಕಳನ್ನ ಕರ್ಕೊಂಡು ಬರಲು ಹೋಗಿದ್ದ ಮನೆಯೊಡೆಯ ಅಂದು ಬೀದಿಯಲ್ಲಿ ಹೆಣವಾಗಿದ್ದ. ಜಮೀನಿನ ಜಿದ್ದಿಲ್ಲ.. ಯಾರ ಜೊತೆಗೂ ವೈರತ್ವ ಇಲ್ಲ. ಆದರೂ ಮನೆಯೊಡೆಯನ್ನ ಹಂತಕರು ಭೀಕರವಾಗಿ ಹತ್ಯೆ ಮಾಡಿದ್ದರು. ಕಳೆದ ತಿಂಗಳು ಹಾಸನವೇ ಹೈರಣಾಗುವಂತೆ ನಡೆದಿದ್ದ ಈ ಭೀಕರ​ ಮರ್ಡರ್​ ಕೇಸ್​ಗೆ ಇದೀಗ ಬಿಗ್ ಟ್ವಿಸ್ಟ್​ ಸಿಕ್ಕಿದೆ.

ಹಾವಿಗೆ ಹಾಲೆರೆದು ಪಕ್ಕದಲ್ಲೇ ಮಲಗಿಸಿದ್ರೆ ಕಚ್ಚದೇ ಇರುತ್ತಾ..?ಖಂಡಿತ ಇಲ್ಲ. ಮಗ್ಗುಲಲ್ಲೇ ಇರುವ ಮುಳ್ಳು ಒಂದಲ್ಲ ಒಂದು ದಿನ ಚುಚ್ಚದೇ ಇರುತ್ತಾ..? ಸಾಧ್ಯನೇ ಇಲ್ಲ. ಇವತ್ತು ನಾವು ಈ ಮಾತು ಹೇಳಲು ಪ್ರಮುಖ ಕಾರಣ ಕೂಡ ಇದೆ. ಈ ಮಾತಿನ ಒಳ ಅರ್ಥ ನಿಮಗೆ ಅರ್ಥವಾಗಬೇಕಾದ್ರೆ ನೀವು ಕಳೆದ ತಿಂಗಳು ಹಾಸನದಲ್ಲಿ ನಡೆದಿದ್ದ ಅದೊಂದು ಮರ್ಡರ್ ಮಿಸ್ಟ್ರಿಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು.

ಅದು ಜನವರಿ 31 ರ ಸೋಮವಾರ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಸೂರಿನ ಹತ್ತಿರ ವ್ಯಕ್ತಿಯೊಬ್ಬನ ಹೆಣ ರಸ್ತೆಯ ಪಕ್ಕ ಬಿದ್ದಿತ್ತು. ಬೈಕ್​​​ ಬಳಿ ಬಿದಿದ್ದ ಮೃತದೇಹವನ್ನ ನೋಡಿ ಗಾಬರಿಗೊಂಡ ಗ್ರಾಮಸ್ಥರು, ಸ್ಥಳೀಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಾಥಮಿಕ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಈ ವೇಳೆ ಹತ್ಯೆಯಾಗಿದ್ದು ಆನಂದ್​ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಹತ್ಯೆಯಾದ ಆನಂದ್​ ಇದೇ ಚನ್ನರಾಯಪಟ್ಟಣದ ನಿವಾಸಿ. ಈ ಆನಂದ್​​ 18 ವರ್ಷಗಳ ಹಿಂದೆ ಆನಂದದಿಂದಲೇ ಸುನಿತಾ ಎಂಬುವವರನ್ನ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು. ಇಬ್ಬರು ಮಕ್ಕಳು ಕೂಡ ಸ್ಕೂಲ್​ಗೆ ಹೋಗುತ್ತಿದ್ದರು. ಅದರಂತೆ ಆನಂದ್​ ಜನವರಿ 31 ರ ಸೋಮವಾರ ಸ್ಕೂಲ್​ಗೆ ಹೋಗಿದ್ದ ತನ್ನ ಮಕ್ಕಳನ್ನ ಕರೆ ತರಲು ತನ್ನ ಬೈಕ್​ನಲ್ಲಿ ಹೊರಟ್ಟಿದ್ದ. ಬೈಕ್​ನಲ್ಲಿ ತೆರಳುತ್ತಿದ್ದ ಆನಂದ್​ರನ್ನ ಕಾವಲು ಹೊಸೂರು ಗೇಟ್​ ಬಳಿ ಅಪರಿಚಿತರಿಬ್ಬರು ಅಡ್ಡಗಟ್ಟಿದ್ರು. ಏಕಾ ಏಕಿ ಆನಂದ್​​ ತಲೆಗೆ ಭೀಕರವಾಗಿ ದೊಣ್ಣೆಯಿಂದ ಅಟ್ಯಾಕ್ ಮಾಡಿದ್ರು. ಹಂತಕರ ಕೈಯಿಂದ ಬೀಸಿ ಬಂದ ದೊಣ್ಣೆಯ ಏಟಿಗೆ ಆನಂದ್​ ಸ್ಥಳದಲ್ಲೇ ಕುಸಿದು ಬಿದ್ದಿದ್ರು. ಇಲ್ಲೇನಾಗ್ತಿದೆ ಅನ್ನೋದು ಗೊತ್ತಾಗುವ ಮೊದಲೇ ಆನಂದ್​​ ಉಸಿರು ಚೆಲ್ಲಿದ್ದರು.

ಆನಂದ್​

ಹಾಗಾದರೇ ಹತ್ಯೆಯಾಗಿದ್ದ ಈ ಆನಂದ್​ ಯಾರು.? ಆನಂದ್​​ ಹಂತಕರು ಯಾರು..? ಹಂತಕರಿಗೇಕೆ ಈ ಆನಂದ್​ ಮೇಲೆ ಅಷ್ಟೊಂದು ಸಿಟ್ಟು..? ಹೀಗೆ ವಿವಿಧ ಆ್ಯಂಗಲ್​ನಲ್ಲಿ ಪೊಲೀಸರು ತನಿಖೆ ನಡೆಸುತ್ತಾರೆ. ಈ ವೇಳೆ ಪೊಲೀಸರಿಗೆ ಆನಂದ್​ಗೆ ಜಮೀನಿನ ಜಿದ್ದಾಗಲಿ, ಯಾರ ಜೊತೆ ವೈರತ್ವವಾಗಲಿ ಇಲ್ಲ ಅನ್ನೋದು ಗೊತ್ತಾಗಿದೆ. ಇದರಿಂದ ಪೊಲೀಸರ ತನಿಖೆಯ ದೃಷ್ಟಿ ನೇರವಾಗಿ ನೆಟ್ಟಿದ್ದು ಆನಂದ್​ ಮಡದಿಯ ಮೇಲೆ. ಮುಂದೆ ತೆರೆದುಕೊಂಡಿದ್ದು ಪ್ರಣಯ ಗೀತೆ.

ಗಂಡ ಬೋರು ಬೋರು, ಸಂಸಾರ ನುಚ್ಚು ನೂರು..!
ತಾಳಿ ಕಟ್ಟಿದವನಿಗೆ ಚಟ್ಟ ಕಟ್ಟಲು ಮಡದಿಯ ಸ್ಕೆಚ್..!

ಇದು ತಾಳಿ ಕಟ್ಟಿದ ಪತಿಗೆ ಪತ್ನಿಯೇ ಚಟ್ಟ ಕಟ್ಟಿಸಿದ ರಿಯಲ್​ ಸ್ಟೋರಿ. ಈ ಇಡೀ ಸ್ಟೋರಿಯ ಖಳನಾಯಕಿ ಬೇರೆ ಯಾರು ಅಲ್ಲ.. ಇಲ್ಲಿ ಹೀಗೆ ಪೊಲೀಸರ ಸುಪರ್ದಿಯಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿಕೊಂಡು ಬರ್ತಿರುವ ಇದೇ ನಾರಿನೇ ನೋಡಿ ಈ ಮರ್ಡರ್​​ ಮಿಸ್ಟ್ರಿಯ ಮಾಸ್ಟರ್​ಮೈಂಡ್​.ಅಷ್ಟಕ್ಕೂ ಯಾರು ಈ ಪ್ರಳಯಾಂತಕಿ ಅನ್​ಕೊಂಡ್ರಾ..? ಈಕೆ ಬೇರೆ ಯಾರು ಅಲ್ಲ. ಕೊಲೆಯಾದ ಇದೇ ಆನಂದ್​ ಮಡದಿ. ಪ್ರೀತಿಸಿ ಮದುವೆಯಾಗಿ ನಿನಗೆ ಜೊತೆಯಾಗಿ ಇರುತ್ತೇನೆ ಎಂದೂ ಬಂದಿದ್ದ ಜೊತೆಗಾರ್ತಿ.

ಒಂದು ಬಾರಿ ಸ್ಕೆಚ್​ ಮಿಸ್, ಎರಡನೇ ಬಾರಿ ಫಿನಿಷ್
ಗಂಡನ ಹತ್ಯೆಗೆ ಮಡದಿಯೇ ಹಂತಕರಿಗೆ ಫೈನಾನ್ಸ್​..!

ಅಬ್ಬಬ್ಬಾ.. ಗಂಡನ ಮೇಲೆ ಈ ಸುಪಾರಿ ಸುನಿತಾಗೆ ಅದೇನು ದ್ವೇಷ ನೋಡಿ. ಒಂದಲ್ಲ .. ಎರಡು ಬಾರಿ ತಾಳಿ ಕಟ್ಟಿದ್ದ ಪತಿಯನ್ನೇ ಹತ್ಯೆಗೈಯಲು ಸ್ಕೆಚ್ ಹಾಕಿದ್ದಾಳೆ. ಈಕೆಯ ಈ ದ್ವೇಷಕ್ಕೆ ಕಾರಣ ಏನು ಅನ್ನೋದನ್ನ ಹೇಳ್ತೀವಿ. ಪೊಲೀಸರ ಸುಪರ್ದಿಯಲ್ಲಿ ಸುನಿತಾ ರಾಜಗಾಂಭೀರ್ಯತೆಯಿಂದ ಹೆಜ್ಜೆ ಹಾಕ್ತಿದ್ರೆ, ಈಕೆಯ ಪಕ್ಕದಲ್ಲಿ ಸಪ್ಪಗೆ ಮುಖ ಮಾಡ್ಕೊಂಡು ನಿಂತಿರುವ ಈ ದಪ್ಪಗಿನ ಮನುಷ್ಯನೇ ಈ ಸುನಿತಾಳ ಸ್ನೇಹಿತ. ಹೆಸರು ಸಬ್ಸಿಡಿ ನವೀನ. ಈ ಎರಡು ಫೇಸ್​​ಕಟ್​ಗಳನ್ನ ಮೊದಲೂ ನಿಮ್ಮ ಮನದಲ್ಲಿ ನೀಟಾಗಿ ರಿಜಿಸ್ಟರ್ ಮಾಡಿಕೊಂಡುಬಿಡಿ.

ಈ ಹಂತಕಿ ಸುನಿತಾ ಕೆಲ ತಿಂಗಳಿಂದ ನುಗ್ಗೇಹಳ್ಳಿಯ ಯೋಗ ಕ್ಲಾಸ್‌ಗೆ ಹೋಗುತ್ತಿದ್ದಳು. ಯೋಗ ತರಗತಿಯಲ್ಲಿ ಅದ್ಯಾವಾ ಯೋಗ ಕಲಿತಳು ಅನ್ನೋದು ಈ ಸುನಿತಾಳಿಗಷ್ಟೇ ಗೊತ್ತು ಬಿಡಿ. ಯೋಗ ಕ್ಲಾಸ್​​ಗೆ ಹೋಗ್ತಿದ್ದ ಸುನಿತಾಗೆ ಕ್ಲಾಸ್​ನಲ್ಲಿ ಪರಿಚಯವಾಗಿದ್ದು, ಇದೇ ನವೀನ್ ಅಲಿಯಾಸ್ ಸಬ್ಸಿಡಿ ನವೀನ್ . ಯಾವಾಗ ನವೀನ್​ ಹತ್ತಿರವಾಗಲು ಶುರುವಾದನೋ ಈ ಸುನಿತಾಗೆ ಗಂಡ ಬೋರ್​ ಆಗಿ ಬಿಟ್ಟಿದ್ದ. ಎಲ್ಲಿಯವರೆಗೆ ಅಂದರೇ ತನಗೆ ಮದುವೆಯಾಗಿದೇ ಅನ್ನೋದು ಕೂಡ ಮರೆತೇ ಹೋಗಿತ್ತು ಅನ್ಸುತ್ತೆ. ನವೀನ್​ ಗೆಳೆತನದ ಎದುರು ತನ್ನ ಮಕ್ಕಳು, ಸಂಸಾರ ಎಲ್ಲವೂ ಈಕೆಗೆ ಶೂನ್ಯವಾಗಿತ್ತು. ನವೀನ್​ ಹಾಗೂ ಸುನಿತಾ ನಡುವೆ ಟಾಕಿಂಗ್, ಚಾಟಿಂಗ್ ಮಾತ್ರವಲ್ಲ ಆಗೊಮ್ಮೆ ಹೀಗೊಮ್ಮೆ ಮೀಟಿಂಗ್​ ಕೂಡ ನಡೆಯುತ್ತಿತ್ತು.

ಇದೇ ತೋಟದ ನಡುವೆನೇ ಇವರ ಮೀಟಿಂಗ್ ಸ್ಟಾಟ್. ಒಂದು ದಿನ ಇವರಿಬ್ಬರು ಒಟ್ಟಿಗೆ ಇದ್ದದ್ದನ್ನ ಸ್ವತಃ ಸುನೀತಾ ಗಂಡ ಆನಂದ್​ ನೋಡಿದ್ದ. ಈ ವೇಳೆ ಆನಂದ್ ಕೈಯಿಂದ ತಪ್ಪಿಸಿಕೊಂಡು ಹೋಗಿ ನವೀನ್​ ಎಸ್ಕೇಪ್​ ಆಗಿದ್ದ. ರೆಡ್​​ ಹ್ಯಾಂಡ್​ಗೆ ಸಿಕ್ಕಿ ಬಿದ್ದಿದ್ದ ಮಡದಿಯನ್ನ ಮನೆಗೆ ಕರೆದುಕೊಂಡು ಬಂದ ಆನಂದ್​, ಬುದ್ದಿವಾದ ಹೇಳಿ ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದ. ಆಗಿದ್ದು ಆಗೋಯ್ತು, ಎಲ್ಲವನ್ನ ಮರೆತುಬಿಡು ಅಂದಿದ್ದ .ಅಲ್ಲದೇ ಇದೇ ಸಂದರ್ಭದಲ್ಲಿ ಯಾವುದಕ್ಕೂ ಇರಲಿ ಎಂದೂ ಆನಂದ್​​ ಮನೆಯಲ್ಲಿ ಸಿಸಿ ಕ್ಯಾಮೆರಾ ಕೂಡ ಅಳವಡಿಸಿದ್ದನಂತೆ. ಆದರೇ ಇದು ಮಡದಿಗೆ ಇಷ್ಟವಿರಲಿಲ್ಲಾ. ಇದರಿಂದ ನಾವು ಸಿಕ್ಕಿ ಹಾಕಿಕೊಳ್ತೀವಿ ಅನ್ನೋ ಭಯ ಸುನಿತಾಗೆ ಕಾಡಲು ಶುರುವಾಗಿತ್ತು. ಹೇಗಾದ್ರು ಮಾಡಿ ಆನಂದ್​ ಕಥೆ ಮುಗಿಸಿದ್ರೆ ನಮ್ಮ ನಡುವೆ ಯಾರು ಅಡ್ಡ ಬರಲ್ಲ ಅಂದುಕೊಂಡ ಸುನಿತಾ, ತನ್ನ ಆಪ್ತ ಗೆಳೆಯ ನವೀನ್​ ಜೊತೆ ಸೇರಿ ಈ ಬಗ್ಗೆ ಡಿಸ್ಕಸ್ ಮಾಡಿದ್ದಾಳೆ. ಅದರಂತೆ ಆನಂದ್​ ಗಾಡಿಯಲ್ಲಿ ಹೋಗುವಾಗ ಆತನ ಗಾಡಿಗೆ ಬೇರೆ ಗುದ್ದಿ ಹತ್ಯೆ ಮಾಡಿ, ನಂತರ ಆ್ಯಕ್ಸಿಡೆಂಟ್​ ರೀತಿಯಲ್ಲಿ ಬಿಂಬಿಸುವ ಪ್ಲಾನ್​ ನಡೆದಿದೆ. ಇವರ ಪ್ಲಾನ್​​ನಂತೆ ಕಳೆದ ವರ್ಷದ ಡಿಸೆಂಬರ್ 21 ರಂದು ಅಟ್ಯಾಕ್​ ನಡೆದಿದೆ.ಆದ್ರೆ ಪ್ಲಾನ್​ ಮಿಸ್ಸಾಗಿ ಅದೃಷ್ಟವಶಾತ್​ ಆನಂದ್​ ಬಚಾವ್ ಆಗಿದ್ರು.

ಸಬ್ಸಿಡಿ ನವೀನ್​

ತನ್ನ ಮೇಲೆ ನಡೆದ ಮೊದಲ ಮರ್ಡರ್ ಅಟೆಂಪ್ಟ್​ನ್ನ ಆನಂದ್​​ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಅಂದು ಸೀರಿಯಸ್​​ ಗೆ ಇದ್ದಿದ್ರೆ ಇಂದು ಆನಂದ್​ ಜೀವ ಉಳಿತಿತ್ತೇನೋ.?ಹೇಗಾದ್ರು ಮಾಡಿ ಗಂಡನನ್ನ ಮುಗಿಸಲೇ ಬೇಕೆಂದು ಹಠಕ್ಕೆ ಬಿದಿದ್ದ ಸುನಿತಾ ಈ ಬಾರಿ ಸುಪಾರಿ ಕೊಟ್ಟು ಹತ್ಯೆ ಮಾಡಲು ಸ್ಕೆಚ್ ಹಾಕ್ತಾಳೆ. ಆನಂದ್​​​ ಹತ್ಯೆಗೆ ಹುಡುಗರನ್ನ ರೆಡಿ ಮಾಡು, ದುಡ್ಡು ನಾನು ಹೊಂದಿಸ್ತೀನಿ ಎಂದು ನವೀನ್​ಗೆ ಹೇಳ್ತಾಳೆ. ಅದ್ಯಾವಾಗ ಸುನಿತಾ ಇಂತಹ ಮಾತು ಹೇಳಿದ್ಲೋ, ಆಕೆಯ ಗೆಳೆಯ ನವೀನ ಚಿಗುರಿಕೊಂಡಿದ್ದ. ಕೂಡಲೇ ಈ ಸಬ್ಸಿಡಿ ನವೀನ, ಸತೀಶ್, ನವೀನ ಮತ್ತು ದೇವ ಎಂಬುವರಿಗೆ ಸುಪಾರಿ ಕೊಟ್ಟಿದ್ದ. ಅಲ್ಲದೇ ಗಂಡ ಯಾವಾಗ ಮನೆಯಿಂದ ಹೊರಡ್ತಾನೆ ಅನ್ನೋ ಮಾಹಿತಿ ಸುನಿತಾ ಕೊಡ್ತಿದ್ದಂಗೆ ಈ ನವೀನ ಗ್ಯಾಂಗ್ ದಾರಿ ಮಧ್ಯದಲ್ಲಿ ಅಟ್ಯಾಕ್ ಮಾಡಿ ಆನಂದ್​ ಕಥೆ ಮುಗಿಸಿದೆ. ಮಡದಿ ಹಾಕಿದ ಭೀಕರ ಸ್ಕೆಚ್​ಗೆ ಆನಂದ್ ಬಲಿಯಾಗಿ ಹೆಣವಾಗಿ ಹೋಗ್ತಾನೆ.ತಾನೇ ಪಕ್ಕಾ ಪ್ಲಾನ್ ಮಾಡಿ ಕೈ ಹಿಡಿದ ಪತಿಯನ್ನೇ ಕೊಲ್ಲಿಸಿದ್ರೂ, ನಂತರ ನನಗೇನು ಗೊತ್ತಿಲ್ಲ ಎಂದು ಸುನೀತಾ ನಾಟಕವಾಡಿದ್ದಾಳೆ. ಆದ್ರೆ ಪೊಲೀಸರ ತನಿಖೆಯಿಂದ ಇದೀಗ ಎಲ್ಲವೂ ರಿವೀಲ್​ ಆಗಿದೆ. ಸುನಿತಾ ಜೊತೆಗೆ ಆತನ ಗೆಳೆಯ ನವೀನ್​ನನ್ನ ಕೂಡ ಇದೀಗ ಪೊಲೀಸರು ಲಾಕ್​ ಮಾಡಿದ್ದಾರೆ. ಆದ್ರೆ ಇದೇ ವೇಳೆ ಮತ್ತೊಂದು ಸ್ಫೋಟಕ ರಹಸ್ಯ ಬಯಲಾಗಿದೆ. ಅದು ಇದೇ ಸುಂದರಿಯ ಮತ್ತೊಂದು ರೋಚಕ ಕಮ್​ ಭಯಾನಕ ಸ್ಟೋರಿ.

2014 ರಲ್ಲಿ ಇದೇ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಅಶೋಕ ಎಂಬಾತ,ಯಾರೋ ಕಿಡಿಗೇಡಿಗಳು ಮನೆಯನ್ನ ರಾಬರಿ ಮಾಡಿ, ಮನೆಯಲ್ಲಿದ್ದ ತನ್ನ ಹೆಂಡ್ತಿಯನ್ನ ಹತ್ಯೆ ಮಾಡಿದ್ದಾರೆಂದು ಕೇಸ್​​ ಕೊಟ್ಟಿದ್ದ. ಪ್ರಕರಣ ದಾಖಲಾಗ್ತಿದ್ದಂಗೆ ತನಿಖೆಗೆ ಮುಂದಾದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಸಂಗತಿಗಳು ಗೊತ್ತಾಗಿದೆ. ಕಡೆಗೆ ಕೇಸ್ ಕೊಟ್ಟವನೇ ಕಂಬಿ ಹಿಂದೆ ಸೇರಿದ್ದ. ಹಾಗಾದ್ರೆ ಅಂದು ಆಗಿದ್ದೇನು ಅನ್ನೋದನ್ನ ತಿಳಿಸುತ್ತೇವೆ ಮುಂದೆ ಸುದ್ದಿ ಓದಿ.

2014ರಲ್ಲಿ ನಡೆದ ಮರ್ಡರ್​ ಕೇಸ್​ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಅಶೋಕ್​ ಹಾಗೂ ಸುನಿತಾ ನಡುವಿನ ಗೆಳೆತನದ ಬಗ್ಗೆ ಗೊತ್ತಾಗಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಈ ಮರ್ಡರ್​​ನ ಅಸಲಿ ರಹಸ್ಯವನ್ನ ಹೆಕ್ಕಿ ತೆಗೆದಿದ್ದಾರೆ.

ಕರೆಂಟ್​​ಶಾಕ್​ ಕೊಟ್ಟು ಹತ್ಯೆ
ಅಶೋಕ ಹಿರಿಸಾವೆ ಎಂಬಲ್ಲಿ ಡ್ರೈವಿಂಗ್ ಸ್ಕೂಲ್​ವೊಂದನ್ನ ನಡೆಸುತ್ತಿದ್ದ.2014ರಲ್ಲಿ ಇದೇ ಡ್ರೈವಿಂಗ್​ ಸ್ಕೂಲ್​ಗೆ ಇದೇ ಸುನಿತಾ ಸೇರ್ಕೊಂಡಿದ್ಲು. ಈ ವೇಳೆ ಅಶೋಕ್​ ಹಾಗೂ ಸುನಿತಾ ನಡುವೆ ಆಪ್ತತೆ ಬೆಳೆದಿದೆ. ಅಶೋಕ್​ ಹಾಗೂ ಸುನಿತಾ ಮ್ಯಾಟರ್​​ ಅಶೋಕ್​ ಹೆಂಡ್ತಿಗೆ ಗೊತ್ತಾಗಿದೆ. ಮುಂದೆ ಅಶೋಕ್​ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದಿತ್ತು.ಇದರಿಂದ ಕೆರಳಿದ ಅಶೋಕ್​ ಸುನಿತಾ ಜೊತೆ ಸೇರಿ ಮಡದಿಯ ಹತ್ಯೆಗೆ ಸ್ಕೆಚ್ ಹಾಕ್ತಾನೆ. ಇವರ ಪ್ಲಾ್ನ್​ನಂತೆ ಅಶೋಕ್​ ತನ್ನ ಹೆಂಡ್ತಿಗೆ ಕರೆಂಟ್​ ಶಾಕ್​ ಕೊಟ್ಟು ಭೀಕರವಾಗಿ ಹತ್ಯೆ ಮಾಡ್ತಾನೆ. ನಂತರ ಮನೆಯನ್ನೇ ಯಾರೋ ರಾಬರಿ ಮಾಡಿದ್ದಾರೆ, ಈ ವೇಳೆ ಅಡ್ಡ ಬಂದ ಹೆಂಡ್ತಿಯನ್ನ ಕೊಲೆ ಮಾಡಿದ್ದಾರೆಂದು ದೂರು ಕೊಟ್ಟಿದ್ದ. ಆದ್ರೆ ಪೊಲೀಸರ ತನಿಖೆಯಲ್ಲಿ ದೂರು ಕೊಟ್ಟ ಅಶೋಕನೇ ಲಾಕ್​ ಆಗ್ತಾನೆ.

ಇಬ್ಬರು ಸೇರಿ ಅಶೋಕ್​ ಹೆಂಡ್ತಿಗೆ ಸ್ಕೆಚ್ ಹಾಕಿದ್ರೂ ಕೂಡ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಕೇಸ್​ನಿಂದ ಸುನಿತಾ ಖುಲಾಸೆಗೊಂಡಿದ್ಲು. ಈ ಮ್ಯಾಟರ್​ ಗೊತ್ತಿದ್ರೂ ಆನಂದ್​​ ಸುನಿತಾಳನ್ನ ಕ್ಷಮಿಸಿದ್ದ. ಆದ್ರೆ ನಾವು ಅವಾಗ್ಲೇ ಹೇಳಿದಂತೆ, ಹಾವಿಗೆ ಹಾಲೆರೆದು ಪಕ್ಕದಲ್ಲೇ ಮಲಗಿಸಿದ್ರೆ ಕಚ್ಚದೇ ಇರುತ್ತಾ..? ಇದೀಗ ಮತ್ತೊಬ್ಬನ ಜೊತೆ ಗೆಳೆತನ ಉಂಟಾಗಿ, ಕ್ಷಮಿಸಿದ ಗಂಡನನ್ನೆ ಹತ್ಯೆ ಮಾಡಿದ್ದಾಳೆ. ಒಟ್ಟಿನಲ್ಲಿ ಸುನಿತಾ ಎರಡು ಬಾರಿ ತಪ್ಪು ಮಾಡಿದಾಗಲೂ ಆನಂದ್​ ತನ್ನ ಮಕ್ಕಳ ಮುಖ ನೋಡಿ ಕ್ಷಮಿಸಿ ಬಿಟ್ಟಿದ್ದ. ಹೆಂಡತಿ ಸರಿದಾರಿಗೆ ಬರುತ್ತಾಳೆಂದೇ ಅಂದುಕೊಂಡು ಸಂಸಾರ ನಡೆಸುತ್ತಿದ್ದ. ಆದರೇ ಸುನಿತಾ ಹಾಗೆ ಮಾಡಲಿಲ್ಲ. ಗಂಡ ಬೇಡದಿದ್ದರೇ ಬಿಟ್ಟು ಬಿಡಬಹುದಿತ್ತು. ತನ್ನ ಮಗು ಮುಖ ನೋಡಿ ಆದರೂ ಎಲ್ಲವನ್ನೂ ಮರೆತು ಸುಮ್ಮನಾಗಬಹುದುದ್ದಿತ್ತು. ಆದರೇ ಸುನಿತಾ ತನ್ನ ಬುದ್ಧಿ ಬಿಡಲಿಲ್ಲ.. ಇದೀಗ ತನ್ನ ಗಂಡನನ್ನೇ ಹತ್ಯೆ ಮಾಡಿ ಈ ನಾರಿ ಜೈಲಿನ ದಾರಿ ಹಿಡಿದಿದ್ದಾಳೆ. ಒಂದು ಕಡೆ ಅಪ್ಪ ಹೆಣವಾದ್ರೆ, ಅಪ್ಪನ ಹತ್ಯೆಗೆ ಕಾರಣವಾದ ಅಮ್ಮ ಜೈಲು ಸೇರಿದ್ದಾರೆ. ಇಬ್ಬರು ಮಕ್ಕಳು ಮಾತ್ರ ತಬ್ಬಲಿಯಾಗಿದ್ದು, ಅಮ್ಮಾ.. ಅಪ್ಪನನ್ನ ಯಾಕ್​ ಕೊಲ್ಲಿಸಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ನೋವು ತುಂಬಿದ ಮುಗ್ದ ಮಕ್ಕಳ ಅಂತರಾಳದಿಂದ ಚಿಮ್ಮಿದ ಈ ಪ್ರಶ್ನೆಗೆ ಸುನಿತಾಳಷ್ಟೇ ಉತ್ತರಿಸಬೇಕಿದೆ.

ಅಂದು ಪ್ರೀತಿಯ ತೇರು ಎಳೆದವನನ್ನು ಇಂದು ಆಕೆಯೇ ಸಾವಿನ ಊರು ಸೇರಿಸಿದ್ದಳು. ಈ ಸುಪಾರಿ ಸುನಿತಾಳಿಂದ ಇಂದು ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಅಂದು ಜೈಲಿನ ದಿನಗಳಿಂದ ತಪ್ಪಿಸಿಕೊಂಡಿದ್ದರೂ ಇಂದು ಮತ್ತೆ ಮಾಡಬಾರದ ಕೆಲಸ ಮಾಡಿ ಕಂಬಿ ಹಿಂದೆ ಸೇರ್ಕೊಂಡಿದ್ದಾಳೆ. ಈ ಬಾರಿಯಾದ್ರೂ ಈ ಪಾಪಿಗೆ ಈ ಕೃಷ್ಣನ ಜನ್ಮ ಸ್ಥಳದಲ್ಲಿ ಜ್ಞಾನೋದಯವಾಗುತ್ತಾ ಅನ್ನೋದನ್ನ ಕಾದು ನೋಡಬೇಕು.

News First Live Kannada


Leave a Reply

Your email address will not be published.