ಚಿಕ್ಕಮಗಳೂರು: ಪೊಲೀಸ್ ಸಬ್ ಇನ್​ಸ್ಪೆಕ್ಟರ್ ತನ್ನ ಒಂದು ತಿಂಗಳ ಸಂಬಳವನ್ನು ಸಂಪೂರ್ಣವಾಗಿ ಕೊರೊನಾ ಸೋಂಕಿತರ ಕುಟುಂಬಗಳಿಗೆ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ನಡೆದಿದೆ.

ಲಕ್ಕವಳ್ಳಿ ಠಾಣೆಯಲ್ಲಿ ಪಿಎಸ್‍ಐ ಆಗಿರೋ ರಘುನಾಥ್ ತಮ್ಮ ಒಂದು ತಿಂಗಳ ಸಂಬಳ 50 ಸಾವಿರ ಹಣವನ್ನ ಸಂಪೂರ್ಣವಾಗಿ ಸೋಂಕಿತರ ಕುಟುಂಬಗಳಿಗೆ ವ್ಯಯಿಸಿದ್ದಾರೆ. ಒಂದು ಕಿಟ್ 500 ರೂಪಾಯಿಯಂತೆ ಸುಮಾರು 100 ಕುಟುಂಬಗಳಿಗೆ ಕಿಟ್ ನೀಡಿದ್ದಾರೆ. ಸೋಂಕಿಗೆ ತುತ್ತಾಗಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಕೊರೊನಾ ಸೋಂಕಿನಿಂದ ಗುಣಮುಖರಾಗಿರೋ ಬಡವರಿಗೆ ಕಿಟ್ ವಿತರಿಸಿದ್ದಾರೆ.

ಕಿಟ್‍ನಲ್ಲಿ 5 ಅಕ್ಕಿ, ಸಕ್ಕರೆ, ಬೆಲ್ಲ, ತೊಗರಿಬೇಳೆ, ಖಾರದಪುಡಿ, ದನಿಯಾ ಪುಡಿ, ಟೀ ಪುಡಿ, ಅಡಿಗೆ ಎಣ್ಣೆ ಸೇರಿದಂತೆ ಒಂದು ತಿಂಗಳಿಗೆ ಆಗುವಷ್ಟು ವಿವಿಧ ಆಹಾರ ಪದಾರ್ಥಗಳನ್ನ ನೀಡಿದ್ದಾರೆ. ತಮ್ಮ ಠಾಣಾ ವ್ಯಾಪ್ತಿಯ ಲಕ್ಕವಳ್ಳಿ, ಭಾವಿಕೆರೆ, ರಂಗೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಕಡುಬಡವರಿಗೆ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಿಟ್ ರೆಡಿ ಮಾಡಿಕೊಂಡ ಪಿಎಸ್‍ಐ ರಘುನಾಥ್, ಸ್ವತಃ ಪ್ರತಿಯೊಂದು ಮನೆ ಮನೆಗೆ ಹೋಗಿ ಕಿಟ್ ವಿತರಿಸಿ ಬಂದಿದ್ದಾರೆ. ಪಿ.ಎಸ್.ಐ. ಕಾರ್ಯಕ್ಕೆ ಸ್ಥಳೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ತಿಂಗಳ ಸಂಬಳವನ್ನ ಬಡವರಿಗೆ ಫುಡ್​ಕಿಟ್​​ ನೀಡಲು ಬಳಸಿದ ಸಬ್​ ಇನ್ಸ್​ಪೆಕ್ಟರ್​​ appeared first on News First Kannada.

Source: newsfirstlive.com

Source link