ತಿಂಗಳ ಹಿಂದೆ ಜೈಲಿನಿಂದ ಬಂದಿದ್ದ.. ಊಟ ಖಾಲಿ ಆಗಿದೆ ಅಂದಿದ್ಕೆ ಹೋಟೆಲ್ ಮಾಲೀಕನಿಗೆ ಚಾಕು ಇರಿದ ರೌಡಿ..!


ಬೆಂಗಳೂರು ಗ್ರಾಮಾಂತರ: ಊಟ ಖಾಲಿಯಾಗಿದೆ ಎಂದಿದ್ದಕ್ಕೆ ರೌಡಿಶೀಟರ್​ ಓರ್ವ ಹೋಟೆಲ್​ ಮಾಲೀಕನಿಗೆ ಚಾಕುವಿನಿಂದ ಇರಿದು ಗಂಭಿರವಾಗಿ ಗಾಯಗೊಳಿಸಿರುವ ಘಟನೆ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ರಸ್ತೆಯಲ್ಲಿನ ಶಿವಗಂಗಾ ಹೋಟೆಲ್​ನಲ್ಲಿ ನಡೆದಿದೆ.

ನಿನ್ನೆ ರಾತ್ರಿ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು 10 ಗಂಟೆಯ ಸುಮಾರಿಗೆ ಹೋಟೆಲ್​ಗೆ ಆಗಮಿಸಿದ ರೌಡಿಶೀಟರ್ ಯಲ್ಲಪ್ಪ ಊಟ ನೀಡುವಂತೆ ಹೇಳಿದ್ದಾನೆ. ಆಗ ಮಾಲೀಕ ಹೋಟೆಲ್ ಕ್ಲೋಸ್​ ಮಾಡಲಾಗಿದ್ದು ಊಟ ಖಾಲಿಯಾಗಿದೆ ಎಂದಿದ್ದನಂತೆ. ಕೈಯಲ್ಲಿ ಬಿಯರ್​ ಬಾಟಲಿ ಹಿಡಿದು ನಿಂತಿದ್ದ ರೌಡಿ ಶೀಟರ್ ಊಟವಿಲ್ಲ ಎಂದಿದ್ದಕ್ಕೆ ಕುಪಿತಗೊಂಡು ಏಕಾಏಕಿ ದಾಳಿ ನಡೆಸಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ.

ಇನ್ನು ರೌಡಿಶೀಟರ್​ ಯಲ್ಲಪ್ಪ ಕಳೆದ ಎರಡು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಎನ್ನಲಾಗಿದೆ. ಜೈಲಿನಿಂದ ಬಂದ ಕೆಲವೇ ದಿನಗಳಲ್ಲಿ​ ಮತ್ತೆ ಅದೇ ಹಳೇ ಚಾಳಿ ಮುಂದುವರಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

News First Live Kannada


Leave a Reply

Your email address will not be published. Required fields are marked *