ತಿಂಡಿ ತಿನ್ನಲು ಇಳಿದಿದ್ದ ವ್ಯಕ್ತಿ ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಸಿಲುಕಿ ಸಾವು | Man died after train ran on him in kalaburagi


ನಾಗರಕೋಯಿಲ್ ರೈಲಿನಲ್ಲಿ ಕುಟುಂಬಸ್ಥರ ಜೊತೆ ಮುಂಬೈನಿಂದ ಮಧುರೈಗೆ ತೆರಳುತ್ತಿದ್ದ ಅಯ್ಯಪ್ಪ ರಾಜ್ ಅವರು ವಾಡಿ ರೈಲ್ವೆ ನಿಲ್ದಾಣದಲ್ಲಿ ತಿಂಡಿ ತಿನ್ನಲು ಇಳಿದ್ದರು. ಈ ವೇಳೆ ಘಟನೆ ನಡೆದಿದೆ.

ತಿಂಡಿ ತಿನ್ನಲು ಇಳಿದಿದ್ದ ವ್ಯಕ್ತಿ ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಸಿಲುಕಿ ಸಾವು

ಸಾಂದರ್ಭಿಕ ಚಿತ್ರ

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಸಿಲುಕಿ ಮುಂಬೈ ಮೂಲದ ಅಯ್ಯಪ್ಪ ರಾಜ್(56) ಮೃತಪಟ್ಟಿದ್ದಾರೆ. ನಾಗರಕೋಯಿಲ್ ರೈಲಿನಲ್ಲಿ ಕುಟುಂಬಸ್ಥರ ಜೊತೆ ಮುಂಬೈನಿಂದ ಮಧುರೈಗೆ ತೆರಳುತ್ತಿದ್ದ ಅಯ್ಯಪ್ಪ ರಾಜ್ ಅವರು ವಾಡಿ ರೈಲ್ವೆ ನಿಲ್ದಾಣದಲ್ಲಿ ತಿಂಡಿ ತಿನ್ನಲು ಇಳಿದ್ದರು. ಈ ವೇಳೆ ರೈಲು ತೆರಳುತ್ತಿರುವುದು ಕಂಡು ಅವಸರದಲ್ಲಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಚಕ್ರಕ್ಕೆ ಸಿಲುಕಿ ನರಳಿ ಪ್ರಾಣ ಬಿಟ್ಟಿದ್ದಾರೆ. ಘಟನೆಯಲ್ಲಿ ವ್ಯಕ್ತಿಯ ಎರಡು ಕಾಲುಗಳು ಹಾಗೂ ಒಂದು ಕೈ ತುಂಡಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾವಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಶರಣು

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂಬ್ರವಳ್ಳಿ ಗ್ರಾಮದ ತೋಟದಲ್ಲಿದ್ದ ಬಾವಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬೆಟ್ಟಪ್ಪ(50), ರುಕ್ಮಿಣಿ(43) ಆತ್ಮಹತ್ಯೆ ಮಾಡಿಕೊಂಡವರು. ಸಾಲಬಾಧೆಯಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published.