ತಿಮಿಂಗಿಲದ​ ಬಾಯಲ್ಲಿ ತಗ್ಲಾಕೊಂಡಿದ್ದ ಈ ವ್ಯಕ್ತಿ ಬದುಕಿ ಬಂದದ್ದೇ ರೋಚಕ ಕಹಾನಿ

ತಿಮಿಂಗಿಲದ​ ಬಾಯಲ್ಲಿ ತಗ್ಲಾಕೊಂಡಿದ್ದ ಈ ವ್ಯಕ್ತಿ ಬದುಕಿ ಬಂದದ್ದೇ ರೋಚಕ ಕಹಾನಿ

ಒಬ್ಬ ಮನುಷ್ಯ ಎಷ್ಟು ಲಕ್ಕಿ ಅನ್ನೋದಕ್ಕೆ, ಈಗ ನಾವ್​ ಹೇಳೋ ಸ್ಟೋರಿಯ ನಾಯಕನೇ ಬೆಸ್ಟ್​ ಎಕ್ಸಾಂಪಲ್​. ಮಸ್ಕಟ್​ನಲ್ಲಿ, ಲಾಬ್ಸ್​ಟರ್​ ಡೈವರ್ ಮೈಕಲ್​​​ ಪಾಕ್​ಕಾರ್ಡ್ ಎಂಬವರು ತಿಮಿಂಗಿಲದ ಬಾಯಿಯೊಳಗೆ ಹೋಗಿ, ಬದುಕಿ ಬಂದಿದ್ದಾರೆ.

ಮೈಕಲ್​ ತಮ್ಮ ಪಾಡಿಗೆ ತಾವು ಸಮುದ್ರದ ಮಧ್ಯದಲ್ಲಿ ಲಾಬ್ಸಟಿಂಗ್​ ಮಾಡ್ತಿದ್ರು. ಈ ವೇಳೆ ದೊಡ್ಡದಾದ ಅಲೆಯೊಂದು ಅವರ ಕಣ್ಣಿಗೆ ಕಾಣಿಸ್ತಾಯಿದ್ದಂಗೆನೇ ಎಲ್ಲವೂ ಕತ್ತಲೆಯಾಗೋಯ್ತಂತೆ. ಏನಾಗ್ತಿದೆ ಅಂತ ಯೋಚ್ನೆ ಮಾಡುವಷ್ಟರಲ್ಲೇ ಅವ್ರು ತಿಮಿಂಗಿಲದ ಬಾಯಿಯ ತುದಿಯಲ್ಲಿ ಇರೋದು ಗೊತ್ತಾಗಿದೆ. ಈ ಪ್ರದೇಶದಲ್ಲಿ ಶಾರ್ಕ್​​ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದ ತನ್ನ ಮೇಲೆ ಶಾರ್ಕ್​​ ದಾಳಿ ಮಾಡಿತ್ತು ಅಂತ ಅಂದುಕೊಂಡಿದ್ರಂತೆ. ಈ ಶಾರ್ಕ್​ ತಮ್ಮನ್ನ ತಿಂದ್​ಬಿಡುತ್ತೆ ಅಂತ ಯೋಚ್ನೆ ಮಾಡ್ತಾ, ನಾನು ಸತ್ತುಹೋಗ್ತೀನಿ ಅನ್ನಿಸಿತಂತೆ. ಆದ್ರೆ ಅದು ಹಂಪ್​​ಬ್ಯಾಕ್​ ವೇಲ್ ಜಾತಿಯ ತಿಮಿಂಗಿಲವಾಗಿತ್ತು .

ಅಯ್ಯೋ ನನ್ನ ಮಗ, ನನ್ನ ಹೆಂಡ್ತಿ ಎಲ್ಲರನ್ನೂ ನಾನು ಅಗಲಿ ಹೋಗ್ತಿದ್ದೀನಿ ಅನ್ನೋ ಭಯ ಮೈಕಲ್​​ಗೆ ಕಾಡ್ತಾಯಿತ್ತು. ಅಷ್ಟರಲ್ಲಿ ಆ ತಿಮಿಂಗಿಲ​ ಎರಡರಿಂದ ಮೂರು ಬಾರಿ ತಲೆಯನ್ನ ಅಲ್ಲಾಡಿಸಿ ಉಗಿದಿದೆ. ಆಗ ಮೈಕಲ್​, ದಡಕ್ಕೆ ಬಂದು ಬಿದ್ದಿದ್ದಾರೆ. ನಂತರ ಅವ್ರನ್ನ ಆಸ್ಪತ್ರೆಗೆ ದಾಖಲಿಸಿ ಬೇಕಾದ ಚಿಕಿತ್ಸೆ ನೀಡಲಾಗಿದೆ. ಈಗ ಅವರು​ ಚೇತರಿಸಿಕೊಳ್ತಿದ್ದಾರೆ ಎಂದು ವರದಿಯಾಗಿದೆ.

 

The post ತಿಮಿಂಗಿಲದ​ ಬಾಯಲ್ಲಿ ತಗ್ಲಾಕೊಂಡಿದ್ದ ಈ ವ್ಯಕ್ತಿ ಬದುಕಿ ಬಂದದ್ದೇ ರೋಚಕ ಕಹಾನಿ appeared first on News First Kannada.

Source: newsfirstlive.com

Source link