ತಿರುಪತಿಯಲ್ಲಿ ಕನ್ನಡಿಗರಿಗೆ ಇದೆಂಥಾ ಅವಮಾನ? ವಾಹನಕ್ಕೆ ಕನ್ನಡ ಬಾವುಟ, ನಟ ಪುನೀತ್ ಫೋಟೋ ಅಂಟಿಸಿಕೊಂಡವರಿಗೆ ಕೆಟ್ಟ ಅನುಭವ | Andhra insulting karnataka tirupati devotees Kannada flag, appu photo should not stick in vehicles


ತಿರುಪತಿಯಲ್ಲಿ ಕನ್ನಡಿಗರಿಗೆ ಇದೆಂಥಾ ಅವಮಾನ? ವಾಹನಕ್ಕೆ ಕನ್ನಡ ಬಾವುಟ, ನಟ ಪುನೀತ್ ಫೋಟೋ ಅಂಟಿಸಿಕೊಂಡವರಿಗೆ ಕೆಟ್ಟ ಅನುಭವ

ತಿರುಪತಿಯಲ್ಲಿ ಕನ್ನಡಿಗರಿಗೆ ಇದೆಂಥಾ ಅವಮಾನ? ವಾಹನಕ್ಕೆ ಕನ್ನಡ ಬಾವುಟ, ನಟ ಪುನೀತ್ ಫೋಟೋ ಅಂಟಿಸಿಕೊಂಡವರಿಗೆ ಕೆಟ್ಟ ಅನುಭವ

ಬೆಂಗಳೂರು: ಆಂಧ್ರದ ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಮುಖ್ಯದ್ವಾರದಲ್ಲಿ ಕನ್ನಡ ಬಾವುಟಕ್ಕೆ ಕರ್ನಾಟಕದ ವಾಹನಗಳಿಗೆ ಅವಮಾನ ಮಾಡಲಾಗುತ್ತಿದೆ. ಆದಷ್ಟು ಬೇಗ ಈ ಬಗ್ಗೆ ಕರ್ನಾಟಕ ಸರ್ಕಾರ ಆಂಧ್ರ ಸರಕಾರದವರ ಜೊತೆ ಮಾತನಾಡಬೇಕು ಎಂದು ಕರವೇ ಗಜಸೇನೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ಆಕ್ರೋಶ ಹೊರ ಹಾಕಿದ್ದಾರೆ. ತಿರುಪತಿಯಲ್ಲಿ ಕನ್ನಡ ಧ್ವಜ ಹಾಕುವಂತಿಲ್ಲ. ಅಭಿಮಾನಿಗಳ ಆರಾಧ್ಯದೈವ ನಟ ಪುನೀತ್ ಫೋಟೋ, ಸ್ಟಿಕ್ಕರ್ ಹಾಕುವಂತಿಲ್ಲ. ತಿರುಪತಿಗೆ ಹೋಗುವ ನಿಮ್ಮ ಕಾರಿನಲ್ಲಿ ಇಂಥ ಸ್ಟಿಕ್ಕರ್ ಇದ್ರೆ ಕಿತ್ತು ಹಾಕ್ತಾರೆ. ತಿರುಮಲ‌ ಗೇಟ್ ನಲ್ಲಿ ಕನ್ನಡಿಗರು ಅತ್ಯಂತ ಕೆಟ್ಟ ಅನುಭವ ಎದುರಿಸಿದ್ದಾರೆ. (ನನ್ನ) ಕರವೇ ಗಜಸೇನೆ ಸಂಘಟನೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ಕಾರಿನಲ್ಲಿದ್ದ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ. ರಕ್ಷಣಾ ಸಿಬ್ಬಂದಿ ಕರ್ನಾಟಕದಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ ಮಾಡುತ್ತಾರೆ. ಕಾರಿನಲ್ಲಿ ಕನ್ನಡಪರ ಸ್ಟಿಕ್ಕರ್ ಇದ್ರೆ ಕಿತ್ತುಹಾಕ್ತಾರೆ. ಕರ್ನಾಟಕ ಧ್ವಜ, ಕನ್ನಡ ಬಾವುಟ ಸ್ಟಿಕ್ಕರ್ ಇದ್ರೆ ಮುಲಾಜಿಲ್ಲದೆ ಕಿತ್ತು ಹಾಕುತ್ತಾರೆ. ಯಾಕೆ ಕಿತ್ತು ಹಾಕ್ತೀರಾ ಅಂದ್ರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ.

ತೆಲುಗು ಚಿತ್ರಗಳನ್ನು ವೀಕ್ಷಿಸಲು ಸಿಎಂ ಬಸವರಾಜ ಬೊಮ್ಮಾಯಿ ಹೋಗ್ತಾರೆ. ಆದ್ರೆ ಆಂಧ್ರದಲ್ಲಿ ಕರ್ನಾಟಕ ಧ್ವಜ, ಅಪ್ಪು ಫೋಟೋ ನಮ್ಮ ಕಾರಿಲ್ಲಿದ್ದರೆ ಕಿತ್ತು ಹಾಕ್ತಾರೆ. ಕೂಡಲೇ ಆಂಧ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರ ಮಾತನಾಡಿ ಈ ಅನ್ಯಾಯ ಸರಿಪಡಿಸಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದಲ್ಲಿ ಕನ್ನಡಿಗರು ಹೋರಾಟ ಮಾಡಬೇಕಾಗುತ್ತದೆ ಎಂದು ಕರವೇ ಗಜಸೇನೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.

ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳು ಆರ್ಆರ್ಆರ್ ಪಿಕ್ಚರ್ ಬಿಡುಗಡೆಗೆ 3/4 ಗಂಟೆ ಕೂತು ಅವರಿಗೆ ಪ್ರೋತ್ಸಾಹಿಸುತ್ತೀರಿ. ಆಂಧ್ರದವರು ನಿಮಗೆ ಮತ್ತು ಕರ್ನಾಟಕಕ್ಕೆ ಕೊಡುತ್ತಿರುವ ಮರ್ಯಾದೆ ನೋಡಿ. ಮುಖ್ಯಮಂತ್ರಿಗಳೇ ನೀವು ಆಂಧ್ರ ಸರ್ಕಾರಕ್ಕೆ ತಿಳಿ ಹೇಳದಿದ್ದರೆ ಕರವೇ ಗಜಸೇನೆ ಮತ್ತು ಎಲ್ಲಾ ಕನ್ನಡಪರ ಸಂಘಟನೆ ಯವರು ಸೇರಿ ಕನ್ನಡದವರು ಸೇರಿ ನಮ್ಮ ಹೆಮ್ಮೆಯ ಪುನೀತ್ ರಾಜಕುಮಾರ್ ಅಭಿಮಾನಿಗಳೆಲ್ಲ ಸೇರಿ ಉಗ್ರ ಹೋರಾಟ ಮಾಡಲಾಗುವುದು ಕರ್ನಾಟಕದಲ್ಲಿ ವಾಸಮಾಡುತ್ತಿರುವ ಆಂಧ್ರದವರಿಗೆ ತಕ್ಕಶಾಸ್ತಿ ಮಾಡಲಾಗುವುದು ಎಚ್ಚರಿಕೆ ನಮ್ಮ ಹೆಮ್ಮೆಯ ನಟ ನಮ್ಮ ಹೃದಯದ ನಟ ಪುನೀತ್ ರಾಜಕುಮಾರ್ ಅವರಿಗೆ ಅವಮಾನ ಅವರ ಪೋಸ್ಟರನ್ನು ಕಿತ್ತುಹಾಕಿದರೆ ಮಾತ್ರ ಗಾಡಿ ಬಿಡುತ್ತೇವೆ ಎಂದು ಅವಮಾನ ಮಾಡಲಾಗಿದೆ. ನಮ್ಮ ಕಣ್ಣಿನಿಂದ ನೋಡಲು ಆಗುವುದಿಲ್ಲ ಇದು ನಮ್ಮ ಕನ್ನಡಿಗರ ದುರ್ದೈವ. ಇನ್ನಾದರೂ ಎಚ್ಚೆತ್ತುಕೊಳ್ಳಿ ಕನ್ನಡಿಗರೇ ಎಂದು ತಾಯ್ನಾಡು ರಾಘವೇಂದ್ರ ತಿಳಿಸಿದ್ದಾರೆ.

TV9 Kannada


Leave a Reply

Your email address will not be published.