ಹೈದ್ರಾಬಾದ್‍: ತಿರುಮಲ ವೇಂಕಟೇಶ್ವರ ದೇವಸ್ಥಾನಕ್ಕೆ ಹೈದ್ರಾಬಾದ್‍ನ ಭಕ್ತರೊಬ್ಬರು ದುಬಾರಿ ಬೆಲೆಯ ಚಿನ್ನದ ಖಡ್ಗ ನೀಡಿದ್ದಾರೆ.

ಹೈದರಾಬಾದ್‍ನ ಭಕ್ತ ಎಂ.ಶ್ರೀನಿವಾಸ್ ಪ್ರಸಾದ್ ಮತ್ತು ಅವರ ಪತ್ನಿ ವೆಂಕಟೇಶ್ವರ ಸ್ವಾಮಿಗೆ 4 ಕೋಟಿ ರೂಪಾಯಿ ಮೌಲ್ಯದ 6.5 ಕೆಜಿ ತೂಕವುಳ್ಳ ಚಿನ್ನದ ಖಡ್ಗವನ್ನು ದೇವರಿಗೆ ಅರ್ಪಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ದೇವರಿಗೆ ಖಡ್ಗವನ್ನು ನೀಡುವ ಮೊದಲು ತಿರುಮಲ ಕಲೆಕ್ವಿವ್ ಅತಿಥಿ ಗೃಹದಲ್ಲಿ ಭಾನುವಾರ ಮಾಧ್ಯಮಗಳ ಮುಂದೆ ಚಿನ್ನದ ಖಡ್ಗವನ್ನು ಪ್ರದರ್ಶಿಸಿದ್ದಾರೆ.

ಈ ದಂಪತಿ ಕಳೆದ ವರ್ಷವೇ ದೇವಸ್ಥಾನಕ್ಕೆ ಖಡ್ಗ ಕಾಣಿಕೆಯಾಗಿ ಕೊಡಬೇಕು ಎಂದು ನಿರ್ಧರಿಸಿದ್ದೇವು. ಆದರೆ ಕೊರೊನಾ ಇರುವ ಕಾರಣದಿಂದಾಗಿ ಕೊಡಲು ಸಾಧ್ಯವಾಗಿರಲಿಲ್ಲ ಎಂದು ದಂಪತಿ ಹೇಳಿಕೊಂಡಿದ್ದಾರೆ.

ಈ ಖಡ್ಗವನ್ನು ತಮಿಳುನಾಡಿನ ಕೊಯುಮತ್ತೂರಿನಲ್ಲಿರುವ ವಿಶೇಷ ಆಭರಣಕಾರರು ತಯಾರಿಸಿದ್ದಾರೆ. ಆರುತಿಂಗಳ ಕಾಲಾವಕಾಶದಲ್ಲಿ ಖಡ್ಗ ತಯಾರಿಸಲಾಗಿದೆ. ಸುಮಾರು ಆರೂವರೆ ಕೆಜಿ ತೂಕವಿದೆ. ಸರಿಸುಮಾರಾಗಿ 4 ಕೋಟಿ ರೂಪಾಯಿಯಾಗಿದೆ.

ಇದಕ್ಕೂ ಮೊದಲು ತಮಿಳುನಾಡಿನ ತೆನಿ ಮೂಲದ ಜವಳಿ ವ್ಯಾಪಾರಿ ತಂಗಾ ದೋರೈ ಅವರು 2018ರಲ್ಲಿ 1.75 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಕತ್ತಿಯನ್ನು ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಿದ್ದರು.

The post ತಿರುಪತಿ ತಿಮ್ಮಪ್ಪನಿಗೆ ಆರೂವರೆ ಕೆ.ಜಿಯ ಚಿನ್ನದ ಖಡ್ಗ ನೀಡಿದ ದಂಪತಿ appeared first on Public TV.

Source: publictv.in

Source link