ನವದೆಹಲಿ: ತಿರುಮಲದ ವೆಂಕಟೇಶ್ವರ ದೇಗುಲದ ಪ್ರಧಾನ ಅರ್ಚಕರಾಗಿದ್ದ ಪಿ.ಶೇಷಾದ್ರಿ ಅವರು ನಿಧನರಾಗಿದ್ದಾರೆ. ಡಾಲರ್ ಶೇಷಾದ್ರಿ ಎಂದೇ ಅವರು ಪ್ರಖ್ಯಾತಿ ಹೊಂದಿದ್ದರು.
ಶೇಷಾದ್ರಿ ಅವರಿಗೆ 75 ವರ್ಷಗಳಾಗಿತ್ತು. ನಿನ್ನೆ ರಾತ್ರಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ವತಿಯಿಂದ ವಿಶಾಖಪಟ್ಟಣದಲ್ಲಿ ಆದ್ಯಾತ್ಮಕ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ರಾತ್ರಿ ವೇಳೆ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಡಾಲರ್ ಶೇಷಾದ್ರಿ ಅವರು ಕಳೆದ 50 ವರ್ಷಗಳಿಂದ ವೆಂಕಟೇಶ್ವರ ಸನ್ನಿಧಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ದೇವಾಲಯದ ಆಚರಣೆಗಳು ಮತ್ತು ಆಡಳಿತದ ಮೇಲೆ ಉತ್ತಮವಾದ ನಿಯಂತ್ರಣ ಹೊಂದಿದ್ದರು.