– ಹಣ ನೋಡಿ ಟಿಟಿಡಿ ಅಧಿಕಾರಿಗಳಿಗೆ ಶಾಕ್

ಹೈದರಾಬಾದ್: ತಿರುಪತಿ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಬಳಿ ಬರೋಬ್ಬರಿ 10 ಲಕ್ಷ ರೂ. ಪತ್ತೆಯಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಭಿಕ್ಷುಕ ಶ್ರೀನಿವಾಸ್ ಆಚಾರಿ ಮನೆಯಲ್ಲಿ ಲಕ್ಷ ಲಕ್ಷ ರೂ. ಹಣ ನೋಡಿದ ಅಧಿಕಾರಿಗಳೇ ಒಂದು ಬಾರಿ ದಂಗಾಗಿದ್ದಾರೆ. ಶೇಷಾಚಲ ನಗರದ ನಿವಾಸಿಯಾಗಿರುವ ಶ್ರೀನಿವಾಸ್, ಪ್ರತಿ ನಿತ್ಯ ತಿರುಪತಿ ದೇವರ ದರ್ಶನ ಪಡೆಯಲು ಬರುತ್ತಿದ್ದವರ ಬಳಿ ಭಿಕ್ಷೆ ಬೇಡುತ್ತಿದ್ದನು. ಅಲ್ಲದೆ ಈ ತನಿಗೆ ತಿರುಪತಿ ವಲಸಿಗ ಕ್ಯಾಟಗರಿ ಅಡಿಯಲ್ಲಿ ಶೇಷಾಚಲ ನಗರದಲ್ಲಿ ಮನೆಯಲ್ಲಿ ಕೂಡ ಮಂಜೂರು ಮಾಡಲಾಗಿತ್ತು.

ಕಳೆದ ವರ್ಷ ಶ್ರೀನಿವಾಸ್ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದನು. ಹೀಗಾಗಿ ಆತನ ಕುಟುಂಬದ ಸದಸ್ಯರು ಯಾರೂ ಇಲ್ಲವೆಂಬುದನ್ನು ಅರಿತ ಟಿಟಿಡಿ ಅಧಿಕಾರಿಗಳು, ಆತನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 2 ಟ್ರಕ್ ಬಾಕ್ಸ್ ಪತ್ತೆಯಾಗಿದೆ. ಅವುಗಳನ್ನು ತೆರೆದು ನೋಡಿದಾಗ ಕಂತೆ ಕಂತೆ ನೋಟುಗಳು ಇರುವುದನ್ನು ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ.

ಈ ನೋಟುಗಳನ್ನು ಎಣಿಸಿದಾಗ ಸುಮಾರು 10 ಲಕ್ಷ ರೂ. ಇರುವುದು ಗೊತ್ತಾಗಿದೆ. ಅಲ್ಲದೆ 1,000 ಮುಖಬೆಲೆಯ ರದ್ದಾದ ನೋಟುಗಳು ಕೂಡ ಇದ್ದವು. ಹಾಗೆಯೇ 2 ಸಾವಿರ ಮುಖಬೆಲೆಯ ನೋಟುಗಳು ಕೂಡ ಸಾಕಷ್ಟಿದ್ದವು. ಸದ್ಯ ಅಧಿಕಾರಿಗಳು ಹಣವನ್ನು ಮುಟ್ಟುಗೋಲು ಹಾಕಿ ಟಿಟಿಡಿ ಝಕಾನೆಗೆ ಜಮೆ ಮಾಡಿದ್ದಾರೆ.

The post ತಿರುಪತಿ ಸನ್ನಿಧಿಯಲ್ಲಿದ್ದ ಭಿಕ್ಷುಕನ ಮನೆಯಲ್ಲಿ ಸಿಕ್ತು 10 ಲಕ್ಷ ರೂ.! appeared first on Public TV.

Source: publictv.in

Source link