ತಿರುಮಲದಲ್ಲಿ ಜನವೋ ಜನ; ದೇವರ ದರ್ಶನ ಸಿಗಲು 2 ದಿನ ಕಾಯಬೇಕು: ಟಿಟಿಡಿ | Heavy summer rush at Tirumala TTD sources said it will take about two days for the darshan


ತಿರುಮಲದಲ್ಲಿ ಜನವೋ ಜನ; ದೇವರ ದರ್ಶನ ಸಿಗಲು 2 ದಿನ ಕಾಯಬೇಕು: ಟಿಟಿಡಿ

ತಿರುಪತಿ ಸನ್ನಿದಿಯಲ್ಲಿ ಭಕ್ತರು (ಸಂಗ್ರಹ ಚಿತ್ರ)

ಹಲವಾರು ರಾಜ್ಯಗಳಲ್ಲಿ ಎಸ್‌ಎಸ್‌ಸಿ ಮತ್ತು ಇಂಟರ್‌ಮೀಡಿಯೇಟ್ ಪರೀಕ್ಷೆಗಳು ಮುಕ್ತಾಯವಾದ ನಂತರ ಈ ವಾರಾಂತ್ಯದಲ್ಲಿ ತಿರುಮಲದಲ್ಲಿ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ

ತಿರುಪತಿ: ತಿರುಮಲದಲ್ಲಿ(Tirumala) ಶನಿವಾರ ಭಕ್ತರ ಸಂಖ್ಯೆ ಜಾಸ್ತಿ ಆಗಿದ್ದು ದೇವರ ಉಚಿತ ದರ್ಶನ ಸಿಗಬೇಕಾದರೆ  48ಗಂಟೆಗಳಿಗಿಂತಲೂ ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯಬೇಕಿದೆ. ಶನಿವಾರ ದೇವಾಲಯದ ಸಂಕೀರ್ಣದ ಹೊರಗೆ ಭಕ್ತಾದಿಗಳ ಉದ್ದನೆಯ ಸರತಿ ಸಾಲುಗಳು ಕಂಡುಬಂದಿದ್ದು, ದರ್ಶನಕ್ಕೆ ಎರಡು ದಿನಗಳು ಬೇಕಾಗುತ್ತದೆ ಎಂದು ಟಿಟಿಡಿ (TTD) ಮೂಲಗಳು ತಿಳಿಸಿವೆ.  ಹಲವಾರು ರಾಜ್ಯಗಳಲ್ಲಿ ಎಸ್‌ಎಸ್‌ಸಿ ಮತ್ತು ಇಂಟರ್‌ಮೀಡಿಯೇಟ್ ಪರೀಕ್ಷೆಗಳು ಮುಕ್ತಾಯವಾದ ನಂತರ ಈ ವಾರಾಂತ್ಯದಲ್ಲಿ ತಿರುಮಲದಲ್ಲಿ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಅಲಿಪಿರಿ ಟೋಲ್ ಪ್ಲಾಜಾ, ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗಗಳು ಶನಿವಾರ ದಿನವಿಡೀ ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ಯಾವುದೇ ಪೂರ್ವ ದರ್ಶನ ಕಾಯ್ದಿರಿಸದೆ ತಿರುಮಲಕ್ಕೆ ಆಗಮಿಸಿದ ಹತ್ತಾರು ಭಕ್ತರು 2 ಕಿಲೋಮೀಟರ್‌ಗೂ ಮೀರಿದ ಉಚಿತ ದರ್ಶನ ಸರತಿ ಸಾಲಿನಲ್ಲಿ ಸೇರಿದ್ದರಿಂದ ದೇವಾಲಯ ನಗರದಲ್ಲಿ ದರ್ಶನಕ್ಕೆ ನಿಂತಿದ್ದ ಜನರ ಸಾಲು ಮತ್ತಷ್ಟು ಬೆಳೆಯಿತು.

ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಎ.ವಿ.ಧರ್ಮ ರೆಡ್ಡಿ, ಸಿವಿಎಸ್‌ಒ ನರಸಿಂಹ ಕಿಶೋರ್ ಮತ್ತಿತರರು ದಿನವಿಡೀ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.  ವಸತಿ, ಕ್ಯೂ ಕಾಂಪ್ಲೆಕ್ಸ್, ದೇವಸ್ಥಾನ, ಲಡ್ಡು ಕೌಂಟರ್‌ಗಳು, ಅನ್ನಪ್ರಸಾದ ಕೌಂಟರ್‌ಗಳು ಇತ್ಯಾದಿಗಳಲ್ಲಿ ನಿಯೋಜನೆಗೊಂಡ ಸಿಬ್ಬಂದಿಗೆ ಯಾವುದೇ ರೀತಿಲ್ಲಿ ಭಕ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅವರು ಸೂಚಿಸಿದರು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಕುಡಿಯುವ ನೀರು, ಆಹಾರ, ಹಾಲು ನಿರಂತರವಾಗಿ ಪೂರೈಕೆಯಾಗುವಂತೆ ಟಿಟಿಡಿ ಅಧಿಕಾರಿಗಳು ನೋಡಿಕೊಂಡರು. ಟಿಟಿಡಿ ಮೂಲಗಳ ಪ್ರಕಾರ ಶುಕ್ರವಾರ 73,358 ಭಕ್ತರು ದರ್ಶನ ಪಡೆದಿದ್ದಾರೆ. ಟಿಟಿಡಿ ಹುಂಡಿಯ ಆದಾಯ 4.11 ಕೋಟಿ ರೂ. ಆಗಿದೆ.

TV9 Kannada


Leave a Reply

Your email address will not be published. Required fields are marked *