ಬೆಂಗಳೂರು: ಅಕ್ರಮ ಹಣ ಸಂಪಾದನೆ ಆರೋಪದಡಿ ಕೆಲವು ದಿನಗಳ ಕಾಲ ತಿಹಾರ್​ ಜೈಲಿನಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಆ ಸಮಯಲ್ಲಿ ಸಹಾಯ ಮಾಡಿದ್ದ ದೆಹಲಿ ಮೂಲದ 45 ವರ್ಷದ ವ್ಯಕ್ತಿಯನ್ನ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಿಸಿದ್ದಾರೆ ಎನ್ನಲಾಗಿದೆ.

ಡಿಕೆಎಸ್ ಜೈಲಿನಲ್ಲಿದ್ದಾಗ ಮೈಯುದ್ದೀನ್ 40 ದಿನಗಳ ಕಾಲ ಅವರ ರೂಂ ಕ್ಲೀನ್ ಮಾಡೋದು, ಬಟ್ಟೆ ತೊಳೆಯೋದು ಹಾಗೂ ಊಟ ತಂದುಕೊಡುವ ಮೂಲಕ ಸಹಾಯ ಮಾಡುತ್ತಿದ್ದ ಎನ್ನಲಾಗಿದೆ. ಮೈಯುದ್ದೀನ್ ಸೇವೆಗೆ ಮನಸೋತ ಡಿಕೆ ಶಿವಕುಮಾರ್ ಸದ್ಯ ಜೈಲಿನಲ್ಲಿದ್ದ ಮೈಯುದ್ದೀನ್ ಅವರನ್ನ ಬಿಡುಗಡೆಗೊಳಿಸಿದ್ದಾರಂತೆ.

ಮೈಯುದ್ದೀನ್, ಜೈಲಿನಿಂದ ಬಿಡುಗಡೆ ಹೊಂದಿದವ

ಮೈಯುದ್ದೀನ್ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದು ಪರಹಾರದ ಹಣ ನೀಡಲಾಗದೇ ಜೈಲು ಸೇರಿದ್ದ ಎನ್ನಲಾಗಿದ್ದು ಡಿಕೆ ಶಿವಕುಮಾರ್ ಅಗತ್ಯವಿದ್ದ 5 ಲಕ್ಷ ರೂಗಳನ್ನ ನೀಡಿ ಆತನನ್ನ ಬಿಡುಗಡೆ ಮಾಡಿಸಿದ್ದಾರೆ ಎನ್ನಲಾಗಿದೆ. ಕೇವಲ ಬಿಡುಗಡೆ ಮಾಡಿಸುವುದಷ್ಟೇ ಅಲ್ಲದೆ ಆತನಿಗೆ ತಮ್ಮ ದೆಹಲಿಯ ನಿವಾಸದಲ್ಲಿ ಸಹಾಯಕ ಕೆಲಸವನ್ನೂ ನೀಡಿದ್ದಾರಂತೆ. ಮತ್ತೋರ್ವನಿಗೆ ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸಿದ್ದು ಈ ರೀತಿ ಒಟ್ಟು ಮೂವರನ್ನ ಡಿಕೆಎಸ್ ಬಿಡುಗಡೆ ಮಾಡಿಸಿದ್ದಾರೆಂಬ ಮಾಹಿತಿ ಇದೆ.

The post ತಿಹಾರ್ ಜೈಲಿನಲ್ಲಿ ಸಹಾಯ ಮಾಡಿದವನನ್ನ 5 ಲಕ್ಷ ಕೊಟ್ಟು ಬಿಡುಗಡೆ ಮಾಡಿಸಿದ ಡಿಕೆಎಸ್​ appeared first on News First Kannada.

Source: newsfirstlive.com

Source link