ತುಂಗಭದ್ರಾ ಒಡಲಲ್ಲಿ ಹೆಚ್ಚಿದ ಹರಿವಿನ ಪ್ರಮಾಣ; ಜಾನುವಾರುಗಳ ಜೊತೆ ನಡುಗಡ್ಡೆಯಲ್ಲಿ ಸಿಲುಕಿದ ಮೂವರು


ಬಳ್ಳಾರಿ:  ತುಂಗಭದ್ರಾ ನದಿಯಲ್ಲಿ ಏಕಾಏಕಿ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಮೂವರು ಕುರಿಗಾಹಿಗಳು ನಡುಗಡ್ಡೆಯಲ್ಲಿ ಸಿಲುಕಿರುವ ಘಟನೆ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

ತುಂಗಭದ್ರಾ ನದಿಯಲ್ಲಿ ಜಿಲ್ಲೆಯಲ್ಲಿ  ಭರ್ಜರಿ ಮಳೆ ಹಿನ್ನೆಲೆ ಹರಿವಿನ ಪ್ರಮಾಣ ದಿಢೀರ್​ನೆ ಹೆಚ್ಚಾಗಿದೆ.. ಪರಿಣಾಮ ಕುರಿ ಮೇಯಿಸಲು ತೆರಳಿದ್ದ ಗ್ರಾಮದ ವೀರೇಶಪ್ಪ, ಮಾರಪ್ಪ ಹಾಗೂ ಮೂಕಯ್ಯ ಎಂಬುವವರು ನಡುಗಡ್ಡೆಯಲ್ಲಿ ಸಿಕ್ಕು ಸಂಕಷ್ಟ ಎದುರಿಸುತ್ತಿದ್ದಾರೆ. ನಿನ್ನೆಯಿಂದ ತುಂಗಭದ್ರ ನದಿ ನಡುಗಡ್ಡೆಯಲ್ಲಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಬರುವಾಗ ಬರಲಿಲ್ಲ ಮಳೆರಾಯ.. ಹೋಗುವಾಗ ಮುನಿದ ವರುಣದೇವ.. ಎಲ್ಲೆಲ್ಲಿ ಏನೆಲ್ಲಾ ಆಗ್ತಿದೆ..?

ಇನ್ನು ಇವರ ಜೊತೆ ನೂರಕ್ಕೂ ಅಧಿಕ ಕುರಿಗಳು ಸಹಿತ ನಡುಗಡ್ಡೆಯಲ್ಲಿ ಸಿಲುಕೊಂಡಿದ್ದು ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಚರಣೆ ಶುರು ಮಾಡಿದ್ದಾರೆ ಎಂದು ನ್ಯೂಸ್​ಫಸ್ಟ್​ಗೆ ಸಿರಗುಪ್ಪ ತಹಶೀಲ್ದಾರ್​ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ರೈತರ ಬೆನ್ನು ಮುರಿದ ಮಳೆರಾಯ; ಶಿವಮೊಗ್ಗ ಜಿಲ್ಲೆಯಲ್ಲಿ 100 ಹೆಕ್ಟೇರ್​​ ಭತ್ತ & ಮೆಕ್ಕೆಜೋಳ ನಾಶ

 

News First Live Kannada


Leave a Reply

Your email address will not be published. Required fields are marked *