‘ತುಂಬಾ ನೋವಾಗ್ತಿದೆ..’ ವಿಜಯ್​ ಜೊತೆ ಸಿನಿಮಾ ಮಾಡಿದ್ದನ್ನ ಸ್ಮರಿಸಿದ ಶಿವರಾಜ್​ಕುಮಾರ್​​

‘ತುಂಬಾ ನೋವಾಗ್ತಿದೆ..’ ವಿಜಯ್​ ಜೊತೆ ಸಿನಿಮಾ ಮಾಡಿದ್ದನ್ನ ಸ್ಮರಿಸಿದ ಶಿವರಾಜ್​ಕುಮಾರ್​​

ಬೆಂಗಳೂರು: ಅಪಘಾತದಿಂದಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ನಟ ಸಂಚಾರಿ ವಿಜಯ್ ಇಂದು ಕೊನೆಯುಸಿರೆಳೆದಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸ್ಯಾಂಡಲ್​ವುಡ್​ನ ಹಲವಾರು ಕಲಾವಿದರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ವಿಜಯ್​​ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, ನನಗೆ ಮಾತುಗಳು ಬರ್ತಿಲ್ಲ.. ವಿಜಯ್ ದೂರ ಆಗಿರೋದು ಬಹಳ ಕಷ್ಟ ಆಗ್ತಿದೆ ಎಂದರು. ಸಂಚಾರಿ ವಿಜಯ್ ಜೊತೆ ನಾನು ಚಿತ್ರ ಮಾಡಿದ್ದೆ. ತುಂಬಾ ವಿಭಿನ್ನವಾಗಿ ಮಾಡಬೇಕೆಂಬ ಆಸೆ ಕ್ಯೂರಿಯಾಸಿಟಿ ಇತ್ತು ಎಂದು ಸ್ಮರಿಸಿಕೊಂಡರು.

ಸಂಚಾರಿ ವಿಜಯ್​ರ ನಾನು ಅವನಲ್ಲ ಅವಳು ಚಿತ್ರ ನೋಡಿದಾಗ ತುಂಬಾ ಖುಷಿ ಆಗಿತ್ತು.  ಹೆಲ್ಪ್ ಮಾಡಬೇಕೆಂಬ ಮನೋಭಾವ ವಿಜಯ್​ಗೆ ಇತ್ತು. ಇದಕ್ಕಾಗಿ ತನ್ನ ಅಂಗಾಗ ದಾನ ಮಾಡಿದ್ದಾನೆ. ತುಂಬಾ ನೋವಾಗ್ತಿದೆ ಎಂದು ಶಿವರಾಜ್​ಕುಮಾರ್ ದುಃಖ ವ್ಯಕ್ತಪಡಿಸಿದ್ರು.

The post ‘ತುಂಬಾ ನೋವಾಗ್ತಿದೆ..’ ವಿಜಯ್​ ಜೊತೆ ಸಿನಿಮಾ ಮಾಡಿದ್ದನ್ನ ಸ್ಮರಿಸಿದ ಶಿವರಾಜ್​ಕುಮಾರ್​​ appeared first on News First Kannada.

Source: newsfirstlive.com

Source link