ಜ್ಕುಮಾರ್ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಲಕ್ಷ್ಮೀ. ಈ ಬಗ್ಗೆ ಅವರಿಗೆ ತುಂಬಾನೇ ಖುಷಿ ಇದೆ. ಈ ವಿಚಾರದ ಕುರಿತು ಅವರು ಮಾತನಾಡಿದ್ದಾರೆ. ‘ತುಂಬಾ ಪುಣ್ಯ ಮಾಡಿದ್ರೇನೇ ಅಣ್ಣಾವ್ರ ಜತೆ ನಟಿಸೋಕೆ ಆಗೋದು’ ಎಂದಿದ್ದಾರೆ ಅವರು.
[embed]https://www.youtube.com/watch?v=dMjvrEHConY[/embed]
2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏಪ್ರಿಲ್ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಏಪ್ರಿಲ್ 24 ಡಾ. ರಾಜ್ಕುಮಾರ್ ಅವರ (Rajkumar) ಜನ್ಮದಿನ. ಈ ವಿಶೇಷ ದಿನದಂದು ಈ ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ಲಕ್ಷ್ಮೀ (Lakshmi) ಕೂಡ ಪಾಲ್ಗೊಂಡಿದ್ದರು. ಅವರು ರಾಜ್ಕುಮಾರ್ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಬಗ್ಗೆ ಅವರಿಗೆ ತುಂಬಾನೇ ಖುಷಿ ಇದೆ. ಈ ವಿಚಾರದ ಕುರಿತು ಅವರು ಮಾತನಾಡಿದ್ದಾರೆ. ‘ತುಂಬಾ ಪುಣ್ಯ ಮಾಡಿದ್ರೇನೇ ಅಣ್ಣಾವ್ರ ಜತೆ ನಟಿಸೋಕೆ ಆಗೋದು’ ಎಂದಿದ್ದಾರೆ ಅವರು.