ನೀನಾ ಗುಪ್ತಾ ಉತ್ಸವ ಚಿತ್ರದ ಸೆಟ್‌ಗಳಿಂದ, ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅವ್ರು ಶೇರ್​ ಮಾಡಿರೋ ಚಿತ್ರದಲ್ಲಿ, ಕನ್ನಡ ಚಿತ್ರದ ಆಟೋ ರಾಜ ಶಂಕರ್​ನಾಗ್​ ಕಾಣಿಸಿಕೊಂಡಿರೋದು ತುಂಬಾ ಸ್ಪೆಷಲ್​. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ರೇಖಾ, ಅಮ್ಜದ್ ಖಾನ್, ಅನುರಾಧಾ ಪಟೇಲ್ ಮತ್ತು ಶೇಖರ್ ಸುಮನ್ ಕೂಡ ಇದ್ದರು.

ಇನ್ನೂ, ಬಾಲಿವುಡ್ ನಟಿ ತಮ್ಮ ಇನ್​ಸ್ಟಾಗ್ರಾಮ್ ಶೀರ್ಷಿಕೆಯಲ್ಲಿ “ಶಂಕರ್ ನಾಗ್ ಅವರೊಂದಿಗೆ ಉತ್ಸವ ಎಂಬ ಸುಂದರ ಚಿತ್ರದ ಸ್ಟಿಲ್ ಇದು. ನಿಮ್ಮನ್ನ ತುಂಬಾ ಮಿಸ್ ಮಾಡ್ಕೊಂತೀನಿ. ತುಂಬಾ ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ರಿ” ಅಂತ ಬರೆದುಕೊಂಡಿದ್ದಾರೆ. ಅಲ್ಲದೇ. ಆತ್ಮಚರಿತ್ರೆಯಲ್ಲಿ, ನೀನಾ ಗುಪ್ತಾ ಅವರು ನಟ-ನಿರ್ದೇಶಕ-ನಿರ್ಮಾಪಕರನ್ನು ಭೇಟಿಯಾದ ಮೊದಲ ಬಾರಿಗೆ ನೆನಪಿಸಿಕೊಂಡಿದ್ದಾರೆ.

“1984 ರಲ್ಲಿ, ನಾನು ಮೊದಲ ಬಾರಿಗೆ ಶಂಕರ್ ನಾಗ್ ಅವರನ್ನು ಸುದ್ರಾಕಾ ಅವರ ಸಂಸ್ಕೃತ ಚಲನಚಿತ್ರ ಮಚ್ಚಕತಿಕಾ (ದಿ ಲಿಟಲ್ ಕ್ಲೇ ಕಾರ್ಟ್) ಆಧಾರಿತ ಅವಧಿಯ ಚಿತ್ರವಾದ ಉತ್ಸವದ ಸೆಟ್​​ನಲ್ಲಿ ಭೇಟಿಯಾಗಿದ್ದೆ” ಅಂತ ಅವರು ತಮ್ಮ ಆತ್ಮಚರಿತ್ರೆ ಸಚ್ ಕಹುನ್ ತೋಹ್​ನಲ್ಲಿ ಬರೆದಿದ್ದಾರೆ.

 

The post ತುಂಬಾ ಬೇಗ ನಮ್ಮನ್ನು ಬಿಟ್ಟು ಹೋಗಿ ಬಿಟ್ರಿ.. ಶಂಕರ್​​ನಾಗ್ ನೆನೆದ ನೀನಾ ಗುಪ್ತಾ appeared first on News First Kannada.

Source: newsfirstlive.com

Source link