ಧಾರವಾಡ: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿವೆ. ಧಾರವಾಡ ಜಿಲ್ಲೆಯಲ್ಲೂ ಮಳೆ ಮುಂದುವರೆದಿದ್ದು ಕಂಬಾರಗಣವಿ ಸೇತುವೆ ಮಳೆಗೆ ಸಂಪೂರ್ಣ ಮುಳುಗಡೆಯಾಗಿದೆ.

ಧಾರವಾಡ ಜಿಲ್ಲೆಯ ಅಲ್ನಾವರ ತಾಲೂಕಿನ ಕಂಬಾರಗಣವಿ ಬ್ರಿಡ್ಜ್ ಮುಳುಗಡೆಯಾಗಿದ್ದು ಹಸುಗಳು ಬ್ರಿಡ್ಜ್ ದಾಟುವಾಗ 10ಕ್ಕೂ ಹೆಚ್ಚು ಹಸುಗಳು ನೋಡನೋಡುತ್ತಲೇ ನೀರಿನಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ. ಸಾಲಾಗಿ ಹಸುಗಳು ಸೇತುವೆ ದಾಟುವಾಗ ನೀರಿನ ಸೆಳೆತಕ್ಕೆ ಹಸುಗಳು ಜನರ ಕಣ್ಣಮುಂದೆಯೇ ಕೊಚ್ಚಿಹೋಗಿವೆ.. ಅವುಗಳನ್ನ ಉಳಿಸಿಕೊಳ್ಳಲಾಗದೇ ಜನರು ಅಸಹಾಯಕರಾಗಿದ್ದಾರೆ.

The post ತುಂಬಿ ಹರಿದ ನದಿ; ನೋಡನೋಡುತ್ತಲೇ ನೀರಿನಲ್ಲಿ ಕೊಚ್ಚಿಹೋದ 10 ಕ್ಕೂ ಹೆಚ್ಚು ಹಸುಗಳು appeared first on News First Kannada.

Source: newsfirstlive.com

Source link