ತುಂಬಿ ಹರಿಯುವ ನದಿಯಲ್ಲಿ ಹುಚ್ಚು ಸಾಹಸ; ಸೇತುವೆ ಕೆಳಕ್ಕೆ ಉರುಳಿಬಿದ್ದ ಟ್ರ್ಯಾಕ್ಟರ್

ತುಂಬಿ ಹರಿಯುವ ನದಿಯಲ್ಲಿ ಹುಚ್ಚು ಸಾಹಸ; ಸೇತುವೆ ಕೆಳಕ್ಕೆ ಉರುಳಿಬಿದ್ದ ಟ್ರ್ಯಾಕ್ಟರ್

ವಿಜಯಪುರ: ಜಿಲ್ಲೆಯಲ್ಲಿ ಡೋಣಿ ನದಿಯ ರಭಸಕ್ಕೆ ಸೇತುವೆಯ ಕೆಳಗೆ ಟ್ರ್ಯಾಕ್ಟರ್ ಉರುಳಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗುಂಡಕಾನಾಳ ಗ್ರಾಮದ ಮಧುಗೌಡ ಪಾಟೀಲ ಅವರ ಎಂಬುವವರಿಗೆ ಸೇರಿದ್ದ ಟ್ರ್ಯಾಕ್ಟರ್ ಹಡಗಿನಾಳ ಮಾರ್ಗದಲ್ಲಿ ಡೋಣಿ ಸೇತುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೆಲಮಟ್ಟದ ಸೇತುವೆಯ ಮೇಲೆ ವಾಹನ ಚಲಾಯಿಸುತ್ತಿರುವಾಗ ಟ್ರ್ಯಾಕ್ಟರ್ ಸೇತುವೆಯ ಕೆಳಗೆ ಉರುಳಿದೆ.

 

ತಾಳಿಕೋಟಿ ಪಟ್ಟಣದಿಂದ ಮೂಕಿಹಾಳ ಗ್ರಾಮದತ್ತ ಹೊರಟಿದ್ದ ಟ್ರ್ಯಾಕ್ಟರ್ ಡೋಣಿ ನದಿಯ ಮೇಲೆ ಪ್ರವಾಹದ ನೀರು ಇದ್ದರೂ ಕೂಡಾ ಚಾಲಕ ಪ್ರವಾಹದಲ್ಲಿಯೇ ನದಿ ದಾಟಲು ಪ್ರಯತ್ನಿಸಿದ್ದು ನದಿಯ ಸೆಳವಿಗೆ ಸಿಲುಕಿ ನದಿಗೆ ಉರುಳಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸೇತುವೆಯ ಸೆಳವಿಗೆ ಸಿಲುಕಿದ್ದ ಟ್ರ್ಯಾಕ್ಟರ್ ಮೇಲೆತ್ತಲು ಜೆಸಿಬಿ ಬಳಸಿ ಅರ್ಧ ಘಂಟೆಗಳ ಕಾಲ ಪ್ರಯತ್ನಿಸಿ ಜೆಸಿಬಿಯ ಸಹಾಯದಿಂದ ಕೊನೆಗೆ ಟ್ರ್ಯಾಕ್ಟರ್ ಮೇಲೆತ್ತಲಾಯಿತು.

The post ತುಂಬಿ ಹರಿಯುವ ನದಿಯಲ್ಲಿ ಹುಚ್ಚು ಸಾಹಸ; ಸೇತುವೆ ಕೆಳಕ್ಕೆ ಉರುಳಿಬಿದ್ದ ಟ್ರ್ಯಾಕ್ಟರ್ appeared first on News First Kannada.

Source: newsfirstlive.com

Source link