ಹಾವೇರಿ: ಕೊರೊನಾ ಸಮಯದಲ್ಲಿ ರಜೆಯನ್ನೂ ಹಾಕದೆ ಸೋಂಕಿನ ವಿರುದ್ಧ ಹೋರಾಟಕ್ಕಿಳಿದಿರುವ ಫ್ರಂಟ್​ಲೈನ್​ ವಾರಿಯರ್ಸ್​​ಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು. ತಮಗೂ ಕೊರೊನಾ ಸೋಂಕು ಬರುವ ಭಯದ ನಡುವೆಯೂ ಜನಸೇವೆ ಮಾಡುತ್ತಿರುವ ಈ ಫ್ರಂಟ್​ಲೈನ್ ವಾರಿಯರ್ಸ್​ಗಳಿಲ್ಲದೇ ಹೋಗಿದ್ದರೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗ್ತಿತ್ತು ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಅದ್ರಲ್ಲೂ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಏಳು ತಿಂಗಳ ತುಂಬ ಗರ್ಭಿಣಿಯಾಗಿರುವ ಮಹಿಳಾ ಪಿಎಸ್​ಐವೊಬ್ಬರು ಮಾತೃತ್ವದ ರಜೆಯನ್ನೂ ಪಡೆಯದೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ನಗರ ಪೊಲೀಸ್ ಠಾಣೆಯ ಪಿಎಸ್​​ಐ ದೀಪು ಎಂ.ಟಿ. ಅವರು 7 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಸಹ ಕೊರೊನಾ ಪೊಲೀಸ್ ಡ್ಯೂಟಿಗೆ ಹಾಜರಾಗಿದ್ದಾರೆ. ಹಗಲು ರಾತ್ರಿ ಎನ್ನದೆ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಕಳೆದ 3 ವರ್ಷಗಳಿಂದ ಹಿರೆಕೇರೂರು ಪಟ್ಟಣದಲ್ಲಿ ಪಿಎಸ್​ಐ ಆಗಿ ಸೇವೆ ಸಲ್ಲಿಸುತ್ತಿರುವ ದೀಪು ಅವರು ತುಂಬು ಗರ್ಭಿಣಿಯಾಗಿದ್ದರೂ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಪ್ರಸಂಶೆಗೊಳಗಾಗಿದ್ದಾರೆ.

The post ತುಂಬು ಗರ್ಭಿಣಿಯಾಗಿದ್ರೂ ಕೊರೊನಾ ಡ್ಯೂಟಿಗೆ ಹಾಜರ್.. ಇವರಿಗಿರಲಿ ನಿಮ್ಮದೊಂದು ಸೆಲ್ಯೂಟ್ appeared first on News First Kannada.

Source: newsfirstlive.com

Source link