‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ | Kubra Sait Face Sexual abuse in Bengaluru hotel write in Open Book: Not Quite a Memoir


‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ

ಕುಬ್ರಾ ಸೇಠ್​

‘ಒಮ್ಮೆ ಕಾರಿನಲ್ಲಿ ಹೋಗುವಾಗ ನನ್ನ ಬಟ್ಟೆಯನ್ನು ಸರಿಸಿ ತೊಡೆಯನ್ನು ಸವರಿದ್ದ. ನಂತರ ನಮ್ಮ ಮನೆಗೆ ಆತ ನಿರಂತರವಾಗಿ ಭೇಟಿ ನೀಡುತ್ತಿದ್ದ. ನನ್ನಮ್ಮ ನಗುತ್ತಲೇ ಅಡುಗೆ ಮಾಡಿ ಬಡಿಸುತ್ತಿದ್ದಳು’ ಎಂದು ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ನಟಿ ಕುಬ್ರಾ ಸೇಠ್ (Kubbra Sait)​ ಅವರು ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಅವರು ಬರಹಗಾರ್ತಿ ಕೂಡ ಹೌದು. ಅವರು ಈಗ ‘ಓಪನ್​ ಬುಕ್’ (Open Book) ಹೆಸರಿನ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ಅದರಲ್ಲಿ ಅವರು ತಮಗಾದ ಲೈಂಗಿಕ ದೌರ್ಜನ್ಯವನ್ನು ವಿವರಿಸಿದ್ದಾರೆ. ಇದು ಸಾಕಷ್ಟು ಚರ್ಚೆ ಆಗುತ್ತಿದೆ. ಕುಬ್ರಾ 17ನೇ ವಯಸ್ಸಿಗೆ ಲೈಂಗಿಕ ಶೋಷಣೆಗೆ ಒಳಗಾದರು ಅನ್ನೋದು ಬೇಸರದ ಸಂಗತಿ.

‘ನನಗೆ ಆಗಿನ್ನೂ 17 ವರ್ಷ. ನಾನು ಆಗ ನಿತ್ಯ ಬೆಂಗಳೂರಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡುತ್ತಿದೆ. ಈ ರೆಸ್ಟೋರೆಂಟ್​ನ ಮಾಲೀಕರು ನನಗೆ ಹಾಗೂ ನನ್ನ ಸಹೋದರ ದ್ಯಾನಿಶ್​​ಗೆ ಕ್ಲೋಸ್ ಇದ್ದರು. ನನ್ನ ತಾಯಿ ಆಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಹೊರ ಬರಲು ಆ ಹೋಟೆಲ್ ಮಾಲೀಕ ಸಹಾಯ ಮಾಡಿದ್ದ. ನಂತರ ನನಗೆ ಲೈಂಗಿಕ ಕಿರುಕುಳ ನೀಡಿದ್ದ. ನನ್ನನ್ನು ಅಂಕಲ್ ಎಂದು ಕರೆಯಬೇಡ ಎಂದು ಹೇಳುತ್ತಿದ್ದ’ ಎಂದು ಪುಸ್ತಕದಲ್ಲಿ ತಮ್ಮ ದುಃಖ ತೋಡಿಕೊಂಡಿದ್ದಾರೆ ಅವರು.

‘ಒಮ್ಮೆ ಕಾರಿನಲ್ಲಿ ಹೋಗುವಾಗ ನನ್ನ ಬಟ್ಟೆಯನ್ನು ಸರಿಸಿ ತೊಡೆಯನ್ನು ಸವರಿದ್ದ. ನಂತರ ನಮ್ಮ ಮನೆಗೆ ಆತ ನಿರಂತರವಾಗಿ ಭೇಟಿ ನೀಡುತ್ತಿದ್ದ. ನನ್ನಮ್ಮ ನಗುತ್ತಲೇ ಅಡುಗೆ ಮಾಡಿ ಬಡಿಸುತ್ತಿದ್ದಳು. ಅವನು ನನ್ನ ಕತ್ತಿಗೆ ಕಿಸ್ ಮಾಡಿ ನೀನು ನನ್ನ ಫೇವರಿಟ್ ಎಂದು ಹೇಳುತ್ತಿದ್ದ. ನನಗೆ ಅದು ಸರಿ ಎನಿಸುತ್ತಿರಲಿಲ್ಲ. ಆದರೂ ನಾನು ಸುಮ್ಮನೆ ಇರುತ್ತಿದೆ’ ಎಂದು ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

TV9 Kannada


Leave a Reply

Your email address will not be published.