ತುಮಕೂರಲ್ಲಿ ಉತ್ತಮ ಮಳೆ ಹಿನ್ನೆಲೆ, ಮದ್ದೂರು ಬಳಿ ಶಿಂಷಾ ನದಿಯಲ್ಲಿ ನೀರುಪಾಲಾಗಿದ್ದ ತಮಿಳುನಾಡು ವ್ಯಕ್ತಿಯ ರಕ್ಷಣೆ | Fire engine staff rescued man who drowned river in mandya


ತುಮಕೂರಲ್ಲಿ ಉತ್ತಮ ಮಳೆ ಹಿನ್ನೆಲೆ, ಮದ್ದೂರು ಬಳಿ ಶಿಂಷಾ ನದಿಯಲ್ಲಿ ನೀರುಪಾಲಾಗಿದ್ದ ತಮಿಳುನಾಡು ವ್ಯಕ್ತಿಯ ರಕ್ಷಣೆ

ಶಿಂಷಾ ನದಿಯಲ್ಲಿ ಸಿಲುಕಿದ ವ್ಯಕ್ತಿ ರಕ್ಷಣೆ

ಮಂಡ್ಯ: ಶಿಂಷಾ ನದಿಯಲ್ಲಿ ಸಿಲುಕಿದ ವ್ಯಕ್ತಿಯನ್ನು ರಕ್ಷಣೆ (Rescue) ಮಾಡಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಬಳಿ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ, ಮದ್ದೂರು ಬಳಿಯ ಶಿಂಷಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿತ್ತು. ಹೀಗಾಗಿ ನಿನ್ನೆ (ನವೆಂಬರ್ 16) ಸಂಜೆ ಬಟ್ಟೆ ತೊಳೆಯಲು ಇಳಿದಿದ್ದ ಏಳುಮಲೈ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ನೀರು ಹೆಚ್ಚಾಗುತ್ತಿದ್ದಂತೆ ಕೂಗಿಕೊಂಡಿದ್ದ ಏಳುಮಲೈ ಸಹಾಯಕ್ಕೆ ಸ್ಥಳೀಯರು ಆಗಮಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ತಮಿಳುನಾಡು ಮೂಲದ ಏಳುಮಲೈ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

TV9 Kannada


Leave a Reply

Your email address will not be published. Required fields are marked *