
ತುಮಕೂರಿನಲ್ಲಿ ನಡೆದ ಮಡಿವಾಳ ಸಮಾಜದ ಸಮಾವೇಶ
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಅಂತಾ ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರುಗಳ ಮಧ್ಯೆ ಮುನಿಸು, ಭಿನ್ನಾಭಿಪ್ರಾಯಗಳು ಪದೇ ಪದೇ ಗೊಚರವಾಗುತ್ತಿವೆ.
ತುಮಕೂರು: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ (Congress) ಭರ್ಜರಿ ತಯಾರಿ ನಡೆಸಿದ್ದು, ನಿನ್ನೆ (ಮೇ 22) ಜಿಲ್ಲೆಯಲ್ಲಿ ಎರಡು ಬೃಹತ್ ಸಮಾವೇಶಗಳು ನಡೆದಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಬಣದಿಂದ ಮೊದಲು ಅಹಿಂದ ಅಸ್ತ್ರ ಪ್ರಯೋಗಿಸಲಾಗಿದೆ. ಇದರಂತೆ ನಿನ್ನೆ ಮಡಿವಾಳ ಸಮಾಜದ ರಾಜ್ಯ ಸಮಾವೇಶ ಹಾಗೂ ಅಲ್ಪಸಂಖ್ಯಾತರ ಜಿಲ್ಲಾ ಸಮಾವೇಶ ನಡೆಸಲಾಗಿದೆ. ಆದರೆ ಈ ಸಮಾವೇಶಕ್ಕೆ ಡಿಸಿಎಮ್ ಡಾ. ಜಿ ಪರಮೇಶ್ವರ್ ಭಾಗಿಯಾಗಿರಲಿಲ್ಲ. ಜಿಲ್ಲೆಯಲ್ಲಿ ಇದ್ದರೂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಅಂತಾ ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರುಗಳ ಮಧ್ಯೆ ಮುನಿಸು, ಭಿನ್ನಾಭಿಪ್ರಾಯಗಳು ಪದೇ ಪದೇ ಗೊಚರವಾಗುತ್ತಿವೆ. ನಿನ್ನೆ ನಡೆದ ಮಡಿವಾಳ ಸಮಾಜದ ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಸಮುದಾಯದ ಮುಖಂಡರಿಂದ ಹಿಡಿದು ಮಾಜಿ ಶಾಸಕ ಕೆಎನ್ ರಾಜಣ್ಣವರೆಗೂ ಸಿದ್ದರಾಮಯ್ಯರನ್ನ ಹಾಡಿಹೊಗಳಿದ್ದಾರೆ. ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ನಂಜಪ್ಪ ಸಿದ್ದರಾಮಯ್ಯರೇ ನಮಗೆಲ್ಲ ಅಂತಾ ಹೊಗಳಿ, ಸಮಾಜ ನಿಮ್ಮ ಜೊತೆ ಇರುತ್ತೆ ಅಂತಾ ಹೇಳಿದರು.
ಈ ಬೃಹತ್ ಸಮಾವೇಶಕ್ಕೆ ಮಾಜಿ ಡಿಸಿಎಮ್ ಪರಮೇಶ್ವರ್ ಗೈರಾಗಿದ್ದರು. ತುಮಕೂರಿನ ಹೆಗ್ಗೆರೆಯ ಸಿದ್ದಾರ್ಥ ಮೆಡಿಕಲ್ ಕಾಲೇಜು ಪಕ್ಕದಲ್ಲೇ ಸಮಾವೇಶ ನಡೆದರೂ ಕೂಡ ಸಮಾವೇಶಕ್ಕೆ ಬಂದಿಲ್ಲ. ಶನಿವಾರವೇ ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಪ್ರಮುಖರಿಗೆ ತಮ್ಮ ಕಾಲೇಜಿನಲ್ಲೇ ಉಪಹಾರ ವ್ಯವಸ್ಥೆ ತಯಾರಿ ಮಾಡಲು ಸಿದ್ಧತೆ ಮಾಡಿದ್ದರು ಎನ್ನಲಾಗಿದೆ.