ತುಮಕೂರಿನಲ್ಲಿ ಹಿಂದೂಗಳ ಮತಾಂತರಕ್ಕೆ ಸಂಚು: ಭಗವದ್ಗೀತೆ ಹೋಲುವ ಪುಸ್ತಕದಲ್ಲಿ ಹಿಂದೂ ದೇವತೆಗಳ ಅವಹೇಳನ – provoking cast conversion books sell and distribution increased in tumkur


ಈ ಪುಸ್ತಕದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ತುಮಕೂರಿನ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಪುಸ್ತಕಗಳನ್ನು ಜನರಿಗೆ ಹಂಚಲಾಗುತ್ತಿದೆ.

ತುಮಕೂರಿನಲ್ಲಿ ಹಿಂದೂಗಳ ಮತಾಂತರಕ್ಕೆ ಸಂಚು: ಭಗವದ್ಗೀತೆ ಹೋಲುವ ಪುಸ್ತಕದಲ್ಲಿ ಹಿಂದೂ ದೇವತೆಗಳ ಅವಹೇಳನ

ಭಗವದ್ಗೀತೆ ಹೋಲುವ ಪುಸ್ತಕದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನ

ತುಮಕೂರು: ಕಲ್ಪತರು ನಾಡಲ್ಲಿ ಸದ್ದಿಲ್ಲದೇ ಹಿಂದೂಗಳ ಮತಾಂತರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಭಗವದ್ಗೀತೆ ಪುಸ್ತಕ ಹಂಚಿಕೆ ನೆಪದಲ್ಲಿ ಮತಾಂತರ ಮಾಡಲು ಹುನ್ನಾರ ನಡೆದಿದೆ ಎನ್ನಲಾಗುತ್ತಿದೆ. ತುಮಕೂರು ಜಿಲ್ಲೆಯ ಹಲವು ಕಡೆ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಪುಸ್ತಕ ಹೋಲುವ ಪುಸ್ತಕಗಳ ಮಾರಾಟ, ಹಂಚಿಕೆ ಮಾಡಿ ಮತಾಂತರ ಮಾಡಲಾಗುತ್ತಿದೆ.

ತುಮಕೂರಿನಲ್ಲಿ ಭಗವದ್ಗೀತೆ ಪುಸ್ತಕ ಹೋಲುವ ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ  ಪುಸ್ತಕಗಳ ಮಾರಾಟ ಹೆಚ್ಚಾಗಿದೆ. 98 ರೂಪಾಯಿ ದರದ ಪುಸ್ತಕವನ್ನು ಕೇವಲ 30ರೂಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೆಲವು ಕಡೆ ಉಚಿತವಾಗಿ ಪುಸ್ತಕ ಕೊಟ್ಟು ಮತಾಂತರಕ್ಕೆ ಸಂಚು ಮಾಡಲಾಗುತ್ತಿದೆ. ಇನ್ನು ಈ ಪುಸ್ತಕದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ತುಮಕೂರಿನ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಪುಸ್ತಕಗಳನ್ನು ಜನರಿಗೆ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

TV9 Kannada


Leave a Reply

Your email address will not be published.