ತುಮಕೂರಿನ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಕೈಯಿಂದ ಮಗನಿಗೆ ನಾಮಕರಣ ಮಾಡಿಸಿದ ಅಭಿಮಾನಿ; ತನ್ನ ಹೆಸರಿಟ್ಟು ಉಡುಗೊರೆ ಕೊಟ್ಟ ಸಿದ್ದು | Siddaramaiah fan gangadhar demands to put siddaramaiah name to his son in tumkur program


ತುಮಕೂರಿನ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಕೈಯಿಂದ ಮಗನಿಗೆ ನಾಮಕರಣ ಮಾಡಿಸಿದ ಅಭಿಮಾನಿ; ತನ್ನ ಹೆಸರಿಟ್ಟು ಉಡುಗೊರೆ ಕೊಟ್ಟ ಸಿದ್ದು

ಸಿದ್ದರಾಮಯ್ಯ

ನಾನು ನಿಮ್ಮ ಅಭಿಮಾನಿ, ನೀವು ಮುಂದೆಯೂ ಸಿಎಂ ಆಗಬೇಕು. ನೀವು ದೀನದಲಿತರ ಆಶಾಕಿರಣ, ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಮಗನಿಗೆ ಈ ವೇದಿಕೆಯಲ್ಲಿ ಸಿದ್ದರಾಮಯ್ಯ ಎಂದು ಹೆಸರು ನಾಮಕರಣ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿ ಗಂಗಾಧರ ಮನವಿ ಮಾಡಿದ್ರು.

ತುಮಕೂರು: ಜಿಲ್ಲೆಯ ಬಾಲಭವನದಲ್ಲಿ ನಡೆದ ಜನಮನ ಪ್ರತಿಷ್ಠಾನ, ಸಿದ್ದರಾಮಯ್ಯ ಆಡಳಿತ, ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ತನ್ನ ಮಗನಿಗೆ ಸಿದ್ದರಾಮಯ್ಯ ಎಂದು ಹೆಸರು ಇಡಲು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿ ಮನವಿ ಮಾಡಿದ ಘಟನೆ ನಡೆದಿದೆ. ಸಂವಾದದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಅವರ ಅಭಿಮಾನಿಯೊಬ್ಬರು ತಮ್ಮ ಮಗನಿಗೆ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ(Siddaramaiah) ಎಂದು ಹೆಸರು ಇಡುವಂತೆ ಮನವಿ ಮಾಡಿದ್ದಾರೆ.

ನಾನು ನಿಮ್ಮ ಅಭಿಮಾನಿ, ನೀವು ಮುಂದೆಯೂ ಸಿಎಂ ಆಗಬೇಕು. ನೀವು ದೀನದಲಿತರ ಆಶಾಕಿರಣ, ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಮಗನಿಗೆ ಈ ವೇದಿಕೆಯಲ್ಲಿ ಸಿದ್ದರಾಮಯ್ಯ ಎಂದು ಹೆಸರು ನಾಮಕರಣ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿ ಗಂಗಾಧರ ಮನವಿ ಮಾಡಿದ್ರು. ಈ ವೇಳೆ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ಗಂಗಾಧರ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿ 500 ರೂ ಉಡುಗೊರೆಯಾಗಿ ನೀಡಿದ್ರು. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಿಪ್ಪಾಪುರ ಗ್ರಾಮದ ನಿವಾಸಿ ಗಂಗಾಧರ ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಬಂದಿದ್ದು ತಮ್ಮ ಮಗನಿಗೆ ಸಿದ್ದರಾಮಯ್ಯನವರ ಕೈಯಿಂದಲೇ ನಾಮಕರಣ ಮಾಡಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *