ತುಮಕೂರು: ಅನುದಾನಿತ ಶಾಲೆಯೊಂದರ ಕಾರ್ಯದರ್ಶಿಯ ಮಗನಿಂದ ಮೃಗೀಯ ವರ್ತನೆ, ಮಕ್ಕಳ ಮೇಲೆ ಬೆಲ್ಟ್, ದೊಣ್ಣೆಯಿಂದ ಹಲ್ಲೆ – Insane act by son of secretary of an aided school in Tumakuru, assaults children with belt and baton video story in Kannadaಕುಡಿದ ಮತ್ತಿನಲ್ಲಿ ಶಾಲೆಯ ಆವರಣವನ್ನು ಪ್ರವೇಶಿಸಿದ ಭರತ್ ರೂಮುಗಳಲ್ಲಿದ್ದ ಸುಮಾರು 40 ಮಕ್ಕಳನ್ನು ಹೊರ ಕರೆತಂದು ಸಾಲಾಗಿ ನಿಲ್ಲಿಸಿ ದೊಣ್ಣೆ ಮತ್ತು ಬೆಲ್ಟ್ ನಿಂದ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

TV9kannada Web Team


| Edited By: Arun Belly

Nov 25, 2022 | 11:39 AM
ತುಮಕೂರು: ತುಮಕೂರು ತಾಲ್ಲೂಕಿನ ಮಲ್ಲಸಂದ್ರದಲ್ಲಿರುವ ವಿಶ್ವಭಾರತಿ ಸರ್ಕಾರಿ ಅನುದಾನಿತ ವಸತಿ ಶಾಲೆಯ (Vishwa Bharathi Aided School) ಕಾರ್ಯದರ್ಶಿ ಎನ್ ಮೂರ್ತಿಯ ಮಗ ಭರತ್ (Bharath) ಮಾನಸಿಕ ಅಸ್ವಸ್ಥತೆಯಿಂದ (mentally disturbed) ಬಳಲುತ್ತಿರುವ ಹಾಗಿದೆ. ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಅವನು ಕುಡಿದ ಮತ್ತಿನಲ್ಲಿ ಶಾಲೆಯ ಆವರಣವನ್ನು ಪ್ರವೇಶಿಸಿ ರೂಮುಗಳಲ್ಲಿದ್ದ ಸುಮಾರು 40 ಮಕ್ಕಳನ್ನು ಹೊರ ಕರೆತಂದು ಸಾಲಾಗಿ ನಿಲ್ಲಿಸಿ ದೊಣ್ಣೆ ಮತ್ತು ಬೆಲ್ಟ್ ನಿಂದ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಮಕ್ಕಳ ತೊಡೆ ಹಾಗೂ ಮರ್ಮಾಂಗಗಳ ಮೇಲೂ ಈ ಸೈಕೋ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆದು ಮೂರು ದಿನಗಳ ನಂತರ ಪೋಷಕರಿಗೆ ವಿಷಯ ಗೊತ್ತಾಗಿ ಮಲ್ಲಸಂದ್ರಕ್ಕೆ ಬಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *