ತುಮಕೂರು ಜಿಲ್ಲೆಯಾದ್ಯಂತ ಭಾರಿ ಮಳೆ, ದೇವರಾಯದುರ್ಗ ಬೆಟ್ಟದ ಬಂಡೆಗಳು ಜಾರಿ ರಸ್ತೆಗೆ ಬಂದಿವೆ | Rocks slip from Devarayadurga hill and land on road thanks to massive rains


ರಾಜ್ಯದೆಲ್ಲೆಡೆ ಮಳೆ ಸುರಿಯುತ್ತಿದೆ ಮತ್ತು ಎಲ್ಲೆಡೆ ಅದು ಅವಾಂತರಗಳನ್ನು ಸೃಷ್ಟಿಸುತ್ತಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಮತ್ತು ಅದರಿಂದ ಜನರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ನಾವು ಈಗಾಗಲೇ ಚರ್ಚಿಸಿದ್ದೇವೆ. ಕಳೆದ ರಾತ್ರಿ ತುಮಕೂರು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ದೃಶ್ಯ ತುಮಕೂರು ತಾಲೂಕಿನ ದೇವರಾಯನದುರ್ಗದ್ದು. ರಾತ್ರಿ ಸುರಿದ ಮಳೆ ಸೃಷ್ಟಿಸಿರುವ ಅವಾಂತರ ನೋಡಿ. ಬೆಟ್ಟದಿಂದ ಬಂಡೆಗಳು ಜಾರಿ ರಸ್ತೆಗೆ ಬಂದಿವೆ. ರಸ್ತೆಯ ಅರ್ಧಭಾಗ ಬ್ಲಾಕ್ ಆಗಿದೆ. ಬೆಟ್ಟದ ವ್ಯೂವ್ ಪಾಯಿಂಟ್ ಬಳಿಯಿಂದ ಬಂಡೆಗಳು ಜಾರಿ ರಸ್ತೆಗೆ ಬಂದಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ವರ್ಷ ಮಳೆ ಸುರಿಯುತ್ತಲೇ ಇದೆ. ಚಳಿಗಾಲ ಶುರುವಾಗಿ ಒಂದೂವರೆ ತಿಂಗಳು ಕಳೆದಿದೆ. ಆದರೂ ಮಳೆ ನಿಲ್ಲುತ್ತಿಲ್ಲ. ಎಡೆಬಿಡದೆ ಮಳೆ ಸುರಿಯುವುತ್ತಿರುವುದಕ್ಕೆ ವಿಜ್ಞಾನಿ ಹಲವಾರು ಕಾರಣಗಳನ್ನು ನೀಡುತ್ತಿದ್ದಾರೆ. ಕಾಡುಗಳನ್ನು ಕಡಿಯುತ್ತಿರುವುದು ಸಹ ಒಂದು ಕಾರಣವಾಗಿದೆ. ಹಲವು ವರ್ಷಗಳಿಂದ ನಾವು ಹವಾಮಾನ ವೈಪರೀತ್ಯಗಳನ್ನು ನಾವು ಕಾಣುತ್ತಿದ್ದೇವೆ.

ಜಾಗತಿಕ ತಾಪಮಾನ ಏರುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಇದರಲ್ಲಿ ಎಷ್ಟು ಏರಿಕೆಯಾಗಿದೆ ಅಂದರೆ ಹಿಮಪ್ರದೇಶಗಳಲ್ಲಿ ಹಿಮ ಕರಗಿ ನೀರಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಅಂಟಾರ್ಟಿಕಾ ಖಂಡದ ಹಿಮವೆಲ್ಲ ಕರಗಿದರೆ ಹೇಗೆ ಅಂತ ಯೋಚನೆ ಮಾಡಿದರೆ ದಿಗಿಲು ಮೂಡುತ್ತದೆ. ಆಗುತ್ತಿರುವುದೆಲ್ಲ ಮಾನವನ ದುರಾಸೆಯ ಫಲ ಮತ್ತು ನಾವು ವಿನಾಶದೆಡೆ ಸಾಗುತ್ತಿರುವುದರ ದ್ಯೋತಕ.

ಇದನ್ನೂ ಓದಿ:   ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ

TV9 Kannada


Leave a Reply

Your email address will not be published. Required fields are marked *