ತುಮಕೂರು: ಪಶು ಆಹಾರ ಘಟಕದ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ; 48 ಕಾರ್ಮಿಕರ ರಕ್ಷಣೆ – Labor department officers raid on animal feed Unit; 48 workers Protected in Tumkuru


ಗುಬ್ಬಿ ಪಟ್ಟಣದ ಪಶು ಆಹಾರ ಘಟಕದ ಮೇಲೆ ಇಂದು (ನ.16) ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದ ಬಿಹಾರ ಮೂಲದ 48 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

ತುಮಕೂರು: ಪಶು ಆಹಾರ ಘಟಕದ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ; 48 ಕಾರ್ಮಿಕರ ರಕ್ಷಣೆ

ಪಶು ಆಹಾರ ಘಟಕದ ಕಾರ್ಮಿಕರ ರಕ್ಷಣೆ

ತುಮಕೂರು: ಗುಬ್ಬಿ ಪಟ್ಟಣದ ಪಶು ಆಹಾರ ಘಟಕದ ಮೇಲೆ ಇಂದು (ನ.16) ಕಾರ್ಮಿಕ ಇಲಾಖೆ ಅಧಿಕಾರಿಗಳು (Labor department officers) ದಾಳಿ ಮಾಡಿದ್ದು, ಈ ವೇಳೆ ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದ ಬಿಹಾರ  (Bihar) ಮೂಲದ 48 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕರು ರಂಗನಾಥ್ ಎಂಟರ್ ಪ್ರೈಸಸ್ ಎಂಬ ಏಜನ್ಸಿ ಕಡೆಯಿಂದ ಪಶು ಆಹಾರ ಘಟಕಕ್ಕೆ ಸೇರಿಕೊಂಡಿದ್ದಾರೆ . ಇವರಿಗಾಗಿ ತುಮುಲ್ ಎಂಬುವರಿಗೆ ಸೇರಿದ ಪಶು ಆಹಾರ ಘಟಕದ ಕಾಂಪೌಂಡ್ ಒಳಭಾಗದಲ್ಲಿ ಶೆಡ್ ನಿರ್ಮಾಣ ಮಾಡಲಾಗಿತ್ತು. ಶೆಡ್ ದನದ ಕೊಟ್ಟಿಗೆಗಳಿಗಿಂತ ಕಡೆಯಾಗಿದ್ದು, ಇದರಲ್ಲಿ ಕಾರ್ಮಿಕರನ್ನು ಇರಿಸಲಾಗಿತ್ತು.

ತುಮುಲ್ ಈ ಕಾರ್ಮಿಕರನ್ನು ಕೇವಲ 350ರೂ ಗಳಿಗೆ ಹಗಲು ರಾತ್ರಿ ದುಡಿಸಿಕೊಳ್ಳುತ್ತಿದ್ದನು. ಅಲ್ಲದೆ ಪಿಎಫ್, ಇಎಸ್​​ಐ ಯಾವುದನ್ನು ನೀಡುತ್ತಿರಲಿಲ್ಲ. ಹಾಗೆ ಕಾರ್ಮಿಕರಿಗೆ ಪಶು ಆಹಾರ ಘಟಕದಲ್ಲಿ ಯಾವುದೇ ಭದ್ರತೆ ಕೊಡದೆ ದುಡಿಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಪಶು ಆಹಾರ ಘಟಕದ ಮೇಲೆ ಕಾರ್ಮಿಕ ಇಲಾಖೆಯ ಗುಬ್ಬಿ ವಲಯ ವೃತ್ತ ನಿರೀಕ್ಷಕಿ ಸುಶೀಲ ದಾಳಿ ಮಾಡಿ, ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.