ತುಮಕೂರು: ಪೊಲೀಸ್ ಎಂದು ಹೆದರಿಸಿ ಅತ್ಯಾಚಾರವೆಸಗಿದ್ದ ಆರೋಪಿಯ ಬಂಧನ | Tumakuru Police arrest accused of rape one who says he is police

ತುಮಕೂರು: ಪೊಲೀಸ್ ಎಂದು ಹೆದರಿಸಿ ಅತ್ಯಾಚಾರವೆಸಗಿದ್ದ ಆರೋಪಿಯ ಬಂಧನ

ಸಾಂಕೇತಿಕ ಚಿತ್ರ

ತುಮಕೂರು: ಪೊಲೀಸ್ ಎಂದು ಹೆದರಿಸಿ ಅತ್ಯಾಚಾರವೆಸಗಿದ್ದ ಆರೋಪಿಯೋರ್ವನನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ (37) ಎಂಬಾತನೇ ಬಂಧಿತ ವ್ಯಕ್ತಿ. ಆಗಸ್ಟ್ 1ರಂದು ಕುಣಿಗಲ್ ತಾಲೂಕಿನಲ್ಲಿ ‘ಸಾಹೇಬ್ರು ನಿನ್ನ ಕರೀತಿದ್ದಾರೆ ಬಾ’ ಎಂದು ಕರೆದೊಯ್ದು ಚಾಕು ತೋರಿಸಿ ಅತ್ಯಾಚಾರವೆಸಗಿ ಚಿನ್ನಾಭರಣ ದೋಚಿದ್ದ ಆರೋಪ ಬಂಧಿತ ವ್ಯಕ್ತಿಯ ಮೇಲಿದೆ. ಆರೋಪಿ ಪ್ರದೀಪ್ ಮಹಿಳೆ ಬಳಿ ಇದ್ದ 40 ಗ್ರಾಂ ಚಿನ್ನದ ಸರ, ಮೊಬೈಲ್ ಮತ್ತು ಎಟಿಎಂ ಕಾರ್ಡ್ ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈಕುರಿತು ಅಮೃತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಇದನ್ನೂ ಓದಿ: 

TV9 Kannada

Leave a comment

Your email address will not be published. Required fields are marked *