ಉಡುಪಿ: ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಗೆ ಒತ್ತಾಯಿಸಿ ಕರಾವಳಿಯಲ್ಲಿ ಟ್ವಿಟ್ಟರ್ ಅಭಿಯಾನ ಜೋರಾಗಿ ನಡೆಯುತ್ತಿದೆ. ಇಂದು ಬೆಳಗ್ಗಿನಿಂದಲೇ ತುಳು ಸಂಘಟನೆಗಳು ಮತ್ತು ತುಳು ಭಾಷಿಗರಿಂದ ಟ್ವಿಟರ್ ಅಭಿಯಾನ ಆರಂಭವಾಗಿದ್ದು,‌ ಬೆಳಿಗ್ಗೆ ಆರಂಭವಾದ ಅಭಿಯಾನಕ್ಕೆ ಸಾವಿರಾರು ಟ್ವೀಟ್​ಗಳು ಹರಿದುಬರುತ್ತಿವೆ.

ಭಾರತದ ಟ್ವಿಟರ್ ಟ್ರೆಂಡಿಂಗ್​ನಲ್ಲಿ #TuluOfficialinKA_Kl ಅಭಿಯಾನಕ್ಕೆ 31ನೇ ಸ್ಥಾನವೂ ದೊರಕಿದೆ. ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಒಂದು ಲಕ್ಷಕ್ಕೂ ಅಧಿಕ ಟ್ವೀಟ್​ಗಳು ಹರಿದಾಡಿವೆ. ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಿ ಎಂದು ನಡೆಯುತ್ತಿರುವ ಭರ್ಜರಿ ಅಭಿಯಾನ ಇದಾಗಿದೆ. ಈ ಹಿಂದೆಯೂ ತುಳುಭಾಷೆಯ ಸ್ಥಾನಮಾನಕ್ಕಾಗಿ ಟ್ವೀಟ್ ಅಭಿಯಾನ ಮಾಡಲಾಗಿತ್ತು. ಆದರೆ ಸರ್ಕಾರ ತುಳುವರ ಕೂಗಿಗೆ ಕಿವಿಯಾಗಿಲ್ಲ, ಕರಾವಳಿ ಭಾಗದ ರಾಜಕಾರಣಿಗಳು ಅಸಕ್ತಿ ತೋರಿಲ್ಲ. ಹೀಗಾಗಿ ಇಂದು ಮತ್ತೆ ಜೈ ತುಳುನಾಡು ಸಂಘಟನೆ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ನಡೆಯುತ್ತಿದೆ, ಸಂಜೆಯವರೆಗೂ ನಡೆಯಲಿರುವ ಅಭಿಯಾನದಲ್ಲಿ ದೇಶ-ವಿದೇಶಗಳ ತುಳುವರು ಭಾಗಿಯಾಗಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿ ಸೇರಿದ ಜನಪ್ರನಿಧಿಗಳಿಗೂ ಟ್ವೀಟ್ ಟ್ಯಾಗ್ ಮಾಡಿ ಒತ್ತಾಯ ಮಾಡಲಾಗುತ್ತಿದೆ. ಕರಾವಳಿಗರು ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಈ ಟ್ರೆಂಡಿಂಗ್​​ಗೆ ಸಾಥ್ ಕೊಟ್ಟಿದ್ದು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

 

The post ತುಳುಭಾಷೆಗೆ ಸಾಂವಿಧಾನಿಕ ಮಾನ್ಯತೆಗೆ ಒತ್ತಾಯಿಸಿ ಮಹಾ ಅಭಿಯಾನ: ಕಟೀಲ್ ಸಾಥ್ appeared first on News First Kannada.

Source: newsfirstlive.com

Source link