ತೂಕ ಇಳಿಸಿಕೊಂಡ ಕೇಂದ್ರ ಸಚಿವೆ ಸ್ಮೃತಿ ಇರಾನಿ; ಅವರು ಏನ್ ತಿಂತಾರೆ? ಏನ್ ತಿನ್ನಲ್ಲ ಗೊತ್ತಾ?


ಕೆಲವು ದಿನಗಳ ಹಿಂದೆ ನಟಿ, ರಾಜಕಾರಣಿ ಖುಷ್ಬೂ ಸುಂದರ್​ ಅವರು ತೂಕ ಇಳಿಸಿಕೊಂಡು ಸುದ್ದಿಯಲ್ಲಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತೀಯ ರಾಜಕೀಯ ರಂಗದ ಅತಿ ಪ್ರಗತಿಪರ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೂ ಕೂಡ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದರು.

ಕಿರುತೆರೆಯಲ್ಲಿ ನಟಿಯಾಗಿದ್ದ ಅವರು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು ರಾಜಕಾರಣಕ್ಕೆ ಬಂದು ಸದ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ನೋ ಡೈರಿ ಫುಡ್ಸ್​

ಇತ್ತೀಚಿಗೆ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಸ್ಲಿಮ್​ ಆದ ಫೊಟೋ ಶೇರ್​ ಮಾಡಿ ಬೆರಗುಗೊಳಿಸಿದ ಅವರ ಡಯಟ್​ ಹಿಂದಿನ ಸಿಕ್ರೇಟ್​ ಸದ್ಯ ರೀವಿಲ್​ ಆಗಿದೆ. ವರದಿಗಳ ಪ್ರಕಾರ ಅವರು ಕೆಲ ತಿಂಗಳುಗಳಿಂದ ಡೈರಿ ಉತ್ಪನ್ನಗಳು ಗ್ಲುಟನ್​ ಆಹಾರ(ಅಂಟು ಪದಾರ್ಥ)ವನ್ನು ತ್ಯಜಿಸಿದ್ದರೆಂದು ಹೇಳಲಾಗಿದೆ.

ಈ ಪ್ರಕಾರದ ಡಯಟ್​ನಲ್ಲಿ ಹಾಲು ಮಿಶ್ರಿತ ಮತ್ತು ಹಾಲಿನಿಂದ ತಯಾರಿಸಲಾದ ಹಲವಾರು ಉತ್ಪನ್ನಗಳನ್ನು ಊಟದ ಪದ್ಧತಿಯಿಂದ ದೂರ ಇಡಲಾಗುತ್ತದೆ. ಈ ಡೈರಿ ಉತ್ಪನ್ನಗಳು ದೇಹದಲ್ಲಿ ಹೆಚ್ಚಿನ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತೆ. ಇತ್ತೀಚಿನ ದಿನಗಳಲ್ಲಿ ನೋ ಡೈರಿ ಫುಡ್​ ಪ್ರಕಾರ ತುಂಬ ಜನಪ್ರಿಯಗೊಂಡಿದೆ. ಇನ್ನು ಕೆಲವರು ಸಕ್ಕರೆ ಮಿಶ್ರಿತ ಆಹಾರ ಕೂಡ ತ್ಯಜಿಸಿ ಕೆಲವೊಂದು ಡಯಟ್​ಗೆ ಮುಂದಾಗುತ್ತಾರೆ ಈ ವೇಳೆ ಯಾವದಾದರೊಂದು ಪದ್ದತಿಯನ್ನು ಅಳವಡಿಸಿಕೊಂಡು ದೇಹದ ಗಾತ್ರವನ್ನು ನಿಯಂತ್ರಣಕ್ಕೆ ತರಲು ಇದು ಸಹಕಾರಿಯಾಗುತ್ತದೆ.

ಡೈರಿಯು ಪ್ರಾಣಿ ಮೂಲಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒಳಗೊಂಡಿರುವಾಗ, ಗ್ಲುಟನ್ ಅನೇಕ ಧಾನ್ಯಗಳಲ್ಲಿ ಕಂಡುಬರುವ ಪ್ರೋಟೀನ್ ಆಗಿದೆ, ಇದು ಆಹಾರಗಳು ತಮ್ಮ ‘ಆಕಾರ’ವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಆದರೆ ಶೂನ್ಯ ಅಗತ್ಯ ಪೌಷ್ಟಿಕಾಂಶದ ಪ್ರಯೋಜನಗಳನ್ನು ನೀಡುತ್ತದೆ. ಆಹಾರದಲ್ಲಿ ಸೂಕ್ಷ್ಮತೆ ಹೊಂದಿರುವ ಜನರಿಗೆ ಶಿಫಾರಸು ಮಾಡಲಾದ ಆಹಾರವು ಒಂದು ರೀತಿಯಲ್ಲಿ ಆಹಾರದ ಅಲರ್ಜಿಯನ್ನು ತೆರವುಗೊಳಿಸುತ್ತದೆ. ಮತ್ತು ಶುದ್ಧ ಆಹಾರ ಮತ್ತು ಉತ್ತಮ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಅಂತಿಮವಾಗಿ ತೂಕ ಕಳೆದುಕೊಳ್ಳಲು ಸಹಕಾರಿಯಾಗುತ್ತದೆ.

News First Live Kannada


Leave a Reply

Your email address will not be published. Required fields are marked *