ತೃತೀಯ ಲಿಂಗಿಗಳಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಮದ್ರಾಸ್​ ಹೈಕೋರ್ಟ್​ ಅನುಮತಿ | Madras High Court Allows Transgender People to Seek Reservation in Jobs


ತೃತೀಯ ಲಿಂಗಿಗಳಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಮದ್ರಾಸ್​ ಹೈಕೋರ್ಟ್​ ಅನುಮತಿ

ಮದ್ರಾಸ್​ ಹೈಕೋರ್ಟ್​

ನವದೆಹಲಿ: ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಲು ತೃತೀಯಲಿಂಗಿ ಸಮುದಾಯದ ಸದಸ್ಯರಿಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಗ್ರೇಸ್ ಬಾನು ಗಣೇಶನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವಾಗ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಡಿ ಆದಿಕೇಶವಾಲು ಅವರ ನ್ಯಾಯಪೀಠವು ಅನುಮತಿ ನೀಡಿದೆ.

ತೃತೀಯ ಲಿಂಗಿಗಳಿಗೆ ವಿಶೇಷ ನೇಮಕಾತಿ ಆಂದೋಲನವನ್ನು ಕೈಗೊಳ್ಳಲು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಕೇಳಲಾಗಿದೆ. ಜೊತೆಗೆ ಅವರು ಭರ್ತಿ ಮಾಡುವ ಹುದ್ದೆಗಳಲ್ಲಿ ಶೇಕಡಾ ಒಂದು ಮೀಸಲಾತಿಯನ್ನು ಒದಗಿಸಬೇಕು. ಮದ್ರಾಸ್ ಹೈಕೋರ್ಟ್‌ನ ಇತ್ತೀಚಿನ ಅಧಿಸೂಚನೆಯನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಿಜಿಸ್ಟ್ರಾರ್ ಜನರಲ್, ಯಾವುದೇ ತೃತೀಯ ಲಿಂಗಿಗಳಿಂದ ಯಾವುದೇ ಅರ್ಜಿ ಬಂದಿಲ್ಲ ಎಂದಿದ್ದಾರೆ.

“ಭವಿಷ್ಯದ ನೇಮಕಾತಿ ಪ್ರಕ್ರಿಯೆಗಳಲ್ಲಿ ಮೀಸಲಾತಿಗೆ ಒತ್ತಾಯಿಸಲು ಅರ್ಜಿದಾರರಿಗೆ ಮತ್ತು ಮೂರನೇ ಲಿಂಗದ ಸದಸ್ಯರ ಹಕ್ಕುಗಳಿಗೆ ಧಕ್ಕೆಯಾಗದಂತೆ ಇದನ್ನು ವಿಲೇವಾರಿ ಮಾಡಲಾಗುತ್ತದೆ” ಎಂದು ಪೀಠ ಹೇಳಿದೆ.

ತಮಿಳುನಾಡು ಸರ್ಕಾರಿ ನೌಕರರ (ಸೇವಾ ಷರತ್ತುಗಳು) ಕಾಯ್ದೆ 2016ರ ಅಡಿಯಲ್ಲಿ ಒದಗಿಸಲಾದ ಮೀಸಲಾತಿ ನಿಯಮದ ಪ್ರಕಾರ, ಯಾವುದೇ ಸಮುದಾಯ ಪ್ರಮಾಣಪತ್ರವನ್ನು ಹೊಂದಿರದ ಮೂರನೇ ಲಿಂಗ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಮತ್ತು ಅವುಗಳನ್ನು ಪರಿಗಣಿಸಲಾಗುವುದು ಎಂದು ಸೂಚಿಸಲಾಗಿದೆ ಎಂದು ಪೀಠವು ಗಮನಿಸಿದೆ.

ಇದನ್ನೂ ಓದಿ: Tata Steel Recruitment: ತೃತೀಯ ಲಿಂಗಿಗಳಿಗಾಗಿ ಉದ್ಯೋಗ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಟಾಟಾ ಸ್ಟೀಲ್

Lakhimpur Kheri Case: ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಲಖಿಂಪುರ ಖೇರಿ ಹಿಂಸಾಚಾರದ ತನಿಖೆ; ಸುಪ್ರೀಂ ಕೋರ್ಟ್ ಸೂಚನೆ

TV9 Kannada


Leave a Reply

Your email address will not be published. Required fields are marked *