
ರಶ್ಮಿಕಾ ಮಂದಣ್ಣ
Rashmika Mandanna: ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಡಿಮ್ಯಾಂಡ್ ಇದೆ. ಆ ಬೇಡಿಕೆಗೆ ತಕ್ಕಂತೆಯೇ ಚಾರ್ಮ್ ಉಳಿಸಿಕೊಳ್ಳಬೇಕಾದ ಚಾಲೆಂಜ್ ಅವರ ಮುಂದಿದೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಖತ್ ಬ್ಯುಸಿ ಆಗಿದ್ದಾರೆ. ಅವರ ಕೈಯಲ್ಲಿ ಅನೇಕ ಸಿನಿಮಾಗಳಿಗೆ. ಹತ್ತಾರು ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಪ್ರತಿ ದಿನ ಅವರು ಒಂದಿಲ್ಲೊಂದು ಸಿನಿಮಾದ ಶೂಟಿಂಗ್, ರಿಹರ್ಸಲ್, ಡಬ್ಬಿಂಗ್ ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಜಾಹೀರಾತುಗಳಲ್ಲಿ ಕೂಡ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಅವುಗಳ ಕೆಲಸದಲ್ಲೂ ಅವರು ಬ್ಯುಸಿ. ಹೀಗೆ ಎಷ್ಟೇ ಕಾರ್ಯದೊತ್ತಡ ಇದ್ದರೂ ಕೂಡ ಅವರು ಜಿಮ್ನಲ್ಲಿ ವರ್ಕೌಟ್ ಮಾಡುವುದು ತಪ್ಪಿಸುವುದಿಲ್ಲ. ಪ್ರತಿ ದಿನ ಅವರು ಅದಕ್ಕಾಗಿ ಸಮಯ ಮೀಸಲಿಡುತ್ತಾರೆ. ಜಿಮ್ನಲ್ಲಿ ಇರುವ ಫೋಟೋವನ್ನು (Rashmika Mandanna Photo) ಅಪ್ಲೋಡ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ಅವರು ಸ್ಫೂರ್ತಿ ತುಂಬುತ್ತಾರೆ. ಇತ್ತೀಚೆಗೆ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಒಂದು ಹೊಸ ಫೋಟೋ ಹಂಚಿಕೊಂಡರು. ‘ತೃಪ್ತಿ ನೀಡುವಂತಹ ನನ್ನ ಪ್ರಕಾರದ ವರ್ಕೌಟ್’ ಎಂದು ರಶ್ಮಿಕಾ ಮಂದಣ್ಣ ಆ ಫೋಟೋಗೆ ಕ್ಯಾಪ್ಷನ್ ನೀಡಿದ್ದು ಗಮನ ಸೆಳೆದಿದೆ. ಜಿಮ್ನಲ್ಲಿ (Gym) ನಿಂತು ಅವರು ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಫಿಟ್ನೆಸ್ ಬಗ್ಗೆ ಅವರಿಗೆ ಇರುವ ಕಾಳಜಿ ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ.
ಬಣ್ಣದ ಲೋಕದಲ್ಲಿ ನಟಿಯರು ಫಿಟ್ ಆಗಿರಬೇಕಾದ್ದು ಅನಿವಾರ್ಯ ಮತ್ತು ಅತ್ಯಗತ್ಯ. ಹಾಗಾಗಿ ಡಯಟ್ ಜೊತೆ ವರ್ಕೌಟ್ ಕೂಡ ಅತ್ಯಗತ್ಯ. ಇದನ್ನು ರಶ್ಮಿಕಾ ಮಂದಣ್ಣ ಚಾಚೂತಪ್ಪದೇ ಪಾಲಿಸುತ್ತಾರೆ. ಈ ಹಿಂದೆ ಕೂಡ ಅನೇಕ ಬಾರಿ ಅವರು ಜಿಮ್ ಫೋಟೋಗಳನ್ನು ಹಂಚಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ಅವರು ಒಂದಷ್ಟು ಐಡಿಯಾಗಳನ್ನು ಶೇರ್ ಮಾಡಿಕೊಂಡಿದ್ದರು. ತಮ್ಮ ಫಿಟ್ನೆಸ್ ರಹಸ್ಯ ಏನು ಎಂಬುದನ್ನು ಕೂಡ ಅಭಿಮಾನಿಗಳಿಗೆ ತಿಳಿಸಿದ್ದರು.