ತೆರಿಗೆ ಆದಾಯ ಸಂಗ್ರಹ; ಕರ್ನಾಟಕವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ತಮಿಳುನಾಡು – Tamil Nadu overtakes Karnataka to emerge as the third-largest state in own tax revenues in FY23 First half latest business news in Kannada


Tax Revenue Collections; ಮದ್ಯ ಮಾರಾಟದ ಮೇಲಿನ ಅಬಕಾರಿ ಸುಂಕದಿಂದಾಗಿ ತಮಿಳುನಾಡಿನ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ತೆರಿಗೆ ಆದಾಯ ಸಂಗ್ರಹದಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.

ತೆರಿಗೆ ಆದಾಯ ಸಂಗ್ರಹ; ಕರ್ನಾಟಕವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ತಮಿಳುನಾಡು

ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ತೆರಿಗೆ ಆದಾಯ ಸಂಗ್ರಹದಲ್ಲಿ (Tax Revenue Collections) ಕರ್ನಾಟಕವನ್ನು (Karnataka) ಹಿಂದಿಕ್ಕಿರುವ ತಮಿಳುನಾಡು (Tamil Nadu) ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮದ್ಯ ಮಾರಾಟದ ಮೇಲಿನ ಅಬಕಾರಿ ಸುಂಕದಿಂದಾಗಿ ತಮಿಳುನಾಡಿನ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರ (Maharashtra) ಮತ್ತು ಉತ್ತರ ಪ್ರದೇಶ (Uttar Pradesh) ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.

ಸಿಎಜಿ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ. ಏಪ್ರಿಲ್ – ಸೆಪ್ಟೆಂಬರ್ ಅವಧಿಯಲ್ಲಿ ತಮಿಳುನಾಡು 68,638 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ಕರ್ನಾಟಕ 66,158 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕರ್ನಾಟಕದ ಸ್ವಂತ ತೆರಿಗೆ ಆದಾಯ 53,566 ಕೋಟಿ ರೂ. ಆಗಿದ್ದರೆ, ತಮಿಳುನಾಡಿನ ಸ್ವಂತ ತೆರಿಗೆ ಆದಾಯ 50,324 ಕೋಟಿ ರೂ. ಆಗಿತ್ತು.

ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕವೇ ಮುಂದೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ತಮಿಳುನಾಡಿಗೆ ಹೋಲಿಸಿದರೆ ಈ ವರ್ಷವೂ ಕರ್ನಾಟಕವೇ ಮುಂದಿದೆ. ದೇಶದಾದ್ಯಂತ ಅಕ್ಟೋಬರ್​ ತಿಂಗಳಲ್ಲಿ ಒಟ್ಟು 1.51 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. ಇದು ಜಿಎಸ್​ಟಿ ಸಂಗ್ರಹದಲ್ಲಿ ಈವರೆಗಿನ ಎರಡನೇ ಗರಿಷ್ಠ ಮೊತ್ತವಾಗಿದೆ.

TV9 Kannada


Leave a Reply

Your email address will not be published.