ತೆರೆಗೆ ಬರಲು ಸಜ್ಜಾದ ‘ಕೋಟಿಗೊಬ್ಬ’ ಯಾವಾಗ ಗೊತ್ತಾ ರಿಲೀಸ್..?

ತೆರೆಗೆ ಬರಲು ಸಜ್ಜಾದ ‘ಕೋಟಿಗೊಬ್ಬ’ ಯಾವಾಗ ಗೊತ್ತಾ ರಿಲೀಸ್..?

‘ಕೋಟಿಗೊಬ್ಬ’ನ ಸಿನಿ ಅಂಗಳದಲ್ಲಿ ಹೊಸ ಹರುಷ, ಹೊಸ ಉಲ್ಲಾಸ.. ಕಾರಣ ಕಿಚ್ಚ ಸುದೀಪ್ ಕಂಚಿನ ಕಂಠದಿಂದ ಶಿವ ಮತ್ತು ಸತ್ಯನ ಪಾತ್ರಗಳಿಗೆ ಜೀವ ಬಂದಿದೆ. ಬಹುದಿನಗಳ ನಂತರ ಅಭಿನಯ ಚಕ್ರವರ್ತಿ ಕೋಟಿಗೊಬ್ಬ-3 ಚಿತ್ರದ ಸಿನಿ ಚಟುವಟಿಕೆಯಲ್ಲಿ ಆಸಕ್ತರಾಗಿದ್ದಾರೆ, ಅತಿ ಶೀಘ್ರದಲ್ಲೇ ಕೋಟಿಗೊಬ್ಬನಾಗಿ ಮತ್ತೊಮ್ಮೆ ನಿಮ್ಮ ಮುಂದೆ ಬರಲಿದ್ದೇನೆ ಅನ್ನೋ ಸಂದೇಶ ಸಾರಿದ್ದಾರೆ.

ಸಿನಿ ರಂಗದ ಮೇಲೆ ಬಿದ್ದ ಕರಿಮೋಡ ದೂರಾಗಿ ಹೊಸ ಬೆಳ್ಳಿ ಭರವಸೆಯ ಬೆಳಕು ಮೂಡುತ್ತಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ಖುಷಿಯಾಗಿ ಭಾಗವಹಿಸುವಂತೆ ಸಿನಿರಂಗದವರು ತಮ್ಮ ತಮ್ಮ ಸಿನಿ ಕೆಲಸವನ್ನ ಮಾಡ್ತಿದ್ದಾರೆ. ಅದರಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಎಂದಿನಂತೆ ತಾವು ವಹಿಸಿಕೊಂಡ ಸಿನಿ ಕಾರ್ಯಗಳಿಗೆ ಜೀವ ತುಂಬೋ ಕೆಲಸವನ್ನ ಮಾಡ್ತಿದ್ದಾರೆ. ಕೋಟಿಗೊಬ್ಬ-3 ಸಿನಿಮಾದ ತಮ್ಮ ಪಾತ್ರಕ್ಕೆ ಧ್ವನಿ ನೀಡಿ ಜೀವ ತುಂಬಿದ್ದಾರೆ.

2018ರ ಮಾರ್ಚ್​ 3ರಂದು ಕೋಟಿಗೊಬ್ಬ 3 ಸಿನಿಮಾ ಶುರುವಾದ ದಿನ. ಎರಡನೇ ಕೋಟಿಗೊಬ್ಬ ಸಿನಿಮಾ ಯಶಸ್ಸಿನ ಹುಮ್ಮಸಲ್ಲಿ ಮೂರನೇ ಕೋಟಿಗೊಬ್ಬ ಸಿನಿಮಾ ಮಾಡಲು ಮುಂದಾಗುತ್ತಾರೆ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು. ಕೊಂಚ ತಡವಾದ್ರು ಗಟ್ಟಿ ಭರವಸೆಯ ಮೂಲಕ ಅನೇಕ ಏಳು ಬೀಳುಗಳನ್ನ ಮೆಟ್ಟಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗ್ತಿದೆ ಕೋಟಿಗೊಬ್ಬ-3 ಸಿನಿಮಾ.

ಆಲ್​ ಮೋಸ್ಟ್ ಆಲ್ ಕೋಟಿಗೊಬ್ಬ 3 ಸಿನಿಮಾ ಕೆಲಸ ಕಾರ್ಯಗಳು ಮುಗಿದಿದ್ವು. ಆದ್ರೆ ಕಿಚ್ಚ ಸುದೀಪ್ ಅವರ ವಾಯ್ಸ್ ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಇತ್ತು. ಈಗ ಸುದೀಪ್ ಅವರ ಧ್ವನಿ ಜೋಡಣೆಯ ಕಾರ್ಯವೂ ಮುಗಿದಿದ್ದು ಕೋಟಿಗೊಬ್ಬನ ಶಿವ ಮತ್ತು ಸತ್ಯ ಪಾತ್ರಕ್ಕೆ ಜೀವ ಬಂದಿದೆ. ಕೊರೊನಾ, ಲಾಕ್ ಡೌನ್ ಸಮಸ್ಯೆಗಳೆಲ್ಲ ಮುಗಿದು ಈಗ ಸಿನಿಮಾ ಪ್ರದರ್ಶನಕ್ಕೆ ರಮ್ಯಚೈತ್ರ ಕಾಲ ಬರುತ್ತಿರೋ ಕಾರಣ ಕೋಟಿಗೊಬ್ಬ-3 ಸಿನಿಮಾ ತಂಡಕ್ಕೆ ರಿಲೀಸ್ ಹುಮ್ಮಸ್ಸು ಹೆಚ್ಚಾಗುತ್ತಿದೆ.

ಆಲ್​ ಮೋಸ್ಟ್ ಆಲ್ ರಿಲೀಸ್​​ಗೆ ಸಿದ್ಧವಿರೋ ಶಿವಕಾರ್ತಿಕ್​​ ಸಾರಥ್ಯದ ಕೋಟಿಗೊಬ್ಬ-3 ಸಿನಿಮಾ ಆಗಸ್ಟ್ ತಿಂಗಳ ಮಧ್ಯ ಭಾಗದಲ್ಲಿ ಪ್ರೇಕ್ಷಕರ ಪ್ರಭುಗಳ ಆಶೀರ್ವಾದಕ್ಕಾಗಿ ಮುಂಬರೋ ಸಾಧ್ಯತೆ ಇದೆ. ಪೈಲ್ವಾನ್ ಸಿನಿಮಾದ ನಂತರ ಕನ್ನಡ ಸಿನಿ ಪ್ರೇಕ್ಷಕರಿಗೆ ಸುದೀಪ್ ಕೋಟಿಗೊಬ್ಬನಾಗಿ ರಂಜಿಸಲಿದ್ದಾರೆ.

The post ತೆರೆಗೆ ಬರಲು ಸಜ್ಜಾದ ‘ಕೋಟಿಗೊಬ್ಬ’ ಯಾವಾಗ ಗೊತ್ತಾ ರಿಲೀಸ್..? appeared first on News First Kannada.

Source: newsfirstlive.com

Source link