ಜೋಧ್​ಪುರ್​: 4 ವರ್ಷದ ಬಾಲಕ , ತೆರೆದ ಕೊಳವೆ ಬಾವಿಯೊಳಗೆ ಬಿದ್ದಿರೋ ಘಟನೆ ರಾಜಸ್ಥಾನದ ಜಲೋರ್​ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಬಾಲಕ ಮುಚ್ಚಿದ್ದ ಕೊಳವೆ ಬಾಯಿ ಬಳಿ ಆಟವಾಡಲು ಹೋಗಿದ್ದಾಗ, ಕಂದಮ್ಮ 95 ಅಡಿ ಉದ್ದದ ಕೊಳವೇ ಬಾವಿಯೊಳಗೆ ಬಿದ್ದಿದ್ದು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ಮುಚ್ಚಿದ್ದ ಕೊಳವೆ ಬಾಯಿಯನ್ನ ತೆಗದು ಏನಿದೆ ಅಂತ ನೋಡಲು ಹೋಗಿ ಬಿದ್ದ ಎನ್ನಲಾಗಿದೆ. ಇನ್ನು ಈಗಾಗ್ಲೇ ಕಾರ್ಯಾಚರಣೆ ಆರಂಭವಾಗಿದ್ದು, ಬಾಲಕ ಇನ್ಬೂ ಜೀವಂತವಾಗಿದ್ದಾನೆ ಅನ್ನೋದನ್ನ ರಕ್ಷಣಾ ಪಡೆ ಸ್ಪಷ್ಟಪಡಿಸಿದೆ. ಕಳೆದ ಎರಡು ದಿನದ ಹಿಂದೆಯಷ್ಟೇ ಈ ಬಾವಿಯನ್ನ ಕೊರೆಯಲಾಗಿತ್ತು, ಮಗು ನಿನ್ನೆ ಆಟವಾಡ್ಬೇಕಾದ್ರೆ ಆ ಬಾವಿ ಮುಚ್ಚಿತ್ತು ಅನ್ನೋ ಮಾಹಿತಿಯನ್ನ ಬಾಲಕನ ತಂದೆ ಸ್ಪಷ್ಟ ಪಡಿಸಿದ್ದಾರೆ. ಆದ್ರೆ, ಏನಿದ ಅಂತ ನೋಡೋ ತವಕದಲ್ಲಿಅದರೊಳಗೆ ಬಿದ್ದಿದ್ದಾನೆ ಅಂತಿದ್ದಾರೆ ಪೊಲೀಸ್ರು. ಸದ್ಯ, ಮಗುವಿಗೆ ಆಕ್ಸಿಜನ್​ ಪಂಪ್​ ಮೂಲಕ ಬಾವಿಯೊಳಕ್ಕೆ ಆಕ್ಸಿಜನ್​ ಕೊಡ್ತಾಯಿದ್ದು, ರಕ್ಷಣಾ ಪಡೆ ಎಡಬಿಡದೇ ರಕ್ಷಣಾ ಕಾರ್ಯವನ್ನ ಮುಂದುವರೆಸಿದೆ. ಇಡೀ, ಗ್ರಾಮ ಪುಟ್ಟ ಬಾಲಕ ಈ ಕೆಟ್ಟ ಘಳಿಗೆಯನ್ನ ಗೆದ್ದು ಬರಲಿ ಅಂತ ಆಶಯಿಸುತ್ತಿದ್ದಾರೆ.

The post ತೆರೆದ ಕೊಳವೆ ಬಾವಿ ಒಳಗೆ ಬಿದ್ದ 4 ವರ್ಷದ ಬಾಲಕ: ಮುಂದುವರೆದ ರಕ್ಷಣಾ ಕಾರ್ಯ. appeared first on News First Kannada.

Source: newsfirstlive.com

Source link