ವಿಶ್ವ ಕ್ರಿಕೆಟ್​​ನಲ್ಲಿ ‘ದಿ ವಾಲ್’ ಎಂದೇ ಖ್ಯಾತಿ ಪಡೆದಿರುವ ​ಟೀಮ್​ ಇಂಡಿಯಾದ ಮಾಜಿ ಆಟಗಾರ ರಾಹುಲ್​​ ದ್ರಾವಿಡ್​​ ಜೀವನ, ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಿದ್ಧವಾಗ್ತಿದೆಯಂತೆ. ಭಾರತದ ನಾಯಕನಾಗಿಯೂ ಯಶಸ್ಸು ಕಂಡಿದ್ದ​ ದ್ರಾವಿಡ್,​ ಯುವ ಕ್ರಿಕೆಟಿಗರಿಗೆ ತರಬೇತಿ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಭಾರತ ಕ್ರಿಕೆಟ್​ ತಂಡವನ್ನ ಒಂದು ಹಂತಕ್ಕೆ ಬೆಳೆಸಿದ ಅವರ ಜೀವನ, ಅನೇಕರಿಗೆ ಸ್ಫೂರ್ತಿ. ಹೀಗಾಗಿ ದ್ರಾವಿಡ್​ ಜೀವನವನ್ನ ಬಯೋಪಿಕ್​ ಮಾಡಲು ಚಿತ್ರ ತಂಡವೊಂದು ಸಿದ್ಧತೆ ನಡೆಸಿದೆ. ಇನ್ನು ಈ ಚಿತ್ರದಲ್ಲಿ ದ್ರಾವಿಡ್​​ ಪಾತ್ರದಲ್ಲಿ ನಟಿಸೋಕೆ ಸಿದ್ದಾರ್ಥ್​ ಅವರನ್ನ ಚಿತ್ರತಂಡ, ಸಂಪರ್ಕಿಸಿದೆ ಎಂದು ಮೂಲಗಳು ಹೇಳುತ್ತಿವೆ. ನಟ ಸಿದ್ಧಾರ್ಥ್‌ಗೆ ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೂ ಉತ್ತಮ ಹೆಸರಿದೆ. ಅಲ್ಲದೆ ದ್ರಾವಿಡ್ ಪಾತ್ರವನ್ನು ಸ್ವಾಭಾವಿಕವಾಗಿ ನಿರ್ವಹಿಸುವ ಸಾಮರ್ಥ್ಯ ಅವರಿಗಿದೆ ಎಂದು ಚಿತ್ರತಂಡ ಭಾವಿಸಿದೆ. ಹಾಗಾಗಿ ಸಿದ್ಧಾರ್ಥ್‌ರನ್ನ ಸಂಪರ್ಕಿಸಿ ಕಥೆ ವಿವರಿಸಿದ್ದು, ಇದಕ್ಕೆ ಅವರು ಒಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಸಿದ್ಧಾರ್ಥ್ ಪ್ರಸ್ತುತ ‘ಮಹಾಸಮುದ್ರಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಆರ್‌ಎಕ್ಸ್ 100’ ಫೇಮ್ ಅಜಯ್ ಭೂಪತಿ ಈ ಸಿನಿಮಾವನ್ನ ನಿರ್ದೇಶಿಸಿದ್ದು, ಈ ಚಿತ್ರ ಮುಗಿದ ನಂತರ ದ್ರಾವಿಡ್ ಬಯೋಪಿಕ್ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

The post ತೆರೆ ಮೇಲೆ ಬರಲಿದೆ ಕನ್ನಡಿಗ ರಾಹುಲ್ ದ್ರಾವಿಡ್ ಚಿತ್ರ..? appeared first on News First Kannada.

Source: newsfirstlive.com

Source link