ಬೆಂಗಳೂರು: ಟ್ವಿಟರ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿದ ಮನವಿಗೆ ತೆಲಂಗಾಣ ಸರ್ಕಾರ ತ್ವರಿತವಾಗಿ ಸ್ಪಂದಿಸಿದ್ದು, ಸಂಕಷ್ಟದಲ್ಲಿದ್ದ ಮಂಡ್ಯದ ಕುಟುಂಬವೊಂದರ ನೆರವಿಗೆ ಧಾವಿಸಿದೆ.

ಸಂಕಷ್ಟದಲ್ಲಿರುವ ಮಂಡ್ಯದ ಕುಟುಂಬಕ್ಕೆ ರಕ್ಷಣೆ ಮಾಡುವಂತೆ ಟ್ವೀಟ್ ಮೂಲಕ ಅಲ್ಲಿನ ಸರ್ಕಾರಕ್ಕೆ ಡಿಕೆಎಸ್ ಮನವಿ ಮಾಡಿದ್ದರು. ಇದಕ್ಕೆ ತ್ವರಿತವಾಗಿ ಕೆಸಿಆರ್​ ಸರ್ಕಾರ ಸ್ಪಂದಿಸಿದೆ.

ಡಿಕೆಎಸ್​ ಕೇಳಿಕೊಂಡಿದ್ದೇನು..?
ಮಂಡ್ಯ ಮೂಲದ ಶಶಿಕಲಾ ಮಂಜುನಾಥ್ ಅವರ ಕುಟುಂಬ ಸಂಕಷ್ಟದಲ್ಲಿತ್ತು. ಅವರ ಪತಿ ಮೆಡಿಕೋವರ್ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಪತಿಯ ಚಿಕಿತ್ಸೆಗಾಗಿ ಶಶಿಕಲಾ ಅವರು ಸಾಕಷ್ಟು ಹಣ ವ್ಯಯಿಸಿದ್ದಾರೆ. ಅಂತಿಮವಾಗಿ ಆಸ್ಪತ್ರೆಯ 7.5 ಲಕ್ಷ ರೂ. ಬಿಲ್ ಆಗಿದ್ದು, ಇನ್ನು 2 ಲಕ್ಷ ರೂ. ಮೊತ್ತವನ್ನು ಅವರು ಇನ್ನೂ ಪಾವತಿಸಬೇಕಿತ್ತು. ಆದರೆ ಹಣ ಪಾವತಿಸುವವರೆಗೂ ಮೃತದೇಹ ಬಿಟ್ಟುಕೊಡುವುದಿಲ್ಲ ಎಂದು ಆಸ್ಪತ್ರೆ ಹಠ ಹಿಡಿದಿತ್ತು ಎನ್ನಲಾಗಿದೆ. ದಯವಿಟ್ಟು ಶಶಿಕಲಾ ಅವರ ಕುಟುಂಬದ ಸಹಾಯಕ್ಕೆ ಧಾವಿಸುವಂತೆ ಡಿಕೆಎಸ್​ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಟಿಆರ್​ಎಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), ಶಿವಕುಮಾರ್ ಅವರೇ, ನಾವು ಆ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತೇವೆ. ದಯವಿಟ್ಟು ಅವರ ಸಂಪರ್ಕದ ವಿವರ ನೀಡಿ. ನಮ್ಮ ಕಚೇರಿ ಅಧಿಕಾರಿಗಳು ಕೂಡಲೇ ಆಸ್ಪತ್ರೆ ಮೂಲವನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದಾರೆ ಎಂದು ಟ್ವೀಟ್ ಮಾಡಿದೆ. ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ಮೃತದೇಹವನ್ನ ಬಿಡುಗಡೆ ಮಾಡಿಸುವ ಕೆಸಿಆರ್ ಸರ್ಕಾರ ಡಿಕೆಎಸ್ ಮನವಿಗೆ ತ್ವರಿತವಾಗಿ ಸ್ಪಂದಿಸಿದೆ.

The post ತೆಲಂಗಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಂಡ್ಯ ಕುಟುಂಬ: DKS​ ಟ್ವೀಟ್​ಗೆ ತಕ್ಷಣವೇ ಸ್ಪಂದಿಸಿದ KCR ಸರ್ಕಾರ appeared first on News First Kannada.

Source: newsfirstlive.com

Source link