ತೆಲಂಗಾಣದ ಫಾರ್ಮ್ ಹೌಸ್ ಮೇಲೆ ಪೊಲೀಸ್ ದಾಳಿ: ಆಪರೇಷನ್ ಕಮಲಕ್ಕೆ ತಂದಿದ್ದ ಎನ್ನಲಾದ 15 ಕೋಟಿ ರೂ. ಸೀಜ್ – Telangana | Cyberabad Police conduct raids at a farmhouse in Ranga Reddy.


ತೆಲಂಗಾಣದಲ್ಲಿ ಟಿಆರ್‌ಎಸ್-ಬಿಜೆಪಿ ಜಿದ್ದಾಜಿದ್ದಿ ಬಿರುಸುಗೊಂಡಿದೆ. ಇದರ ಮಧ್ಯೆ ಪೋಲೀಸರು ಭರ್ಜರಿ ಕಾರ್ಯಚರಣೆ ಮಾಡಿ ಆಪರೇಷನ್ ಕಮಲಕ್ಕಾಗಿ ತಂದಿದ್ದ ಎನ್ನಲಾದ ಹಣವನ್ನು ಸೀಜ್ ಮಾಡಿದ್ದಾರೆ.

ತೆಲಂಗಾಣದ ಫಾರ್ಮ್ ಹೌಸ್ ಮೇಲೆ ಪೊಲೀಸ್ ದಾಳಿ: ಆಪರೇಷನ್ ಕಮಲಕ್ಕೆ ತಂದಿದ್ದ ಎನ್ನಲಾದ 15 ಕೋಟಿ ರೂ. ಸೀಜ್

Cyberabad Police conduct raids

ಹೈದರಾಬಾದ್‌: ತೆಲಂಗಾಣದ ಸೈಬರಾಬಾದ್  ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಮೇಲೆ‌ ದಾಳಿ ಮಾಡಿದ್ದು, ಬರೋಬ್ಬರಿ 15 ಕೋಟಿ ರೂ. ಹಣವನ್ನು ಸೀಜ್ ಮಾಡಿದ್ದಾರೆ.

ಹೈದರಾಬಾದ್‌ನ ಕೆ.ಎಲ್ ಯುನಿವರ್ಸಿಟಿ ಬಳಿ ಇರುವ ರಂಗಾ ರೆಡ್ಡಿಯ ಫಾರ್ಮ್ ಹೌಸ್ ಮೇಲೆ ಖಚಿತ ಮಾಹಿತಿ ಮೇರೆಗೆ ಇಂದು(ಅಕ್ಟೋಬರ್ 26) ಪೊಲೀಸರು ದಾಳಿ ಮಾಡಿದ್ದು, 15 ಕೋಟಿ ರೂಪಾಯಿ ನಗದು ಜಪ್ತಿ ಮಾಡುವುದರ ಜೊತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

TRSನ(ಭಾರತ್ ರಾಷ್ಟ್ರ ಸಮಿತಿ ) ನಾಲ್ಕು ಶಾಸಕರನ್ನು ಖರೀದಿಸಲು ಈ ಹಣ ತರಲಾಗಿದೆ ಎಂಬ ಮಾಹಿತಿ ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. ಆಪರೇಷನ್ ಕಮಲಕ್ಕಾಗಿ 15 ಕೋಟಿ ರೂ. ತಂದಿದ್ದು, ಹಣದ ಜೊತೆ ದೆಹಲಿಯಿಂದ ಬಂದಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಸರ್ಕಾರ ರಚಿಸಿದ ನಂತರ, ಬಿಜೆಪಿ ಈಗ ತೆಲಂಗಾಣದಲ್ಲಿ ಅಧಿಕಾರವನ್ನು ಆಕ್ರಮಿಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಟಿಆರ್‌ಎಸ್-ಬಿಜೆಪಿ ಜಿದ್ದಾಜಿದ್ದಿ ಬಿರುಸುಗೊಂಡಿದೆ. ಇದರ ಮಧ್ಯೆ ಆಪರೇಷನ್ ಕಮಲಕ್ಕೆ ತಂದಿದ್ದ ಎನ್ನಲಾದ 15 ಕೋಟಿ ರೂ. ಸೀಜ್ ಮಾಡಿದ್ದು, ಇದಕ್ಕೆ ಇಂಬು ನೀಡಿದಂತಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.