ತೆಲಂಗಾಣ; ಕೊಕಪೇಟ್​​ನಲ್ಲಿ ಭೂಮಿ ಹರಾಜು ಪ್ರಕ್ರಿಯೆಯಲ್ಲಿ 1,000 ಕೋಟಿಯ ಗೋಲ್​ಮಾಲ್ ನಡೆದಿದೆ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಮಲ್ಕಜ್​ಗಿರಿ ಹಾಗೂ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ತೆಲಂಗಾಣ ಸರ್ಕಾರದ ವಿರುದ್ಧ ಆರೋಪಿಸಿದ್ದರು.

ಇದನ್ನೂ ಓದಿ: ಹೈದರಾಬಾದ್ GHMC ಚುನಾವಣೆ: ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರಾಜೀನಾಮೆ

ಈ ಬೆನ್ನಲ್ಲೇ ಸರ್ಕಾರದ ವಿರುದ್ಧ ತೆಲಂಗಾಣ ಕಾಂಗ್ರೆಸ್ ಧರಣಿ ಕೂರಲು ಮುಂದಾಗಿತ್ತು.. ಈ ಬೆನ್ನಲ್ಲೇ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸೇರಿದಂತೆ, ಸಂಗರೆಡ್ಡಿ ಟಿ. ಜಯಪ್ರಕಾಶ್ ರೆಡ್ಡಿ, ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಮೊಹಮ್ಮದ್ ಅಲಿ ಶಬ್ಬಿರ್ ಅವರನ್ನ ಗೃಹಬಂಧನದಲ್ಲಿ ಇರಿಸಲಾಗಿದೆ.. ಕಾನೂನು ಸುವ್ಯವಸ್ಥೆ ಕಾಪಾಡಲು ಹೀಗೆ ಗೃಹಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೈತರಿಂದ ಭೂಮಿ ಕಿತ್ತುಕೊಂಡ ಆರೋಪ.. ತೆಲಂಗಾಣ ಆರೋಗ್ಯ ಸಚಿವನ ಸ್ಥಾನವನ್ನೇ ಕಸಿದ​​ ಕೆಸಿಆರ್

ಈ ಕುರಿತು ಟ್ವೀಟ್ ಮಾಡಿರುವ ರೇವಂತ್ ರೆಡ್ಡಿ.. ನಾನು ಪಾರ್ಲಿಮೆಂಟ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿತ್ತು.. ಆದರೆ ತೆಲಂಗಾಣ ಪೊಲೀಸರು ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ಮುಖ್ಯ ಕಾರ್ಯದರ್ಶಿಯವರ ಸೂಚನೆ ಮೇರೆಗೆ ನಾನು ಅಧಿವೇಶನದಲ್ಲಿ ಪಾಲ್ಗೊಳ್ಳದಂತೆ ಮಾಡಿದ್ದಾರೆಂದು ಹೇಳಿದ್ದಾರೆ. ಇನ್ನು ತೆಲಂಗಾಣ ಸರ್ಕಾರ ಕಾಂಗ್ರೆಸ್ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದು ಬೂಮಿ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ ಎಂದು ಹೇಳಿದ್ದಾರೆ.

The post ತೆಲಂಗಾಣ ಸರ್ಕಾರದ ವಿರುದ್ಧ ಧರಣಿ ಕೂರಲು ಮುಂದಾದ ಕಾಂಗ್ರೆಸ್ ಅಧ್ಯಕ್ಷನಿಗೆ ‘ಗೃಹಬಂಧನ’ appeared first on News First Kannada.

Source: newsfirstlive.com

Source link