ಗಟ್ಟಿಮೇಳ ಸೀರಿಯಲ್ನ ಬಾಯ್ಬಡಿಕಿ ಅದಿತಿ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಮುದ್ದು ಗೊಂಬೆಯಂತೆ ಪಟ್ ಪಟ್ ಅಂತಾ ಹರಳು ಹುರಿದಂತೆ ಮಾತ್ನಾಡುವ ಅದಿತಿ ಪಾತ್ರವನ್ನ ಸಮರ್ಥವಾಗಿ ನಿಭಾಯಿಸಿತ್ತಿರುವ ಪ್ರಿಯಾ ಆಚಾರ್ಯ ಜನರ ಅಚ್ಚುಮೆಚ್ಚು. ಪ್ರಿಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ.
ಸದ್ಯ ಪ್ರಿಯಾ ಅವರು ತೆಲುಗು ಪ್ರಾಜೆಕ್ಟ್ ಒಂದರಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದು, ವಿಭನ್ನ ಕಥಾ ಹಂದರವನ್ನ ಹೊಂದಿರುವ ಆನಂದರಾಗಂ ಸೀರಿಯಲ್ ಮೂಲಕ ತಲುಗು ಪ್ರೇಕ್ಷಕರ ಮನೆ ತಲುಪುತ್ತಿದ್ದಾರೆ.
ಹೌದು, ಜೆಮಿನಿ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿರುವ ಆನಂದರಾಗಂ ಕತೆ, ಮಂಗಳಮುಖಿಯ ಸುತ್ತ ಸುತ್ತುವ ಕತೆಯಾಗಿದ್ದು, ಶ್ರೀಮಂತ ಕುಟುಂಬದಲ್ಲಿ ಹಟ್ಟಿರುವ ಹುಡುಗನೊಬ್ಬ ಟ್ರಾನ್ಸ್ಜೆಂಡರ್ ಆಗಿ ಬದಲಾಗುತ್ತಾನೆ. ಈ ವಿಷಯ ಮನೆಯವರಿಗೆ ತಿಳಿದು ಬದಲಾದ ಹೆಣ್ಣು ಮಗಳನ್ನ ಮನೆಯಿಂದ ಹೊರ ಹಾಕುತ್ತಾರೆ.
ಸ್ವಾಲಂಬನೆಯ ಬದುಕು ಕಟ್ಟಿಕೊಳ್ಳುಲು ಮಂಗಳಮುಖಿ ಸಜ್ಜಾದಗ ಕಸದ ತೊಟ್ಟಿಯಲ್ಲಿ ಒಂದು ಹೆಣ್ಣು ಮಗು ದೊರೆಯುತ್ತದೆ. ಆ ಮಗುವೇ ಐಶ್ವರ್ಯ. ಈ ಪಾತ್ರಕ್ಕೆ ಪ್ರಿಯಾ ಅವರು ಬಣ್ಣ ಹಚ್ಚಿದ್ದು, ಒಂಟಿ ಮಂಗಳಮುಖಿ ಅನಾಥ ಹೆಣ್ಣು ಮಗುವೊಂದನ್ನ ಸಾಕುವ ಕತೆಯೇ ಆನಂದರಾಗಂ…
ತುಂಬಾನೇ ವಿಭಿನ್ನ ಶೈಲಿಯಲ್ಲಿ ಮೂಡಿಬರುತ್ತಿರುವ ಆನಂದರಾಗಂ ಪ್ರೋಮೊ ಸಖತ್ ಕುತೂಹಲ ಮೂಡಿಸುತ್ತಿದೆ. ಮಂಗಳಮುಖಿಯ ನೋವು ನಲಿವಿನ ಕತೆಯಾಗಿರುವ ಸೀರಿಯಲ್ನ ಮೂಲಕ ಇದೇ ಮೊದಲ ಬಾರಿಗೆ ನಾಯಕ ನಟಿಯಾಗಿ ಹೊರ ಹೊಮ್ಮುತ್ತಿರುವ
ಪ್ರೀಯಾ ತೆಲುಗುನಲ್ಲಿ ನಟನೆಯ ಕಂಪನ್ನ ಪಸರಿಸಲು ಸಿದ್ಧರಾಗಿದ್ದು, ತೆಲುಗು ಪ್ರೇಕ್ಷಕರನ್ನ ರಂಜಿಸಲಿದ್ದಾರೆ..
The post ತೆಲುಗಿಗೆ ಎಂಟ್ರಿ ಕೊಟ್ಟ ಗಟ್ಟಿಮೇಳದ ಚಿಟ್ಟೆ appeared first on News First Kannada.