ತೆಲುಗಿಗೆ ಎಂಟ್ರಿ ಕೊಟ್ಟ ‘ನಮ್ಮನೆ ಯುವರಾಣಿ’- ಯಾರಿಗೆ ಜೋಡಿಯಾಗ್ತಿದ್ದಾರೆ ಮೀರಾ?


ಕನ್ನಡದ ಕಿರುತೆರೆ ನಟ-ನಟಿಯರು ಪರಭಾಷೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನ ಕಂಡುಕೊಳ್ಳುತ್ತಿದ್ದು, ಕನ್ನಡದ ಜೊತೆ ಜೊತೆಗೆ ಬೇರೆ ಭಾಷೆಗಳಲ್ಲಿಯೂ ಕೂಡ ಮಿಂಚುತ್ತಿದ್ದಾರೆ. ಸದ್ಯ ಈ ಸಾಲಿಗೆ ಕಿರುತೆರೆಯ ಮತ್ತೊರ್ವ ನಟಿ ಸೇರ್ಪಡೆಯಾಗಿದ್ದು, ನಟ ಚಂದನ್​ಕುಮಾರ್​ ಅವರಿಗೆ ಜೋಡಿಯಾಗುತ್ತಿದ್ದಾರೆ.

ಹೌದು, ನಮ್ಮನೆ ಯುವರಾಣಿ ಮೂಲಕ ಮನೆ ಮಾತಾಗಿರುವ ನಟಿ ಅಂಕಿತಾ ಅಮರ್​ ಈಗ ತೆಲುಗು ಪ್ರಾಜೆಕ್ಟ್ ಮಾಡಲು ಸಜ್ಜಾಗಿದ್ದಾರೆ. ತೆಲುಗಿನ ಸ್ಟಾರ್​ ಮಾನಲ್ಲಿ ಶುರುವಾಗುತ್ತಿರುವ ಹೊಸ ಸೀರಿಯಲ್​ ಶ್ರೀಮತಿ ಶ್ರೀನಿವಾಸ್​ ಮೂಲಕ ಇದೇ ಮೊದಲ ಬಾರಿಗೆ ತೆಲುಗು ಪ್ರೇಕ್ಷಕರನ್ನ ರಂಜಿಸಲು ಸಿದ್ದರಾಗುತ್ತಿದ್ದಾರೆ.

ಇನ್ನೊಂದು ವಿಶೇಷ ಅಂದ್ರೇ ಈಗಾಗಲೇ ಸಾಕಷ್ಟು ತೆಲುಗು ಪ್ರಾಜೆಕ್ಟ್​ಗಳನ್ನ ಮಾಡಿ ಸೈ ಎನಿಸಿಕೊಂಡಿರುವ ನಟ ಚಂದನ್​ಕುಮಾರ ಅವರು ಸದ್ಯ ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಸೀರಿಯಲ್​ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದು, ಶ್ರೀಮತಿ ಶ್ರೀನಿವಾಸ್ ಸೀರಿಯಲ್​ನಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಕನ್ನಡ ಜನಪ್ರೀಯ ನಟ ಚಂದನ್​ ಹಾಗೂ ನಟಿ ಅಂಕಿತಾ ತೆಲುಗಿನ ಶ್ರೀಮತಿ ಶ್ರೀನಿವಾಸ್ ಸೀರಿಯಲ್​ನಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​ ನೀಡಿದ್ದಾರೆ.

ಈ ಬಗ್ಗೆ ಸ್ವತಃ ಚಂದನ್​ ಅವರೇ ನ್ಯೂಸ್​ ಫರ್ಸ್ಟ್​ ಜೊತೆ ಮಾತ್ನಾಡಿ ಮಾಹಿತಿ ಹಂಚಿಕೊಂಡಿದ್ದು, ಸುಶಾಂತ್​ ಸಿಂಗ್​ ರಾಜಾಪೂತ್​ ಹಾಗೂ ಅಂಕಿತಾ ಲೋಕಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸೂಪರ್​ ಡುಪರ್​ ಹಿಟ್​ ಹಿಂದಿ ಸೀರಿಯಲ್​ ಪವಿತ್ರ ರಿಶ್ತಾದ ರಿಮೇಕ್​ ಶ್ರೀಮತಿ ಶ್ರೀನಿವಾಸ್ ಆಗಿದ್ದು, ಏಕ್ತಾ ಕಪೂರ್​ ನಿರ್ಮಾಣದ ಈ ಸೀರಿಯಲ್​ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಸೊಗಸಾದ ಕತೆ ಹೊಂದಿರುವ ಈ ಸೀರಿಯಲ್​ನ್ನ ಮರಳಿ ಮನಸ್ಸಾಗಿದೆ ಸೀರಿಯಲ್​ ನಿರ್ಮಾಪಕರೇ ತೆಲುಗಿಗೆ​ ನಿರ್ಮಾಣ ಮಾಡುತ್ತಿದ್ದಾರೆ ಎಂದರು.

ಚಂದನ್​ ಹಾಗೂ ಅಂಕಿತಾ ಸದ್ಯ ಕನ್ನಡ ಸ್ಮಾಲ್​ ಸ್ಕ್ರೀನ್​ನಲ್ಲಿ ಜನಪ್ರಿಯ ಕಲಾವಿದರು. ಅಂಕಿತಾ ಬಹುಮುಖ ಪ್ರತಿಭೆಯಾಗಿದ್ದು, ನೃತ್ಯ, ಹಾಡು, ನಿರೂಪಣೆ ಎಲ್ಲದರಲ್ಲಿಯೂ ಟಾಪ್​ನಲ್ಲಿದ್ದಾರೆ. ಇನ್ನು ಚಂದನ್​ ಕೂಡ ಈಗಾಗಲೇ ತೆಲುಗು ನಾಡಿನಲ್ಲಿ ಮನೆಮಾತಾದವರು. ಈ ಇಬ್ಬರ ಜೋಡಿ ಹೇಗಿರಲಿದೆ? ಎಂಬ ಕುತೂಹಲ ಮೂಡಿಸಿದ್ದು, ಮುಂದಿನ ತಿಂಗಳ ಹೊತ್ತಿಗೆ ತೆಲುಗು ಪ್ರೇಕ್ಷಕರ ಮನೆ ತಲುಪಲಿದ್ದಾರೆ ನಮ್ಮ ಕನ್ನಡದ ಪ್ರತಿಭೆಗಳು.

The post ತೆಲುಗಿಗೆ ಎಂಟ್ರಿ ಕೊಟ್ಟ ‘ನಮ್ಮನೆ ಯುವರಾಣಿ’- ಯಾರಿಗೆ ಜೋಡಿಯಾಗ್ತಿದ್ದಾರೆ ಮೀರಾ? appeared first on News First Kannada.

News First Live Kannada


Leave a Reply

Your email address will not be published. Required fields are marked *