ನಟ ಶ್ರೀಕಾಂತ್ ಅಭಿನಯದ 1996ರ ಬ್ಲಾಕ್​ಬಸ್ಟರ್​ ಹಿಟ್​ ಪೆಳ್ಳಿಸಂದಡಿ ಸಿನಿಮಾದ ಸೀಕ್ವೆಲ್​ ಶೂಟ್​ ಈಗಾಗಲೇ ಕಂಪ್ಲೀಟ್​ ಆಗಿದೆ. ‘ಕಿಸ್’​, ‘ಭರಾಟೆ’ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಶ್ರೀಲೀಲಾ ಕೂಡ, ಈ ಸಿನಿಮಾದ ಮೂಲಕ ಟಾಲಿವುಡ್​ಗೆ ಮುಖ ಮಾಡಿದ್ದಾರೆ. ಇದೀಗ ಈ ಸಿನಿಮಾದ ಮೊದಲ ಲಿರಿಕಲ್​ ಹಾಡು ಬಿಡುಗಡೆಯಾಗಿದ್ದು, ಶ್ರೀಲೀಲಾ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

​1996ರ ಪೆಳ್ಳಿ ಸಂದಡಿ ಸಿನಿಮಾದ ನಿರ್ದೇಶಕ ಕೆ.ರಾಘವೇಂದ್ರ ರಾವ್​ ನೇತೃತ್ವದಲ್ಲಿ ಗೌರಿ ರೋನಂಕಿ ಸೀಕ್ವೆಲ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಎಂ.ಎಂ ಕೀರವಾನಿ ಸಂಗೀತ ನೀಡಿದ್ದು, ಸದ್ಯ ಬಿಡುಗಡೆಯಾದ ಲಿರಿಕಲ್​ ಹಾಡಿಗೆ ಹರಿ ಚರಣ್​ ಹಾಗೂ ಶ್ವೇತ ಪಂಡಿತ್ ಧ್ವನಿಯಾಗಿದ್ದಾರೆ. ​ಚಂದ್ರ ಬೋಸ್​ ಲಿರಿಕ್ಸ್ ಮನಮುಟ್ಟುವಂತಿದೆ. ​

ಈ ಸಿನಿಮಾದ ವಿಶೇಷವೇ ನಟ ಶ್ರೀಕಾಂತ್​ ಪುತ್ರ ರೋಷನ್​ ಶ್ರೀಲೀಲಾ ಜೊತೆ ಬಣ್ಣ ಹಚ್ಚಿರೋದು. ಹೌದು.. ಪೆಳ್ಳಿ ಸಂದಡಿ -2 ಸಿನಿಮಾದ ಮೂಲಕ ರೋಷನ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇನ್ನು, ನಟಿ ಶ್ರೀಲೀಲಾ ಹಾಗೂ ಧನ್ವೀರ್​ ಅಭಿನಯದ ‘ಬೈ ಟು ಲವ್’​ ಸಿನಿಮಾದ ಶೂಟಿಂಗ್​ ಕೂಡ ಕಂಪ್ಲೀಟ್​ ಆಗಿದೆ. ಇದರ ಜೊತೆಗೆ ಟಾಲಿವುಡ್​ಗೆ ಎಂಟ್ರಿ ನೀಡಿರುವ ಶ್ರೀಲೀಲಾ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ.

The post ತೆಲುಗಿನಲ್ಲಿ ಶ್ರೀಲೀಲಾ ಕಮಾಲ್; ಕ್ಯೂಟ್ ಆಗಿ ಕಾಣ್ತಿದ್ದಾರೆ ಬೆಂಗಳೂರು ಗರ್ಲ್​ appeared first on News First Kannada.

Source: newsfirstlive.com

Source link