ಈಗ ಚಂದನ್ ಕುಮಾರ್ ಅವರ ಮೇಲೆ ಕನಿಷ್ಠ ಎರಡು ವರ್ಷ ಬ್ಯಾನ್ ಹೇರುವಂತೆ ಆಗ್ರಹ ಕೇಳಿ ಬಂದಿದೆ

ತೆಲುಗು ಕಿರುತೆರೆಯಿಂದ ಕನ್ನಡಿಗರನ್ನು ತುಳಿಯುವ ಕೆಲಸ ಆಗುತ್ತಿದೆ ಎಂದು ನಟ ಚಂದನ್ ಕುಮಾರ್ ಅವರು ಆರೋಪ ಮಾಡಿದ್ದರು. ‘ಶ್ರೀಮತಿ ಶ್ರೀನಿವಾಸ್’ ಧಾರಾವಾಹಿ ಶೂಟಿಂಗ್ ಸಂದರ್ಭದಲ್ಲಿ ನಡೆದ ಗಲಾಟೆ ಕುರಿತು ಅವರು ಈ ಮಾತನ್ನು ಹೇಳಿದ್ದರು. ಈಗ ಚಂದನ್ ಕುಮಾರ್ ಅವರ ಮೇಲೆ ಕನಿಷ್ಠ ಎರಡು ವರ್ಷ ಬ್ಯಾನ್ ಹೇರುವಂತೆ ಆಗ್ರಹ ಕೇಳಿ ಬಂದಿದೆ. ತೆಲುಗು ಟಿವಿ ಇಂಡಸ್ಟ್ರಿಯ ವಿರುದ್ಧ ಚಂದನ್ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ, ಒಟಿಟಿ ಮತ್ತು ಟಿವಿಯಿಂದ ಅವರಿಗೆ ನಿಷೇಧ ಹೇರಬೇಕು ಎಂದು ಕೋರಲಾಗಿದೆ.