ತೆಲುಗು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ ಸಲ್ಮಾನ್ ಖಾನ್? ಸ್ಟಾರ್ ನಿರ್ದೇಶಕನ ಆಫರ್ ರಿಜೆಕ್ಟ್​ – Salman Khan Rejected Star Director Harish Shankar Story after Godfather flop show in Telugu


ಸಲ್ಮಾನ್ ಖಾನ್ ಅವರು ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದವರು. ಆದರೆ, ಇತ್ತೀಚೆಗೆ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಇದೇ ಸಂದರ್ಭದಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ತೆಲುಗು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ ಸಲ್ಮಾನ್ ಖಾನ್? ಸ್ಟಾರ್ ನಿರ್ದೇಶಕನ ಆಫರ್ ರಿಜೆಕ್ಟ್​

ಸಲ್ಮಾನ್,ಪವನ್,ಹರೀಶ್

ನಟ ಸಲ್ಮಾನ್ ಖಾನ್ (Salman Khan) ಅವರು ‘ಗಾಡ್ ಫಾದರ್’ ಚಿತ್ರದ (GodFather Movie) ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ಚಿರಂಜೀವಿ ಅವರು ಲೀಡ್ ರೋಲ್ ಮಾಡಿದರೆ ಸಲ್ಮಾನ್ ಖಾನ್ ಅವರು ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ, ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಸಲ್ಮಾನ್ ಖಾನ್ ಅವರು ನಟಿಸಿದ ಹೊರತಾಗಿಯೂ ಈ ಸಿನಿಮಾ ಹಿಂದಿ ಬೆಲ್ಟ್​​ನಲ್ಲಿ ಕಳಪೆ ಕಲೆಕ್ಷನ್ ಮಾಡಿತು. ಈಗ ಸಲ್ಮಾನ್ ಖಾನ್ ಅವರು ತೆಲುಗು ಚಿತ್ರರಂಗದಿಂದ ದೂರ ಉಳಿಯುವ ಪ್ಲ್ಯಾನ್​ನಲ್ಲಿ ಇದ್ದಾರೆ ಎಂದು ವರದಿ ಆಗಿದೆ.

ಸಲ್ಮಾನ್ ಖಾನ್ ಅವರು ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದವರು. ಆದರೆ, ಇತ್ತೀಚೆಗೆ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಇದೇ ಸಂದರ್ಭದಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಗೆಳೆಯ ಚಿರಂಜೀವಿಗಾಗಿ ‘ಗಾಡ್​​ಫಾದರ್​’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಮಲಯಾಳಂನ ‘ಲೂಸಿಫರ್​’ ಚಿತ್ರದ ರಿಮೇಕ್ ಆಗಿತ್ತು. ಮೊದಲ ಎರಡು ದಿನ ಸಿನಿಮಾ ಸದ್ದು ಮಾಡಿದ್ದು ಬಿಟ್ಟರೆ ದೊಡ್ಡ ಕಲೆಕ್ಷನ್ ಮಾಡಲಿಲ್ಲ.

ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ತೆಲುಗು ನಿರ್ದೇಶಕ ಹರೀಶ್ ಶಂಕರ್​ ಕಥೆ ಹೇಳಿದ್ದರು. ‘ಗಬ್ಬರ್​’, ‘ಡಿಜೆ’ ಮೊದಲಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಹರೀಶ್ ಶಂಕರ್​ಗೆ ಇದೆ. ಅವರು ಪವನ್ ಕಲ್ಯಾಣ್ ನಟಿಸಲಿರುವ ‘ಭವದೀಯುಡು ಭಗತ್ ಸಿಂಗ್’ ಚಿತ್ರದ ಕೆಲಸಗಳಲ್ಲಿ ಭಾಗಿ ಆಗಬೇಕಿತ್ತು. ಆದರೆ, ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿ ಆದ್ದರಿಂದ ಬೇರೆ ನಟರ ಜತೆ ಕೆಲಸ ಮಾಡುವುದು ಹರೀಶ್ ಶಂಕರ್​​ಗೆ ಅನಿವಾರ್ಯವಾಗಿದೆ. ಹೀಗಾಗಿ, ಸಲ್ಲು ಕಾಲ್​ಶೀಟ್ ಕೇಳಿದ್ದರು ಹರೀಶ್.

TV9 Kannada


Leave a Reply

Your email address will not be published.