ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ‘ಟೋಪಿವಾಲಾ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಮನೆಮಾತಾದ ಶ್ರೀನಿವಾಸ್​ ಅಲಿಯಾಸ್​ ಶ್ರೀನಿ, ನಂತರದಲ್ಲಿ ನಿರ್ದೇಶನದ ಜೊತೆಗೆ ನಾಯಕನಟನಾಗಿಯೂ ಹೆಸರು ಮಾಡಿದವರು. ಇದೀಗ ತಾವೇ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ‘ಬೀರ್​ಬಲ್’​ ಸಿನಿಮಾ ತಮಿಳಿನಲ್ಲಿ ರೀಮೇಕ್​ ಆಗ್ತಿದೆ. ಹೌದು.. ಈ ಹಿಂದೆ ತೆಲುಗಿನಲ್ಲಿ ರೀಮೇಕ್​ ಆಗಿದ್ದ ‘ಬೀರ್​ಬಲ್​-ದಿ ಟ್ರೈಲಾಜಿ’, ಇದೀಗ ತಮಿಳಿನಲ್ಲಿ ರೆಡಿಯಾಗ್ತಿದೆ.

ಕನ್ನಡದಲ್ಲಿ ಶ್ರೀನಿ ನಿರ್ದೇಶನ ಮಾಡಿರುವ ಈ ಸಿನಿಮಾಗೆ ನಿರ್ದೇಶಕ ಕ್ರಿಷ್​​ ತಮಿಳಿನಲ್ಲಿ ಆ್ಯಕ್ಷನ್​ ಕಟ್​ ಹೇಳ್ತಿದ್ದು, ನಟ ಶಾಂತನೂ ಭಾಗ್ಯರಾಜ್​​ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ‘ಮದಿಯಾಲನ್​ ಕೇಸ್​-1’ ಅನ್ನೋ ಹೆಸರಿನಲ್ಲಿ ಸಿನಿಮಾ ರೆಡಿಯಾಗಲಿದ್ದು, ಲಾಕ್​ಡೌನ್​​ ಮುಗಿಯುತ್ತಿದ್ದಂತೆಯೇ ಮುಂದಿನ ಕೆಲಸಗಳು ಶುರುವಾಗಲಿವೆ ಅಂತ ಸ್ವತಃ ನಿರ್ದೇಶಕ ಕ್ರಿಷ್ ಎಕ್ಸ್​​​ಕ್ಲೂಸಿವ್​​ ನ್ಯೂಸ್​ ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

‘ನಟ ಶಾಂತನೂ ಭಾಗ್ಯರಾಜ್​ರನ್ನ ಹೊರತುಪಡಿಸಿ ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಎಲ್ಲವೂ ಲಾಕ್​ಡೌನ್​ ನಂತರದಲ್ಲೇ ತೀರ್ಮಾನವಾಗುತ್ತೆ’ ಅಂತಾನೂ ಕ್ರಿಷ್​ ತಿಳಿಸಿದ್ದಾರೆ. ಅಂದ್ಹಾಗೆ ಈ ಹಿಂದೆ ತೆಲುಗಿನಲ್ಲಿ ‘ತಿಮ್ಮರುಸು- ಅಸೈನ್​ಮೆಂಟ್​ ವಾಲಿ’ ಅನ್ನೋ ಟೈಟಲ್​ನಲ್ಲಿ ಸಿನಿಮಾ ತಯಾರಾಗಿದೆ. ಈ ವರ್ಷ ಜನವರಿಯಲ್ಲಿ ಈ ಸಿನಿಮಾ ಬಿಡುಗಡೆ​ಗೆ ರೆಡಿಯಾಗಿದ್ದರೂ, ಕೊರೊನಾ ಕಾರಣ ರಿಲೀಸ್​​ ಮುಂದೂಡಲಾಗಿದೆ.

The post ತೆಲುಗು ನಂತರ ಇದೀಗ ತಮಿಳಿನಲ್ಲಿ ನಿರ್ದೇಶಕ ಶ್ರೀನಿಯ ‘ಬೀರ್​ಬಲ್’​ ಸಿನಿಮಾ ರಿಮೇಕ್ appeared first on News First Kannada.

Source: newsfirstlive.com

Source link