ನಟಿ ಭವ್ಯಾ ಗೌಡ ಅವರ ಗೀತಾ ಧಾರಾವಾಹಿಯನ್ನ ಜನ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ರೌಡಿ ಬೇಬಿ ಪಾತ್ರ ಮಾಡ್ತಾಯಿರುವ ಗೀತಾ ಸೀರಿಯಲ್ ವ್ಯೂವರ್ಸ್ಗೆ ಇಷ್ಟವಾಗಿದ್ದಾಳೆ. ಅದರಲ್ಲೂ ಗೀತಾ ವಿಜಯ್ ಜೋಡಿಯನ್ನ ಪ್ರೇಕ್ಷಕರು ಸೂಪರ್ ಅಂದಿದ್ದಾರೆ..ಅದಕ್ಕೆ ಮುಖ್ಯ ಕಾರಣ ಇವರಿಬ್ಬರ ನಡುವೆ ಎಷ್ಟೆ ಮನಸ್ತಾಪ ಹಾಗೂ ತೊಂದರೆಗಳು ಬಂದ್ರು ಅವೆಲ್ಲವುಗಳನ್ನಾ ಎದುರಿಸುತ್ತಾ ಮುನ್ನುಗ್ತಾಯಿದ್ದಾರೆ ಅದರಲ್ಲೂ ಗೀತಾಳ ಧೈರ್ಯ ನೋಡಿ ಜನ ಶಭಾಷ್ ಎಂದಿದ್ದಾರೆ..
ಸದ್ಯ ಗೀತಾ ಧಾರಾವಾಹಿಯಲ್ಲಿ ನಮ್ಮ ವಿಲನ್ ಭಾನುಮತಿಗೆ ಲೇಡಿಬಾಂಡ್ ಗೀತಾ ಸಖತ್ ಅವಾಜ್ ಹಾಕಿದ್ದಾಳೆ. ಗೀತಾ ಕೊಟ್ಟ ಪಂಚ್ಗೆ ಭಾನುಮತಿ ತಟಸ್ತಳಾಗಿದ್ದಾಳೆ.. ಗೀತಾ ಮಾತ್ರ ಅಲ್ಲಿ ಜೊತೆಗೆ ನಮ್ಮ ಮಂಗಳಗೌರಿ ಕೂಡ ಸೇರಿಕೊಂಡು ಹೊಸ ಎಳೆಯೊಂದಿಗೆ ಬರ್ತಾಯಿದ್ದಾರೆ.
ಇದು ಗೀತಾ ಕಥೆ. ಆದ್ರೆ ನಮ್ಮ ಭವ್ಯಾಗೌಡ ಸದ್ಯ ಫುಲ್ ಬ್ಯುಸಿಯಾಗಿದ್ದಾರೆ. ಯಾಕೆ ಅಂತಿರಾ.. ಭವ್ಯಾ ಕನ್ನಡ ಮಾತ್ರವಲ್ಲ ಸದ್ಯ ತೆಲುಗಿನಲ್ಲೂ ಕೂಡ ಒಂದು ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಹೌದು, ತೆಲುಗಿನ ಸ್ಟಾರ್ ಮಾ ದಲ್ಲಿ ಮೂಡಿ ಬರ್ತಾಯಿರುವ ಕಲಸೆವುಂಟೆ ಕಲೆದ ಸುಖಂ ಧಾರಾವಾಹಿಯಲ್ಲಿ ಭವ್ಯಾಗೌಡ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಸದ್ಯ ಆ ಧಾರಾವಾಹಿಯ ಪ್ರೋಮೊ ರಿಲೀಸ್ ಆಗಿದ್ದು ಸದ್ದು ಮಾಡ್ತಾಯಿದೆ. ತೆಲುಗು ಪ್ರೇಕ್ಷಕರು ಮಾತ್ರವಲ್ಲದೆ ಕನ್ನಡದ ಪ್ರೇಕ್ಷಕರು ಕೂಡ ಭವ್ಯಾ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಭವ್ಯಾ ಗೌಡ ಈ ಧಾರಾವಾಹಿಯಲ್ಲಿ ಪೂಜಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದು.. ಪೂಜಾ ಒಬ್ಬ ಹಳ್ಳಿ ಹುಡುಗಿ. ಇವಳಿಗೆ ಒಂದು ಕಂಪ್ಲೀಟ್ ಫ್ಯಾಮಿಲಿ ಇರ್ಬೆಕು ಆ ಕುಟುಂಬದ ಜೊತೆ ಯಾವಾಗ್ಲು ಖುಷಿಯಾಗಿ ಇರ್ಬೆಕೂ ಎಂಬುವುದೆ ಇವಳ ಆಸೆ.. ಆದ್ರೆ ಮನೆಯವ್ರ ತಮ್ಮ ತಮ್ಮ ಮನಸ್ಥಿತಿಗೆ ತಕ್ಕಂತೆ ವರ್ತಿಸಿದಾಗ ಕಲಹಗಳು ಸಮಾನ್ಯ ಆ ಸಿಚ್ಯೂಯೇಷನ್ನ ಹೇಗೇ ಎದುರಿಸ್ತಾಳೆ.. ಮನೆಯವ್ರ ಜೊತೆ ಹೇಗಿರ್ತಾಳೆ… ಎಂಬುವುದೇ ಈ ಧಾರಾವಾಹಿಯ ಮುಖ್ಯ ಎಳೆಯಾಗಿದೆ.
ಗೀತಾ ಪಾತ್ರಕ್ಕೆ ಹೊಲಿಸಿದ್ರೆ ಕೊಂಚ ಮಟ್ಟಿಗೆ ಚೇಂಜಸ್ ಇದೆಯಂತೆ.. ಈ ಟೀಮ್ 4 ತಿಂಗಳುಗಳ ಕಾಲ ಡೇಟ್ಗಾಗಿ ಕಾದಿದ್ದಾರಂತೆ.. ಇನ್ನೂ ಭವ್ಯಾ ಅವರಿಗೆ ಸ್ವಲ್ಪ ತೆಲುಗು ಮಾತನಾಡಲು ಬರುವುದರಿಂದ ಲಾಂಗ್ವೇಜ್ ಸಮಸ್ಯ ಏನು ಆಗಿಲ್ಲಾವಂತೆ. ಸದ್ಯ ಧಾರಾವಾಹಿಯ ಶೂಟಿಂಗ್ ಶುರುವಾಗಿದ್ದು ಭವ್ಯ ಬ್ಯುಸಿಯಾಗಿದ್ದಾರೆ. ಒಟ್ನಲ್ಲಿ ಕನ್ನಡ ಮಾತ್ರವಲ್ಲ ತೆಲುಗು ಕಿರುತೆರೆಯಲ್ಲು ಮಿಂಚಲು ಸಜ್ಜಾಗಿರುವ ಭವ್ಯಾ ಗೌಡ ಅವರಿಗೆ ಒಳ್ಳೆದಾಗಲಿ.