ಬೆಂಗಳೂರು: ಬೆಡ್ ಹಂಚಿಕೆ ಹಗರಣ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಭಾಶಯ ಹೇಳಿದ್ದಾರೆ. ಜೊತೆಗೆ ಬಿಬಿಎಂಪಿ ಯಾರ ಕಂಟ್ರೋಲ್ ನಲ್ಲಿದೆ ಅಂತಲೂ ಪ್ರಶ್ನಿಸಿದ್ದಾರೆ.

ಟ್ವೀಟ್ ಮಾಡುವ ಮೂಲಕ ಶುಭಾಶಯ ಹೇಳಿರುವ ಡಿಕೆ ಶಿವಕುಮಾರ್.. ತಮ್ಮದೇ ಸರ್ಕಾರ ಹಾಗೂ ಪಾಲಿಕೆಯಲ್ಲಿ ನಡೆದಿರೋ ಬೆಡ್ ಹಂಚಿಕೆ ಹಗರಣ ಬಯಲಿಗೆಳೆದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಹಾಗೂ ಉದಯ ಗರುಡಾಚಾರ್ ಅವರಿಗೆ ಅಭಿನಂದನೆ.

ಬಿಬಿಎಂಪಿ ಯಾರ ಕಂಟ್ರೋಲ್ ನಲ್ಲಿದೆ..? ಜನರು ಇಷ್ಟೊಂದು ಸಂಕಷ್ಟ ಅನುಭವಿಸಲು ಕಾರಣಕರ್ತರಾದ ಸಚಿವರನ್ನು ಸರ್ಕಾರ ಕೂಡಲೇ ಹೊಣೆಗಾರರನ್ನಾಗಿಸಲಿ ಎಂದು ಡಿ ಕೆ ಶಿವಕುಮಾರ್ ಒತ್ತಾಯ ಮಾಡಿದ್ದಾರೆ.

The post ತೇಜಸ್ವಿ ಸೂರ್ಯ ಥ್ಯಾಂಕ್ಸ್ ಎಂದ ಡಿ.ಕೆ ಶಿವಕುಮಾರ್, ಆ ‘ಮಿನಿಸ್ಟರ್’ ಬಗ್ಗೆ ಹೇಳಿದ್ದೇನು? appeared first on News First Kannada.

Source: newsfirstlive.com

Source link