ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದ ಉಂಟಾಗಿರೋ ಸಂಕಷ್ಟ ಪರಿಹರಿಸಲು ಈಗಾಗಲೇ ರೇಲ್ವೆ ಹಾಗೂ ವಾಯುಸೇನೆ ಸಾಥ್ ನೀಡಿವೆ. ರಾಜ್ಯಗಳಿಗೆ ಆಕ್ಸಿಜನ್ ಪೂರೈಸಲು ಭಾರತೀಯ ರೇಲ್ವೆ ಆಕ್ಸಿಜನ್ ಎಕ್ಸ್​ಪ್ರೆಸ್​ ಸೇವೆ ನೀಡುತ್ತಿದ್ದರೆ, ಐಎಎಫ್​ನ ವಿಮಾನಗಳು ವಿದೇಶಗಳಿಂದ ಆಕ್ಸಿಜನ್ ಕಂಟೇನರ್​ಗಳನ್ನ ಏರ್​ಲಿಫ್ಟ್​ ಮಾಡಿ ತರುತ್ತಿವೆ.
ಭಾರತದ ಆಕ್ಸಿಜನ್ ಕೊರತೆ ನೀಗಿಸಲು ಇದೀಗ ಡಿಆರ್​ಡಿಓ ನೆರವಿಗೆ ಧಾವಿಸಿದೆ.

ಶತ್ರುಗಳ ಎದೆ ನಡುಗಿಸಬಲ್ಲ ಭಾರತದ ಹೆಮ್ಮೆಯ ಸ್ವದೇಶಿ ಲಘು ಯುದ್ಧವಿಮಾನ ತೇಜಸ್.  ಅತ್ಯಾಧುನಿಕ ತಂತ್ರಜ್ಞಾನ ಹೊಂದಿರೋ ತೇಜಸ್ ಅತ್ಯಂತ​ ವೇಗದಲ್ಲಿದ್ದಾಗ ಹಾಗೂ ಅತ್ಯಂತ ಮೇಲೆ ಹರುವಾಗ ಮೆಡಿಕಲ್ ಆಕ್ಸಿಜನ್ ಪ್ಲಾಂಟ್​​  ಟೆಕ್ನಾಲಜಿ ಬಳಸಿಕೊಂಡು ಪೈಲ​ಟ್​ಗಳಿಗೆ ಆಕ್ಸಿಜನ್ ಉತ್ಪಾದಿಸುತ್ತದೆ. ಇದೀಗ ದೇಶದ ಆಕ್ಸಿಜನ್ ಕೊರತೆ ನೀಗಿಸಲು ಇದೇ ತಂತ್ರಜ್ಞಾನವನ್ನ ನೀಡಲು ಡಿಆರ್​ಡಿಓ ಮುಂದಾಗಿದೆ.

3 ತಿಂಗಳಲ್ಲಿ 500 ಆಕ್ಸಿಜನ್ ಪ್ಲಾಂಟ್​ ಸ್ಥಾಪನೆ
ಡಿಫೆನ್ಸ್​​ ರೀಸರ್ಚ್ ಆ್ಯಂಡ್ ಡೆವಲಪ್​ಮೆಂಟ್ ಆರ್ಗನೈಜೇಶನ್(ಡಿಆರ್​ಟಿಓ) ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಸೂಚನೆಯಂತೆ ಈ ಕ್ರಮಕ್ಕೆ ಮುಂದಾಗಿದೆ. ನಿಮಿಷಕ್ಕೆ 1 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಈ ಮೆಡಿಕಲ್ ಆಕ್ಸಿಜನ್ ಪ್ಲಾಂಟ್​​ ಟೆಕ್ನಾಲಜಿ ಬಳಸಿಕೊಂಡು ದೇಶಾದ್ಯಂತ 500 ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲು ಡಿಆರ್​​ಡಿಓ ಸಿದ್ಧತೆ ನಡೆಸಿದೆ. ಈ ಅತ್ಯಾಧುನಿಕ ತಂತ್ರಜ್ಞಾನದಿಂದ  ಲಕ್ಷಾಂತರ ಜನರ ಪ್ರಾಣ ಉಳಿಸಬಹುದು ಎನ್ನಲಾಗಿದೆ. ಪಿಎಂ ಕೇರ್ಸ್​ ಫಂಡ್​​ ಅಡಿ ಡಿಆರ್​ಡಿಓ ಮೂರು ತಿಂಗಳಲ್ಲಿ 500 ಆಕ್ಸಿಜನ್ ಪ್ಲಾಂಟ್​ಗಳನ್ನ ಸ್ಥಾಪಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

The post ತೇಜಸ್​​ ಜೆಟ್​ನಲ್ಲಿ ಬಳಸೋ ತಂತ್ರಜ್ಞಾನ ಬಳಕೆ; ದೇಶಾದ್ಯಂತ 500 ಆಕ್ಸಿಜನ್​​​ ಪ್ಲಾಂಟ್​ ಸ್ಥಾಪಿಸಲಿರುವ DRDO appeared first on News First Kannada.

Source: newsfirstlive.com

Source link