ನವದೆಹಲಿ: ತೈಲ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಸಾಮಾಜಿಕ ಕಾರ್ಯಕರ್ತನೋರ್ವ ದೂರು ದಾಖಲಿಸಿದ್ದಾನೆ.

ಬಿಹಾರದ ಮುಜಾಫರ್​ಪುರ್ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ತಮನ್ನ ಹಶ್ಮಿ ಎಂಬಾತ ದೂರು ದಾಖಲಿಸಿದ್ದು, ಬೆಲೆ ಏರಿಕೆ ಜನರನ್ನ ಭಯಭೀತಗೊಳಿಸಿದೆ ಅಂತ ಹೇಳಿದ್ದಾನೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಕಡಿಮೆ ಇದೆ. ಆದ್ರೆ, ದೇಶದಲ್ಲಿ ತೈಲಬೆಲೆ 100ರ ಗಡಿ ದಾಟಿದೆ. ಇದರ ಹಿಂದೆ ಪಿತೂರಿ ಇದೆ ಅಂತ ದೂರಿನಲ್ಲಿ ತಮನ್ನ ಹಶ್ಮಿ ಉಲ್ಲೇಖಿಸಿದ್ದಾನೆ.

The post ತೈಲ ದರ ಏರಿಕೆ ಖಂಡಿಸಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ appeared first on News First Kannada.

Source: newsfirstlive.com

Source link