ತೈಲ ಬೆಲೆ ಇಳಿಕೆ ಬೆನ್ನಲ್ಲೇ ಬಿಗ್​ ಶಾಕ್; ಭಾರೀ ಬೆಲೆ ಹೆಚ್ಚಳಕ್ಕೆ ಮುಂದಾದ ಹೋಟೆಲ್ ಮಾಲೀಕರು


ಬೆಂಗಳೂರು: ತೈಲ ಬೆಲೆ ದರ ಇಳಿಕೆ ಬೆನ್ನಲ್ಲೇ ಗ್ರಾಹಕರಿಗೆ ಹೋಟೆಲ್​ ಮಾಲೀಕರು ಶಾಕ್​ ನೀಡಿದ್ದಾರೆ, ತೈಲ ಬೆಲೆ ಏನೋ ಕೊಂಚ ಇಳಿಯಿತು ಆದರೆ ಇಂಧನ ಬೆಲೆ ಮಾತ್ರ ಇನ್ನು ಏರುತ್ತಲೆ ಇದ್ದು ಕಂಗಾಲಾದ ಮಾಲಿಕರು ಹೊಟೇಲ್​ ಊಟ ತಿಂಡಿಗಳ ಬೆಲೆಯನ್ನ ಏರಿಸಿ ದೀಪಾವಳಿ ಸಂಭ್ರಮದಲ್ಲಿರೋ ಗ್ರಾಹಕರಿಗೆ ಶಾಕ್​ ನೀಡಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಕಮರ್ಷಿಯಲ್​ ಸಿಲಿಂಡರ್​ಬ ಬೆಲೆ 2000 ರೂಪಾಯಿಗಳಿಗೆ ಏರಿಕೆ ಕಂಡಿದ್ದು ಹೋಟೆಲ್​ ಉದ್ಯಮ ನಡೆಸುವವರಿಗೆ ಬಲವಾದ ಪೆಟ್ಟು ನೀಡಿದೆ. ಇಂಧನ ಬೆಲೆ ಏರಿಕೆಯಿಂದ ತಪ್ಪಿಸೊಕೊಳ್ಳಲು ಹೋಟೆಲ್​ ಖಾದ್ಯಗಳ ಬೆಲೆಯನ್ನು ಏರಿಸಲು ಮುಂದಾಗಿದ್ದಾರೆ.

ಮುಂದಿನ ವಾರದಿಂದ ಶೇ.10 ರಿಂದ 15ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದ್ದು ಜೇಬು ತುಂಬ ದುಡ್ಡು ತೆಗೆದುಕೊಂಡು ಹೋಗಿದಿದ್ರೆ ಹೊಟ್ಟೆ ತುಂಬೊಲ್ಲ ಎನ್ನವ ಪರಿಸ್ಥಿತಿ ನಿರ್ಮಾಣವಾಗಿದೆ. ದೀಪಾವಳಿ ಮುಗಿದ ಬಳಿಕವೇ ಎಲ್ಲ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡಲು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದಿಂದ ನಿರ್ಧಾರ ಕೈಗೊಳ್ಳಲಾಗಿದೆ.

 ಬೆಲೆ ಏರಿಕೆಗೆ ಕಾರಣಗಳೇನು..?

  • ನಿರಂತರವಾಗಿ ಏರಿಕೆಯಾಗ್ತಿರೊ ವಾಣಿಜ್ಯ ಅಡುಗೆ ಅನಿಲ
  • ದಿನಸಿ ಸಾಮಾಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲು
  • ಅಡುಗೆ ಎಣ್ಣೆಯ ಬೆಲೆವೂ ದುಬಾರಿಯಾಗಿದೆ
  • ಕಳೆದ 2 ವರ್ಷಗಳಿಂದ ಯಾವುದೇ ಊಟ, ತಿಂಡಿ, ಟೀ, ಕಾಫೀ ಏರಿಕೆ ಮಾಡಿಲ್ಲ
  • 1794ಕ್ಕೆ ಸಿಗಬೇಕಿದ್ದ 19 ಕೆ.ಜಿ ತೂಕದ ವಾಣಿಜ್ಯ ಸಿಲೆಂಡರ್ ದರ 2 ಸಾವಿರ ಗಡಿ‌ದಾಟಿದೆ

ಯಾವ ಯಾವ ತಿಂಡಿಯ ದರ ಎಷ್ಟೆಷ್ಟಿತ್ತು, ಈಗ ಎಷ್ಟಾಗುತ್ತೆ..?

  • ಮಸಾಲೆ ದೋಸೆ 65 ರಿಂದ 75ರೂ.ಗೆ ಏರಿಕೆ
  • ಇಡ್ಲಿ, ವಡೆ 35-40ರೂ. ಗೆ ಏರಿಕೆ
  • ಕಾಫೀ, ಟೀ ಬೆಲೆ 15 ರಿಂದ 20ರೂ. ಗೆ ಏರಿಕೆ
  • ಚೌಚೌ ಬಾತ್ 60 ರಿಂದ 70ರೂ. ಗೆ ಏರಿಕೆ
  • ಸೌಥ್ ಇಂಡಿಯನ್ ಊಟ 85 ರಿಂದ 95ರೂ. ಗೆ ಏರಿಕೆ
  • ರೈಸ್ ಬಾತ್ 40 ರಿಂದ 50ರೂ. ಗೆ ಹೆಚ್ಚಳ
  • ರವಾ ಇಡ್ಲಿ 40 ರಿಂದ 45ರೂ. ಗೆ ಏರಿಕೆ
  • ಅಕ್ಕಿ ರೊಟ್ಟಿ 45-50ರೂ. ಗೆ ಏರಿಕೆ
  • ಪ್ರೈಡ್ ರೈಸ್ 100 ರಿಂದ 110ರೂ.ಗೆ ಕ್ಕೆ ಏರಿಕೆ
  • ಗೋಬಿ ಮಂಚೂರಿ ಒಂದು ಪ್ಲೇಟಿಗೆ 100 ರಿಂದ 110ರೂ. ಗೆ ಕ್ಕೆ ಏರಿಕೆ
  • ಪನ್ನೀರ್ ಮಂಚೂರಿ 110 ರಿಂದ 120ರೂ. ಗೆ ಹೆಚ್ಚಳ
  • ಒಂದು ಪ್ಲೇಟ್ ಪೂರಿ 65 ರಿಂದ 70ರೂ. ಗೆ ಏರಿಕೆ

ದರ್ಶಿನಿ ಹೋಟೆಲ್ ಗಳಲ್ಲಿ ಶೇ.5 ರಿಂದ 10ರಷ್ಟು.  ರೆಸ್ಟೊರೆಂಟ್ ಗಳಲ್ಲೂ ಸಹ ಶೇ.5 ರಿಂದ 10ರಷ್ಟು. ಸೆಲ್ಫ್ ಸರ್ವೀಸ್  ಹೋಟೇಲ್​ಗಳ ಆಹಾರದ ಬೆಲೆಯಲ್ಲಿ ಶೇ.5 ರಿಂದ 10 ರಷ್ಟು ಏರಿಕೆ ಮಾಡೋದಾಗಿ ಕರ್ನಾಟಕ ಹೋಟೆಲ್ ಮಾಲೀಕರ ಸಂಘದ ಸದಸ್ಯ ಕೃಷ್ಣರಾಜ್ ಮಾಹಿತಿ ನೀಡಿದ್ದಾರೆ.

News First Live Kannada


Leave a Reply

Your email address will not be published. Required fields are marked *