ತೈವಾನ್​ಗೆ ರಕ್ತಚಂದನ ಕಳ್ಳಸಾಗಾಟ; ಬೆಂಗಳೂರಲ್ಲಿ 2.4 ಕೋಟಿ ಮೌಲ್ಯದ ಮಾಲು ಸೀಜ್..!


ತೈವಾನ್‌ಗೆ ಕಳ್ಳ ಸಾಗಣೆ ಮಾಡಲು ಸಿದ್ಧಪಡಿಸಲಾಗಿದ್ದ ರಕ್ತ ಚಂದನ ತುಂಡುಗಳನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, 2.4 ಕೋಟಿ ರೂಪಾಯಿ ಮೌಲ್ಯದ 4.82 ಟನ್ ರಕ್ತಚಂದನ ವಶಕ್ಕೆ ಪಡೆಯಲಾಗಿದೆ. ಪ್ಲೈವುಡ್ ಬಾಕ್ಸ್​ನಲ್ಲಿ ರಕ್ತಚಂದನದ ತುಂಡುಗಳನ್ನು ಅಡಗಿಸಿಟ್ಟು, ವೈಟ್ ಫೀಲ್ಡಿನ ಕಂಟೇನರ್ ಡಿಪೋದಲ್ಲಿ ಇರಿಸಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಕಸ್ಟಮ್ಸ್​​ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

News First Live Kannada


Leave a Reply

Your email address will not be published. Required fields are marked *